ಕ್ರಿಕೆಟ್‌ನತ್ತ ನನ್ನ ಒಲವು ಹೋಗದಿದ್ದರೆ ನಾನು ಸೈನಿಕನಾಗುತ್ತಿದ್ದೆ: ರೋವ್ಮನ್ ಪೊವೆಲ್‌


Team Udayavani, May 11, 2022, 5:10 PM IST

ಕ್ರಿಕೆಟ್‌ನತ್ತ ನನ್ನ ಒಲವು ಹೋಗದಿದ್ದರೆ ನಾನು ಸೈನಿಕನಾಗುತ್ತಿದ್ದೆ: ರೋವ್ಮನ್ ಪೊವೆಲ್‌

ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್‌ನ ಆಲ್‌ರೌಂಡರ್‌ ಆಗಿರುವ ರೋವ್ಮನ್ ಪೊವೆಲ್‌ ತಮ್ಮ ಜೀವನ ಪ್ರಯಾಣದ ಕಥೆಯನ್ನು ತೆರೆದಿಟ್ಟಿದ್ದಾರೆ.

ಬಡ ಕುಟುಂಬದಿಂದ ಬಂದ ಅವರು ಕ್ರಿಕೆಟ್‌ ಆಟದ ಕಡೆ ಒಲವು ತೋರಿಸಿದ ಕಾರಣವನ್ನು ತಿಳಿಸಿದ್ದಾರೆ. ಕುಟುಂಬವನ್ನು ಬಡತನದಿಂದ ಹೊರತರುವುದು ಅವರ ಬಾಲ್ಯದ ಕನಸಾಗಿತ್ತು ಮತ್ತು ಅದಕ್ಕಾಗಿ ಕ್ರಿಕೆಟ್‌ನತ್ತ ನನ್ನ ಒಲವು ಹೋಗದಿದ್ದರೆ ಸೈನಿಕನಾಗುತ್ತಿದ್ದೆ ಎಂದವರು ಬಹಿರಂಗಪಡಿಸಿದರು.

ರೋವ್ಮನ್ ಪೊವೆಲ್‌ ಡೆಲ್ಲಿ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಅವರು ತಂಡದ ಪವರ್‌ ಹಿಟ್ಟರ್‌ ಆಗಿದ್ದಾರೆ. ಇಷ್ಟರವರೆಗಿನ ಕೆಲವು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.

ಡೆಲ್ಲಿ ಕ್ಯಾಪಿಟಲ್ಸ್‌ನ ಪೊಡ್‌ಕಾಸ್ಟ್‌ನಲ್ಲಿ ಪೊವೆಲ್‌ ತನ್ನ ಭಾವನಾತ್ಮಕ ಕಥೆಯನ್ನು ಹಂಚಿಕೊಂಡರು. ನಾನು ಜಮೈಕಾದ ಪುಟ್ಟ ಗ್ರಾಮದಿಂದ ಬಂದಿದ್ದೇನೆ. ಅಲ್ಲಿರುವ ಹೆಚ್ಚಿನೆಲ್ಲ ಕುಟುಂಬಗಳಿಗೆ ಕೃಷಿ ಆದಾಯದ ಮೂಲವಾಗಿದೆ. ಬಾಲ್ಯದ ದಿನಗಳಲ್ಲಿರುವಾಗಲೇ ನನಗೊಂಡು ಕನಸು ಇತ್ತು. ಕ್ರಿಕೆಟ್‌ ಅಥವಾ ಶಿಕ್ಷಣದ ಮೂಲಕ ಕುಟುಂಬವನ್ನು ಬಡತನದಿಂದ ದೂರ ಮಾಡುವುದು ನನ್ನ ಕನಸ್ಸಾಗಿತ್ತು.

ದೇವರ ಕೃಪೆಯಿಂದ ಕ್ರಿಕೆಟ್‌ ರಂಗದಲ್ಲಿ ನಾನು ಚೆನ್ನಾಗಿ ನಿರ್ವಹಣೆ ನೀಡುತ್ತಿದ್ದೇನೆ. ನಾನು ವೃತ್ತಿಪರ ಕ್ರಿಕೆಟಿಗನಾಗುವ ಮೊದಲು ಸೈನಿಕನಾಗುವ ಬಯಕೆ ಹೊಂದಿದ್ದೆ. ಕ್ರಿಕೆಟ್‌ ನನ್ನನ್ನು ಹಿಡಿಯದಿದ್ದರೆ ನಾನೀಗ ಸೈನಿಕನಾಗುತ್ತಿದ್ದೆ ಎಂದವರು ಹೇಳಿದರು.

ಕುಟುಂಬದ ಸದಸ್ಯ ಫ್ರಾಂಚೈಸಿ ಜತೆಗೆ ಯಾವ ರೀತಿ ಸಮಯ ಕಳೆಯುತ್ತಿದ್ದೆ ಎಂಬ ವಿಷಯದ ಬಗ್ಗೆ ಮಾತನಾಡಿದ ಪವರ್‌ ಹಿಟ್ಟರ್‌ ಪೊವೆಲ್‌ ಅವರು ತನ್ನನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.

ಆಟಗಾರನೋರ್ವನಿಗೆ ತಂಡದಲ್ಲಿ ಒಳ್ಳೆಯ ವಾತಾವರಣದ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು ಇದು ಆಟಗಾರ ಶ್ರೇಷ್ಠ ನಿರ್ವಹಣೆ ನೀಡಲು ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದನ್ನು ಮನದಟ್ಟು ಮಾಡಿದರು.
ಬಹಳಷ್ಟು ದೂರದ ಕೆರಿಬಿಯನ್‌ನಿಂದ ಬಂದಿರುವ ನನಗೆ ತವರಿನಲ್ಲಿ ಇರುವಂತಹ ಅನುಭವ ಸಿಗುವುದು ಅತ್ಯಗತ್ಯವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ನನ್ನನ್ನು ಅವರ ಕುಟುಂಬದ ಸದಸ್ಯರೆಂಬುದನ್ನು ಒಪ್ಪಿಕೊಂಡಿದೆ ಮತ್ತು ತವರಿನಲ್ಲಿ ಇದ್ದೇನೆ ಎಂಬ ಭಾವನೆಯಾಗುತ್ತಿದೆ ಎಂದ ಅವರು ಈ ಭಾವನೆಯೇ ಶ್ರೇಷ್ಠ ನಿರ್ವಹಣೆ ನೀಡಲು ಪ್ರೇರಕ ಶಕ್ತಿಯಾಗಿದೆ ಎಂದರು.

ರಿಷಬ್‌ ಪಂತ್‌ ಅವರ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮೊದಲ ದಿನದಿಂದ ಇಲ್ಲಿಯತನಕ ಅವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಮತ್ತು ಕೆರಿಬಿಯನ್‌ ಆಟಗಾರರೆಲ್ಲರೂ ಉತ್ತಮ ಆಟಗಾರರು ಎಂದು ಹೇಳುತ್ತ ಬಂದಿದ್ದಾರೆ ಎಂದರು.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.