ಗೌಳಿವಾಡಾಗಳಿಗೆ ಮೂಲಸೌಲಭ್ಯಕ್ಕೆ ಬದ್ಧ

ಗೌಳಿಗರ ಸಮಸ್ಯೆ ಆಲಿಸಿದ ಶಾಸಕ ನಿಂಬಣ್ಣವರ; ರಸ್ತೆ, ನೀರು, ಬೆಳಕಿನ ವ್ಯವಸ್ಥೆಯ ಭರವಸೆ

Team Udayavani, Jul 11, 2022, 6:24 PM IST

20

ಅಳ್ನಾವರ: ಹೊನ್ನಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಹಸಿರು ಸೊಬಗಿನ ಮಧ್ಯದಲ್ಲಿರುವ ಗೌಳಿಗರ ವಾಡಾಗಳಿಗೆ ಶಾಸಕ ಸಿ.ಎಂ. ನಿಂಬಣ್ಣವರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಮೂಲಸೌಲಭ್ಯ ಒದಗಿಸುವ ಭರವಸೆ ನೀಡಿದರು.

ನೂರಕ್ಕೂ ಅಧಿಕ ಗೌಳಿಗರ ವಾಸವಿರುವ ರೇಣುಕಾ ನಗರ ಗೌಳಿವಾಡಾ, ಲಿಂಗನಕೊಪ್ಪ ಹಾಗೂ ರೇಣುಕಾ ನಗರ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಇದೆ. ಕಳೆದ ಹಲವು ದಿನಗಳ ಹಿಂದೆ ಕ್ರೂರ ಪ್ರಾಣಿ ಚಿಕ್ಕ ಜಾನುವಾರುಗಳನ್ನು ಕೊಂದು ಹಾಕಿದೆ. ಕಾಡಿನಲ್ಲಿ ನಡೆದು ಮಕ್ಕಳು ಶಾಲೆಗೆ ಹೋಗಬೇಕು. ಲಿಂಗನಕೊಪ್ಪದಲ್ಲಿ ಸಾಕಷ್ಟು ಪುಟ್ಟ ಮಕ್ಕಳು ಇದ್ದು, ಅಂಗನವಾಡಿ ಕೇಂದ್ರ ತೆರೆಯಬೇಕು. ರಾತ್ರಿ ವೇಳೆ ವಿದ್ಯುತ್‌ ಕಡಿತ ಮಾಡುವುದರಿಂದ ಗೌಳಿಗರ ಬದುಕು ಕತ್ತಲಲ್ಲಿ ಮುಳುಗಿದೆ. ಮಕ್ಕಳಿಗೆ ಓದಲು ತೊಂದರೆ ಆಗಿದೆ ಎಂಬ ಅಳಲನ್ನು ಗ್ರಾಮಸ್ಥರು ತೊಡಿಕೊಂಡರು.

ಶಾಸಕ ನಿಂಬಣ್ಣವರ ಮಾತನಾಡಿ, ಗೌಳಿಗರು ಹೈನುಗಾರಿಕೆ ನಂಬಿ ಬದುಕು ಕಟ್ಟಿಕೊಂಡಿದ್ದು, ಹಲವರು ಕೃಷಿ ಮಾಡುತ್ತಿದ್ದಾರೆ. ಅವರ ಬದುಕು ಉತ್ತಮವಾಗಿರಲು ಕಡ್ಡಾಯವಾಗಿ ಎಲ್ಲ ಮ್ಕಕಳಿಗೆ ಶಿಕ್ಷಣ ನೀಡಬೇಕು. ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ರಸ್ತೆ, ಬೀದಿ ದೀಪ, ನೀರು ಮುಂತಾದ ಅಗತ್ಯ ಸೌಲಭ್ಯ ನೀಡಲಾಗುವುದು. ಸರ್ಕಾರ ಈಚೆಗೆ ಬೆಳಕು ಎಂಬ ವಿಶೇಷ ಯೋಜನೆ ಜಾರಿ ಮಾಡಿದೆ. ಪ್ರತಿ ಮನೆಗೂ ವಿದ್ಯುತ್‌ ಸಂಪರ್ಕ ಕೊಡಿಸುವ ಹಾಗೂ ಅಂಗನವಾಡಿ ಕೇಂದ್ರ ತೆರೆಯುವ ಪ್ರಯತ್ನ ಮಾಡುವೆ. ಸಮೀಪದ ಊರುಗಳಿಗೆ ವಿದ್ಯಾರ್ಥಿಗಳು ಹೋಗಲು ಶಾಲಾ ಸಮಯಕ್ಕೆ ಬಸ್‌ ವ್ಯವಸ್ಥೆ ಮಾಡಲಾಗುವುದು. ಸ್ಥಳೀಯ ಯುವಕರು ಕಲಿತವರು ಇದ್ದರೆ ಇಲ್ಲಿನ ಮಕ್ಕಳಿಗೆ ಅಕ್ಷರಜ್ಞಾನ ಧಾರೆ ಎರೆಯಲು ಮುಂದಾಗಬೇಕು. ಉಜ್ವಲ ಯೋಜನೆ ಗ್ಯಾಸ್‌ ವಿತರಣೆ, ಸರ್ಕಾರದ ಸಕಲ ಸವಲತ್ತುಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ಧುರೀಣ ಶಿವಾಜಿ ಡೊಳ್ಳಿನ, ಭರತೇಶ ಪಾಟೀಲ, ನಾಗಣ್ಣ ಬುಡರಕಟ್ಟಿ, ಗ್ರಾಪಂ ಸದಸ್ಯೆ ಲಕ್ಷ್ಮೀಬಾಯಿ ಪೋಡೆ, ಗಂಗಪ್ಪ ಬುಡರಕಟ್ಟಿ, ರಮೇಶ ಹೂಗಾರ, ಮುಕ್ತುಂ ಡೊನಸಾಲ್‌, ಭೀಮಪ್ಪ ಕ್ಷಾತ್ರತೇಜ, ಬಸಪ್ಪ ಚಿಕ್ಕಣ್ಣವರ, ಬಾಳು ಗಸ್ತೆ, ಅಪ್ಪು ದೊಂಡಿಬಾ ಗೌಳಿ, ರಾಯಪ್ಪ ಚಂಡಕಿ, ಪರಶುರಾಮ ಬಂಡಕಿ, ರಾಯಪ್ಪ ಸುರಗಟ್ಟಿ ಇನ್ನಿತರರಿದ್ದರು.

ಹೊನ್ನಾಪುರದಿಂದ ಸುಮಾರು ಏಳೆಂಟು ಕಿಮೀ ಅಂತರದಲ್ಲಿ ಅರಣ್ಯ ಪ್ರದೇಶದಲ್ಲಿ ಗೌಳಿ ಕುಟುಂಬದವರು ಕಳೆದ ಆರೇಳು ದಶಕಗಳಿಂದ ವಾಸವಿದ್ದು, ಸೌಲಭ್ಯಗಳು ಇಲ್ಲದೆ ಬದುಕು ದುಸ್ಥರವಾಗಿದೆ. ಈ ಹಿಂದೆ ಯಾವ ಶಾಸಕರು, ಅಧಿಕಾರಿಗಳು ಇಲ್ಲಿ ಭೇಟಿ ನೀಡಿದ ಉದಾಹರಣೆ ಇಲ್ಲ. ಇದೇ ಮೊದಲು ಬಾರಿಗೆ ಶಾಸಕ ನಿಂಬಣ್ಣವರ ಭೇಟಿ ನೀಡಿದ್ದು ನಮ್ಮ ಬದುಕಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. –ನಾಗು ವಿಠ್ಠಲ ಗೌಳಿ, ಗೌಳಿಗರ ತಾಂಡಾದ ಮುಖ್ಯಸ್ಥ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.