ಮತ್ತೆ ಏರಿಕೆ ಕಂಡ ತೈಲ ಬೆಲೆ; 12 ದಿನದಲ್ಲಿ 7.20 ರೂ. ಏರಿಕೆ ಕಂಡ ಪೆಟ್ರೋಲ್-ಡೀಸಲ್ ದರ
Team Udayavani, Apr 2, 2022, 9:12 AM IST
ಹೊಸದಿಲ್ಲಿ: ದೇಶದಲ್ಲಿ ಇಂದು ಮತ್ತೆ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ಮತ್ತೆ ಪ್ರತಿ ಲೀಟರ್ ಗೆ 80 ಪೈಸೆ ಏರಿಕೆಯಾಗಿದ್ದು, ಕಳೆದ 12 ದಿನದಲ್ಲಿ 7.20 ರೂ. ಹೆಚ್ಚಳವಾದಂತಾಗಿದೆ.
ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ 101.81 ರೂ ಇದ್ದ ಪೆಟ್ರೋಲ್ ದರವು ಇಂದು 102.61 ರೂ. ಆದರೆ, ಡೀಸೆಲ್ ದರಗಳು ಲೀಟರ್ಗೆ 93.07 ರೂ. ರಿಂದ 93.87 ರೂ.ಗೆ ಏರಿಕೆಯಾಗಿದೆ.
ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮದ ಬಳಿಕ ಮಾರ್ಚ್ 22 ರಂದು ಮೊದಲ ಬಾರಿಗೆ ತೈಲ ಬೆಲೆ ಏರಿಕೆಯಾಗಿತ್ತು. ನಂತರ 12 ದಿನದಲ್ಲಿ 10 ಬಾರಿಗೆ ದರ ಹೆಚ್ಚಳವಾಗಿದೆ. ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ ಮತ್ತು ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.
ಇದನ್ನೂ ಓದಿ:ಅಂಕೆ ತಪ್ಪಿದ ಲಂಕೆ; ಭದ್ರತಾ ಪಡೆಗಳಿಗೆ ಅಧಿಕಾರ ನೀಡಿ ತುರ್ತು ಪರಿಸ್ಥಿತಿ ಘೋಷಿಸಿದ ಶ್ರೀಲಂಕಾ
ಒಟ್ಟಾರೆ, ಈ 12 ದಿನದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 7.20 ರೂಪಾಯಿಯಷ್ಟು ಏರಿಕೆಯಾಗಿದೆ.
ಬೆಂಗಳೂರಿನಲ್ಲೂ ಇಂದು ತೈಲಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 84 ಪೈಸೆ ಹೆಚ್ಚಳವಾಗಿದ್ದರೆ, ಪ್ರತಿ ಲೀಟರ್ ಡೀಸೆಲ್ ಗೆ 78 ಪೈಸೆ ಏರಿಕೆಯಾಗಿದೆ. ಶುಕ್ರವಾರ ತೈಲೆ ಬೆಲೆ ಹೆಚ್ಚಳವಾಗಿರಲಿಲ್ಲ.
ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 108.14 ರೂ ಇದ್ದರೆ, ಪ್ರತಿ ಲೀಟರ್ ಡೀಸೆಲ್ ಗೆ 92.05 ರೂ ಇದೆ.