ಚಂದ್ರ, ಮಂಗಳನಲ್ಲಿಗೆ ಬುಲೆಟ್ ಟ್ರೈನ್!
ಅಲ್ಲಿಗೆ ತೆರಳುವ ರೈಲಿಗೆ "ಸ್ಪೇಸ್ ಎಕ್ಸ್ಪ್ರೆಸ್' ಎಂದು ಕರೆಯಲಾಗಿದೆ.
Team Udayavani, Jul 18, 2022, 9:50 AM IST
ಟೋಕಿಯೋ: ಮುಂದೊಂದು ದಿನ ನೀವು ಚಂದ್ರನ ಮೇಲೆ ಹೋಗಬೇಕೆಂದರೆ ಬುಲೆಟ್ ಟ್ರೈನ್ ಹತ್ತಬೇಕಾಗುತ್ತದೆ!ಹೌದು ಜಪಾನ್ನ ವಿಜ್ಞಾನಿಗಳು ಇದೀಗ ಚಂದ್ರ ಮತ್ತು ಮಂಗಳನಲ್ಲಿಗೆ ಟ್ರೈನ್ ಕಳುಹಿಸುವ ಸಿದ್ಧತೆಯಲ್ಲಿದ್ದಾರೆ.
ಬಾಹ್ಯಾಹಾಶಕ್ಕೆ ಮನುಷ್ಯರನ್ನು ಕಳುಹಿಸಲೆಂದೇ ಜಪಾನ್ನ ಕ್ಯೋಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೆಕ್ಸಾಟ್ರ್ಯಾಕ್ ನಿರ್ಮಿಸುತ್ತಿದ್ದಾರೆ. ಅಲ್ಲಿಗೆ ತೆರಳುವ ರೈಲಿಗೆ “ಸ್ಪೇಸ್ ಎಕ್ಸ್ಪ್ರೆಸ್’ ಎಂದು ಕರೆಯಲಾಗಿದೆ.
ರೈಲಿನಲ್ಲಿ ಷಡ್ಭುಜೀಯ ಕ್ಯಾಪ್ಸುಲ್ಗಳು ಇರಲಿವೆ. 15 ಮೀಟರ್ ತ್ರಿಜ್ಯವಿರುವ ಕ್ಯಾಪ್ಸುಲ್ ಭೂಮಿಯಿಂದ ಚಂದ್ರನನ್ನು ಸಂಪರ್ಕಿಸಿದರೆ, 30 ಮೀಟರ್ ತ್ರಿಜ್ಯವಿರುವ ಕ್ಯಾಪುಲ್ ಚಂದ್ರನಿಂದ ಮಂಗಳ ಗ್ರಹವನ್ನು ಸಂಪರ್ಕಿಸಲಿದೆ.
ಚಂದ್ರನಲ್ಲಿ ಮತ್ತು ಮಂಗಳನಲ್ಲಿ ರೈಲ್ವೆ ನಿಲ್ದಾಣ ಸ್ಥಾಪಿಸಲಾಗುವುದು. ಅಲ್ಲಿ ಗಾಜಿನ ವಿನ್ಯಾಸ ರೂಪಿಸಿ ಅದರೊಳಗೆ ಭೂಮಿಯಂತೆಯೇ ಕೃತಕ ಗುರುತ್ವಾಕರ್ಷಣೆ, ವಾತಾವರಣ ಸೃಷ್ಟಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 2050ರ ವೇಳೆಗೆ ಇದರ ಮಾದರಿ ನಿರ್ಮಾಣ ಮಾಡಿ ತೋರಿಸುವುದಾಗಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ