ಧ್ವಂಸವಾದ ಶಾಲೆಯ ಎದುರೇ ವಿದ್ಯಾರ್ಥಿನಿ ಫೋಸು! ಫೋಟೋ ವೈರಲ್
Team Udayavani, Jun 10, 2022, 6:20 AM IST
ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸಲಾರಂಭಿಸಿ 100ಕ್ಕೂ ಅಧಿಕ ದಿನಗಳು ಕಳೆದಿವೆ. ಯುದ್ಧದೊಂದಿಗೆ ಜನರ ಪ್ರಾಣದ ಜತೆ ಅದೆಷ್ಟೋ ಮಂದಿಯ ಕನಸುಗಳೂ ನಶಿಸಿ ಹೋಗಿರುವುದು ಸುಳ್ಳಲ್ಲ.
ರಷ್ಯಾದ ದಾಳಿಗೂ ಮೊದಲು ಖಾರ್ಕಿವ್ನ ಶಾಲೆಯಲ್ಲಿ ಹೈಸ್ಕೂಲ್ನ ಕೊನೆಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯರು ತಮ್ಮ ಗ್ರಾಜುಯೇಶನ್ ದಿನಕ್ಕೆಂದು ಬಣ್ಣ ಬಣ್ಣದ ಗೌನ್ಗಳನ್ನು ಸಿದ್ಧಮಾಡಿಟ್ಟುಕೊಂಡಿದ್ದರು. ಆದರೆ ಅಷ್ಟರಲ್ಲಾಗಲೇ ರಷ್ಯಾ ದಾಳಿ ಮಾಡಿದ್ದರಿಂದಾಗಿ ಶಾಲೆ ಅಕ್ಷರಶಃ ಧ್ವಂಸವಾಗಿದೆ.
ಆ ನೋವಿನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಇತ್ತೀಚೆಗೆ ತನ್ನ ಗೌನ್ ಧರಿಸಿ, ಧ್ವಂಸವಾಗಿರುವ ಶಾಲೆಯ ಎದುರೇ ಫೋಟೋ ತೆಗೆಸಿಕೊಂಡಿದ್ದಾಳೆ. ಈ ಫೋಟೋವನ್ನು ಲಂಡನ್ನಲ್ಲಿರುವ ಆಕೆಯ ಅತ್ತೆ ಅನ್ನಾ ಎಫಿಶೆವಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಫೋಟೋ ವೈರಲ್ ಆಗಿದೆ.