ಹೊಸಬರ ‘ಗಿರ್ಕಿ’ಗೆ ಮೆಚ್ಚುಗೆ
Team Udayavani, Jul 10, 2022, 2:58 PM IST
ಜುಲೈ 8ರಂದು ಬರೋಬ್ಬರಿ ಒಂಭತ್ತು ಸಿನಿಮಾಗಳು ಬಿಡುಗಡೆಯಾಗಿದ್ದವು. ಹೀಗೆ ಬಿಡುಗಡೆಯಾದ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಅದರಲ್ಲಿ “ಗಿರ್ಕಿ’ ಕೂಡಾ ಒಂದು.
ವೀರೇಶ್ ಪಿ.ಎಂ. ನಿರ್ದೇಶನದ ಈ ಚಿತ್ರಕ್ಕೆ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೆ ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ವಿಲೋಕ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ವಿಶ್ವ ಕೂಡಾ ಪಾತ್ರವೊಂದನ್ನು ಮಾಡಿದ್ದಾರೆ. ಚಿತ್ರದಲ್ಲಿ ದಿವ್ಯ ಉರುಡುಗ ನಾಯಕಿಯಾಗಿ ನಟಿಸಿದ್ದಾರೆ.
“ಗಿರ್ಕಿ ಅಂದರೆ ಸುತ್ತಾಟ, ಒಂದು ತಿರುಗು ಎಂದು ಅರ್ಥ. ಕಥೆ ಸಸ್ಪೆನ್ಸ್-ಥ್ರಿಲ್ಲರ್, ಆ್ಯಕ್ಷನ್, ಕಾಮಿಡಿ , ಲವ್ ಎಲ್ಲಾ ಅಂಶಗಳ ಸುತ್ತ ನಮ್ಮ ಚಿತ್ರ ಸಾಗಿದೆ. ಎಲ್ಲಾ ಚಿತ್ರಗಳಲ್ಲೂ ಸಾಮಾನ್ಯವಾಗಿ ಒಂದು ಸನ್ನಿವೇಶ ಕಾಮಿಡಿ ಇದೆ ಅಂದರೆ ಚಿತ್ರ ಕಾಮಿಡಿ ಇದೆ ಎಂದು ಹೇಳುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಆರಂಭದಿಂದ ಕೊನೆಯವರೆಗೂ ಕಾಮಿಡಿ ಅಂಶಗಳು ಇರುವುದರಿಂದ ಪ್ರೇಕ್ಷಕ ಇಷ್ಟಪಟ್ಟು ನೋಡುತ್ತಿದ್ದಾನೆ ಎನ್ನುವುದು ಚಿತ್ರತಂಡದ ಮಾತು