ಒತ್ತುವರಿ, ತ್ಯಾಜ್ಯ ನಿವಾರಿಸದಿದ್ದರೆ ಸಮಸ್ಯೆ

ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ರಾಜಕಾಲುವೆಗಳು

Team Udayavani, Apr 8, 2022, 10:24 AM IST

mulki

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಸುಮಾರು 80 ಕಿ.ಮೀ. ರಸ್ತೆಯಲ್ಲಿ ಸುಮಾರು 15 ಕಿ.ಮೀ.ಗಿಂತ ಹೆಚ್ಚು ದೂರಕ್ಕೆ ರಾಜ ಕಾಲುವೆಗಳು ಹರಿಯುತ್ತವೆ. ಸುಮಾರು 160ಕ್ಕೂ ಹೆಚ್ಚು ತೋಡುಗಳನ್ನು ಕಾಣಬಹುದಾಗಿದೆ. ಎಲ್ಲ ತೋಡುಗಳ ನಿರ್ವಹಣೆ ಅಸಮರ್ಪಕವಾಗಿದ್ದು, ಹೂಳು ತುಂಬಿದೆ. ಮಳೆ ನೀರು ಸರಿಯಾಗಿ ಹರಿಯಲು ಅಸಾಧ್ಯವಾಗುವಂಥ ಸ್ಥಿತಿ ಇದೆ. ಕೂಡಲೇ ಹೂಳೆತ್ತುವ ಕಾರ್ಯವನ್ನು ಬಿರುಸಿನಿಂದ ಮಾಡಬೇಕಿದೆ. ಇಲ್ಲವಾದರೆ ಮಳೆ ಸುರಿದ ಕೂಡಲೇ ಕೃತಕ ನೆರೆ ಸೃಷ್ಟಿಯಾಗಬಹುದು.

ರಾಜಕಾಲುವೆಯ ಬಳಿ ಇರುವ ಮನೆಗಳು ಕಾಲುವೆ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದು ಈ ಸಮಸ್ಯೆ ಬೆಳೆಯಲು ಮುಖ್ಯ ಕಾರಣ.

ಇಲ್ಲಿಯ ಬಪ್ಪನಾಡು ದೇವಸ್ಥಾನ ಬಳಿಯ ಕೊಪ್ಪಲ ಕೆರೆಯ ಬಳಿಯ ರಾಜ ಕಾಲುವೆಯ ಬಹುತೇಕ ಭಾಗ ಒತ್ತುವರಿಯಾಗಿದೆ. ಒಂದು ಭಾಗದಲ್ಲಿ ಆವರಣ ಗೋಡೆ ಇದ್ದರೆ, ಮತ್ತೂಂದು ಭಾಗದಲ್ಲಿ ಆವರಣ ಗೋಡೆ ಎಲ್ಲವನ್ನೂ ಮುಗಿಸಿ ಹಾಕಿದೆ.

ನಗರ ಪಂಚಾಯತ್‌ ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಿ ಕ್ರಮ ಕೈಗೊಳ್ಳಬೇಕಿದೆ. ಮಳೆ ಬಂದಾಗ ಕೃತಕ ನೆರೆಯಂತಹ ಗಂಡಾಂತರದಿಂದ ಪಾರಾ ಗಲು ಈ ಕ್ರಮ ಅತೀ ಅಗತ್ಯವಾಗಿದೆ.

ಪಂಚಮಹಲ್‌ ಬಳಿಯ ರಾಜಕಾಲು ವೆಯಲ್ಲಿ ಅತೀ ದೂರದಿಂದ ಬಂದ ಮಳೆ ನೀರು ಹಾದುಹೋಗುತ್ತದೆ. ಅದೇ ರೀತಿ ಕಾರ್ನಾಡು ಹರಿಹರ ಕ್ಷೇತ್ರದ ಬಳಿಯ ಧರ್ಮಸ್ಥಾನ ರಸ್ತೆಯ ಸಮೀಪದಲ್ಲೂ ಇರುವ ರಾಜಕಾಲುವೆ ಬಹಳಷ್ಟು ದೂರದ ನೀರನ್ನು ನದಿಗೆ ಸಾಗಿಸುವ ಮಾರ್ಗವಾಗಿದೆ.

ಒಳಚರಂಡಿ ನಿರ್ಮಾಣವಾಗಲಿ

ಮೂಲ್ಕಿಯಲ್ಲಿ ಒಳ ಚರಂಡಿ ವ್ಯವಸ್ಥೆ ಕೆಲವು ತಾಂತ್ರಿಕ ಕಾರಣಗಳಿಂದ ಇನ್ನೂ ಪೂರ್ಣಗೊಳ್ಳುವ ಹಂತಕ್ಕೆ ಬಂದಂತಿಲ್ಲ. ಬಹು ಮಹಡಿಯ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳು ಬೆಳೆದು ನಿಂತಿವೆ. ಇಲ್ಲಿಗೆ ಅತೀ ಅಗತ್ಯವಾಗಿರುವ ಒಳಚರಂಡಿ ವ್ಯವಸ್ಥೆ ನಿರ್ಮಾಣವಾಗಿ ನೀರು ಹರಿಯಲಾರಂಭಿಸಿದರೆ ಮಾತ್ರ ಮೂಲ್ಕಿಯ ಜನರು ನೆಮ್ಮದಿಯಿಂದ ಇರಲು ಸಾಧ್ಯ.

ಈಗಾಗಲೇ ಚರಂಡಿಯ ಕಾಮಗಾರಿಯನ್ನು ಆರಂಭಿ ಸಿರುವ ನಗರ ಪಂಚಾಯತ್‌ ಗೆ ಸವಾಲಾಗಿರುವುದು ಜನರು ಕಸ ಕಡ್ಡಿ ಅಥವಾ ಕಟ್ಟಡ ತ್ಯಾಜ್ಯವನ್ನು ರಸ್ತೆ ಬದಿಗೆ ಸುರಿಯುವುದು ಮತ್ತು ಚರಂಡಿ ಸರಿಪಡಿಸಲು ಮರೆತು ಹೋಗಿರುವುದು. ನಗರ ಪಂಚಾಯತ್‌ನ ಜತೆಗೆ ಸಾರ್ವಜನಿಕರು ಚರಂಡಿ ಸಮಸ್ಯೆ ಬಿಗಡಾಯಿಸದಂತೆ ಸಹಕರಿಸುವುದು ಅತೀ ಅಗತ್ಯವಾಗಿದೆ. ಈಗಾಗಲೇ ಕೆಲವೆಡೆ ರಸ್ತೆ ಬದಿಯಲ್ಲಿ ಕಟ್ಟಡ ಸಾಮಗ್ರಿ ಸಂಗ್ರಹಿಸಿರುವುದನ್ನು ತೆರವುಗೊಳಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸವನ್ನು ಕೂಡ ನಗರ ಪಂಚಾಯತ್‌ ಮಾಡಿದೆ. ಈಗಾಗಲೇ ನಗರ ಪಂಚಾಯತ್‌ ವ್ಯಾಪ್ತಿಯ ಹೆಚ್ಚಿನ ರಸ್ತೆಗಳ ಚರಂಡಿಗಳ ಸ್ವತ್ಛತೆಯ ಕೆಲಸವನ್ನು ಆರಂಭಿಸಲಾಗಿದೆ. ಇತರ ಹಲವೆಡೆ ತೋಡುಗಳನ್ನು ಸರಿಪಡಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕಿದೆ.

ಸೂಕ್ತ ಕ್ರಮ

ಸಾರ್ವಜನಿಕರು ಕಾಲುವೆಯ ಜಾಗವನ್ನು ಅತಿಕ್ರಮಿಸಿದರೆ ಸೂಕ್ತ ಕ್ರಮ ಜರಗಿಸಿ ತೆರವುಗೊಳಿಸಲು ಮುಂದಾಗುತ್ತೇವೆ. ಒಂದು ವೇಳೆ ಚರಂಡಿಯಲ್ಲಿ ನೀರು ಹರಿದು ಹೋಗಲು ಅಗತ್ಯ ಇರುವ ಜಾಗ ಯಾರದೇ ಆಗಿದ್ದರೂ ಅದನ್ನು ಸಾರ್ವಜನಿಕ ಉದ್ದೇಶಕ್ಕಾಗಿ ವಶಪಡಿಸಿಕೊಳ್ಳುವ ನಿಯಮವನ್ನು ಕೂಡ ನಗರ ಪಂಚಾಯತ್‌ ಬಳಸಿಕೊಳ್ಳಲು ಸಾಧ್ಯವಿದೆ.  –ಪಿ. ಚಂದ್ರ ಪೂಜಾರಿ, ಮುಖ್ಯಾಧಿಕಾರಿ, ಮೂಲ್ಕಿ ನಗರ ಪಂಚಾಯತ್‌

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.