ಕಾಮನ್ವೆಲ್ತ್ ಗೇಮ್ಸ್ ಆ್ಯತ್ಲೀಟ್ಗಳಿಗೆ ಬೀಳ್ಕೊಡುಗೆ
Team Udayavani, Jul 8, 2022, 6:45 AM IST
ಹೊಸದಿಲ್ಲಿ: ಮುಂಬರುವ ಕಾಮನ್ವೆಲ್ತ್ ಗೇಮ್ಸ್ಗಾಗಿ ಆಯ್ಕೆಯಾದ ಭಾರತದ 215 ಕ್ರೀಡಾಪಟುಗಳಿಗೆ ಗುರುವಾರ ಬೀಳ್ಕೊಡುಗೆ ಸಮಾರಂಭ ಏರ್ಪಟ್ಟಿತು. ಜತೆಗೆ ನೂತನ ಜೆರ್ಸಿಯನ್ನೂ ಬಿಡುಗಡೆಗೊಳಿಸಲಾಯಿತು.
ಇದು “ಲಿಂಗ ಸಮಾನತೆ’ಗೊಂದು ಉತ್ತಮ ನಿದರ್ಶನ ಎಂಬುದಾಗಿ ಐಒಎ ಉಸ್ತುವಾರಿ ಅಧ್ಯಕ್ಷ ಅನಿಲ್ ಖನ್ನಾ ಹೇಳಿದರು. 108 ಮಂದಿ ಪುರುಷರು ಹಾಗೂ 107 ಮಂದಿ ವನಿತಾ ಕ್ರೀಡಾಳುಗಳು ಈ ತಂಡದಲ್ಲಿದ್ದಾರೆ. ಸಹಾಯಕ ಸಿಬಂದಿ, ಅಧಿಕಾರಿಗಳೂ ಸೇರಿದಂತೆ ತಂಡದ ಗಾತ್ರ 322ಕ್ಕೆ ವಿಸ್ತರಿಸಲ್ಪಡಲಿದೆ. ಒಟ್ಟು 16 ಕ್ರೀಡಾಕೂಟಗಳಲ್ಲಿ ಭಾರತ ಪಾಲ್ಗೊಳ್ಳಲಿದೆ. ಭಾರತದ ಅತೀ ದೊಡ್ಡ ತಂಡವೆಂದರೆ ಹಾಕಿಯದು. ಇಲ್ಲಿ ತಲಾ 36 ಮಂದಿ ಸದಸ್ಯರಿದ್ದಾರೆ.
ಇದೇ ಮೊದಲ ಸಲ ಅಳವಡಿಸಲಾದ ವನಿತಾ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾರತ ತಂಡ ಕಾಣಿಸಿಕೊಳ್ಳಲಿದೆ. ಅಕ್ವೆಟಿಕ್ಸ್, ಬ್ಯಾಡ್ಮಿಂಟನ್, ಟಿಟಿ, ಬಾಕ್ಸಿಂಗ್, ಸೈಕ್ಲಿಂಗ್, ಲಾನ್ ಬೌಲ್ಸ್, ಸ್ಕ್ವಾಶ್, ಜೂಡೋ ಮತ್ತು ಪ್ಯಾರಾ ನ್ಪೋರ್ಟ್ಸ್ಗಳೆಲ್ಲ ಭಾರತ ಸ್ಪರ್ಧಿಸಲಿರುವ ಪ್ರಮುಖ ಕ್ರೀಡೆಗಳಾಗಿವೆ. ಗೇಮ್ಸ್ ಆ್ಯತ್ಲೆಟಿಕ್ಸ್ ಇತಿಹಾಸದಲ್ಲಿ ಈವರೆಗೆ ಕೇವಲ 28 ಪದಕ ಗೆದ್ದಿರುವ ಭಾರತ, ಬರ್ಮಿಂಗ್ಹ್ಯಾಮ್ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇರಿಸಲಾಗಿದೆ. ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸುವ ಸಾಧ್ಯತೆ ಹೆಚ್ಚಿದೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮುಖ್ಯ ಅತಿಥಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ