ಅಮೇಜಾನ್ ನಿಂದ ಬೇಸಿಗೆ ಅಂಗವಾಗಿ ‘ಹೋಂ ಶಾಪಿಂಗ್ ಸ್ಪ್ರೀ’; ವಿಶೇಷ ಆಫರ್ ಗಳು ಲಭ್ಯ
Team Udayavani, Apr 7, 2022, 3:50 PM IST
ಬೆಂಗಳೂರು: ಅಮೆಜಾನ್. ಇನ್ ನಲ್ಲಿ ಬೇಸಿಗೆ ಅಂಗವಾಗಿ ಇಂದಿನಿಂದ ಏ.10ರವರೆಗೆ ಹೋಮ್ ಶಾಪಿಂಗ್ ಸ್ಪ್ರೀ ವಿಶೇಷ ಆಫರ್ ಗಳು ಗ್ರಾಹಕರಿಗೆ ಲಭ್ಯವಿದೆ.
ಇದರಲ್ಲಿ ಗೃಹೋಪಯೋಗಿ ವಸ್ತುಗಳು, ಅಡುಗೆಮನೆ ಸಲಕರಣೆಗಳು, ಪೀಠೋಪಕರಣಗಳು, ಆಟಿಕೆಗಳು ಮತ್ತಿತರ ಉಪಕರಣಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳು ಮತ್ತು ಡೀಲ್ಗಳು ಲಭ್ಯವಿವೆ. ಗ್ರಾಹಕರು ತಮ್ಮ ಮನೆಯಿಂದಲೇ ಬೇಸಿಗೆಯ ಅಗತ್ಯ ವಸ್ತುಗಳ ಖರೀದಿ ಮಾಡಬಹುದು ಮತ್ತು ಕ್ಯಾಶ್ಬ್ಯಾಕ್, ಕೈಗೆಟುಕುವ ಬೆಲೆಯಲ್ಲಿ ಬಡ್ಡಿ ರಹಿತ ಇಎಂಐ, ವಿನಿಮಯ ಕೊಡುಗೆಗಳು ಮತ್ತು ಮೊದಲ ಆರ್ಡರ್ ಮೇಲೆ ಭಾರತದಲ್ಲಿ ಎಲ್ಲಿಯಾದರೂ ಉಚಿತ ಡೆಲಿವರಿ ಮೂಲಕ ಉತ್ತಮ ಡೀಲ್ಗಳನ್ನು ಪಡೆಯಬಹುದು.
ಇದನ್ನೂ ಓದಿ:ವೊಡಾಫೋನ್ ಗ್ರಾಹಕರಿಗೆ ಉಚಿತ ಜ್ಯೋತಿಷ್ಯ ಸಮಾಲೋಚನೆ!
“ಹೋಮ್ ಶಾಪಿಂಗ್ ಸ್ಪ್ರೀ” ಸಮಯದಲ್ಲಿ, ಗ್ರಾಹಕರು ಸ್ಯಾಮ್ಸಂಗ್, ಎಲ್ಜಿ, ವಿಪ್ರೊ, ಹೋಮ್ ಸೆಂಟರ್, ಡ್ಯೂರೋಫ್ಲೆಕ್ಸ್, ದಿ ಸ್ಲೀಪ್ ಕಂಪನಿ, ಬಾಷ್, ಉಷಾ, ಪಿಜನ್ ಮತ್ತು ಇನ್ನೂ ಹೆಚ್ಚಿನ ಬ್ರಾಂಡ್ಗಳಿಂದ ಹೆಚ್ಚಿನ ರಿಯಾಯಿತಿ ಪಡೆಯಬಹುದು. ಸಿಟಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳನ್ನು ಬಳಸಿಕೊಂಡು ಕನಿಷ್ಟ ರೂ. 5000 ವಹಿವಾಟಿನ ಮೇಲೆ ಗ್ರಾಹಕರು ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.
ಹೋಮ್ ಶಾಪಿಂಗ್ ಸ್ಪ್ರೀ ಆಫರ್ಗಳು ಮತ್ತು ಡೀಲ್ಗಳು ಏಪ್ರಿಲ್ 10ರವರೆಗೆ ಲಭ್ಯವಿರುತ್ತವೆ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ