ಕಿವುಡರ ಒಲಿಂಪಿಕ್ಸ್ ತಂಡ ಸದಸ್ಯರ ಜತೆ ಮೋದಿ ಸಂವಾದ
Team Udayavani, May 22, 2022, 1:27 AM IST
ಹೊಸದಿಲ್ಲಿ: ಬ್ರಝಿಲ್ನ ಕಾಕ್ಸಿಯಸ್ ಡು ಸಲ್ನಲ್ಲಿ ನಡೆದ ಕಿವುಡರ ಒಲಿಂಪಿಕ್ಸ್ನಲ್ಲಿ ತನ್ನ ಸರ್ವಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಭಾರತೀಯ ಕಿವುಡರ ಒಲಿಂಪಿಕ್ಸ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಆತಿಥ್ಯ ನೀಡಿದರಲ್ಲದೇ ಸಂವಾದ ನಡೆಸಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂವಾದದ ವೇಳೆ ಮಾತನಾಡಿದ ಮೋದಿ ಅವರು ಆ್ಯತ್ಲೀಟ್ಗಳು ದೇಶಕ್ಕೆ ಹೆಮ್ಮೆ ಮತ್ತು ಕೀರ್ತಿ ತಂದಿದ್ದಾರೆ. ನಿಮ್ಮ ಸಾಧನೆಯಿಂದಾಗಿ ನಡೆದ ಈ ಸಂವಾದವನ್ನು ನಾನೆಂದೂ ಮರೆಯುವುದಿಲ್ಲ ಎಂದರು. ಆ್ಯತ್ಲೀಟ್ಗಳು ತಮ್ಮ ಅನುಭವವನ್ನು ಮೋದಿ ಜತೆ ಹಂಚಿಕೊಂಡರು. ತನ್ನ ಅಧಿಕೃತ ನಿವಾಸದಲ್ಲಿ ಆ್ಯತ್ಲೀಟ್ಗಳಿಗೆ ಆತಿಥ್ಯ ನೀಡಿದ ಬಳಿಕ ನಿಮಗೆಲ್ಲರಿಗೂ ನನ್ನ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದರು.
ಭಾರತೀಯ ಕಿವುಡರ ಒಲಿಂಪಿಕ್ಸ್ ತಂಡವು ಒಟ್ಟಾರೆ 16 ಪದಕ ಗೆದ್ದ ಸಾಧನೆ ಮಾಡಿದೆ. 2017ರಲ್ಲಿ ಕೇವಲ 5 ಪದಕ ಜಯಿಸಿತ್ತು. ಬ್ರಝಿಲ್ನಲ್ಲಿ ಭಾರತೀಯ ತಂಡವು 11 ಕ್ರೀಡಾ ಸ್ಪರ್ಧೆಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದೆ. ಈ ಸಮಾರಂಭದಲ್ಲಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!