ಜು. 29ಕ್ಕೆ ‘ಬೈಪಾಸ್‌ ರೋಡ್‌’ ತೆರೆಗೆ


Team Udayavani, Jul 24, 2022, 2:47 PM IST

bypass road kannada movie

ಕೊರೊನಾ ಕಾರಣದಿಂದ ತಮ್ಮ ಬಿಡುಗಡೆಯನ್ನು ಮುಂದೂಡುತ್ತ ಬಂದಿದ್ದ, ಅನೇಕ ಚಿತ್ರಗಳು ಈ ವರ್ಷ ಒಂದೊಂದಾಗಿ ತೆರೆಗೆ ಬರುತ್ತಿವೆ. ಅಂಥದ್ದೇ ಒಂದು ಚಿತ್ರ “ಬೈಪಾಸ್‌ ರೋಡ್‌’, ಇದೇ ಜು. 29ಕ್ಕೆ ಬಿಡುಗಡೆಯಾಗುತ್ತಿದೆ.

“ಎಂ. ಬಿ ಪ್ರೊಡಕ್ಷನ್ಸ್‌’ ಬ್ಯಾನರ್‌ ಅಡಿಯಲ್ಲಿ ಭರತ್‌ ರಾಜ್‌ ಎಂ, ಮಹೇಶ್‌ ಬಿ.ಎನ್‌ ನಿರ್ಮಿಸಿರುವ “ಬೈಪಾಸ್‌ ರೋಡ್‌’ ಸಿನಿಮಾದಲ್ಲಿ ಭರತ್‌ ಕುಮಾರ್‌, ತಿಲಕ್‌, ನೀತೂ ಗೌಡ, ನೇಹಾ ಸಕ್ಸೇನಾ, ಉದಯ್‌, ಮಾಸ್ಟರ್‌ ಆನಂದ್‌, ತಬಲನಾಣಿ, ಉಗ್ರಂ ಮಂಜು “ಬೈಪಾಸ್‌ ರೋಡ್‌’ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶ್ರೀನಿವಾಸ್‌ ಎಸ್‌. ಬಿ ನಿರ್ದೇಶನವಿದೆ. ಸದ್ಯ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ “ಬೈಪಾಸ್‌ ರೋಡ್‌’ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀನಿವಾಸ್‌ ಎಸ್‌. ಬಿ, “ಇದೊಂದು ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. ಹನಿಮೂನ್‌ಗಾಗಿ ಹೊರಟ ನವ ಜೋಡಿಗೆ “ಬೈಪಾಸ್‌ ರೋಡ್‌’ ಒಂದರಲ್ಲಿ ಅನಿರೀಕ್ಷಿತ ಘಟನೆಗಳು ಎದುರಾಗುತ್ತದೆ. ಅದು ಏನು? ಅದರಿಂದ ಮುಂದೇನಾಗುತ್ತದೆ ಅನ್ನೋದೆ ಸಿನಿಮಾದ ಕಥೆಯ ಒಂದು ಎಳೆ’ ಎಂದು ಕಥಾಹಂದರ ಬಿಚ್ಚಿಟ್ಟರು.

“2017ರಲ್ಲಿ “ಬೈಪಾಸ್‌ ರೋಡ್‌’ ಸಿನಿಮಾ ಶುರುವಾಗಿ 2019ರಲ್ಲಿ ಶೂಟಿಂಗ್‌ ಕೂಡ ಮುಗಿಯಿತು. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಶುರುವಾಗುವ ಹೊತ್ತಿಗೆ ಕೊರೊನಾ, ಲಾಕ್‌ ಡೌನ್‌ ಎದುರಾಯ್ತು. ಹೀಗಾಗಿ ಸಿನಿಮಾದ ಕೆಲಸಗಳು ತಡವಾಯ್ತು. ಆನಂತರ ಸಿನಿಮಾದ ಕೆಲಸಗಳು ಪೂರ್ಣಗೊಂಡು, ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಮತ್ತೆ ಕೊರೊನಾ ಎರಡು-ಮೂರನೇ ಅಲೆಯ ಆತಂಕದಿಂದ ಥಿಯೇಟರ್‌ಗಳು ಬಂದ್‌ ಆಯ್ತು. ಹೀಗಾಗಿ ಅಂದುಕೊಂಡ ಸಮಯಕ್ಕೆ ಸಿನಿಮಾ ರಿಲೀಸ್‌ ಆಗಲಿಲ್ಲ. ಈಗ ಅಂತಿಮವಾಗಿ ಇದೇ ಜು. 29ಕ್ಕೆ ಸಿನಿಮಾ ರಿಲೀಸ್‌ ಮಾಡುತ್ತಿದ್ದೇವೆ’ ಎಂದು ಸಿನಿಮಾ ಬಿಡುಗಡೆ ತಡವಾಗಿರುವುದಕ್ಕೆ ಕಾರಣ ವಿವರಿಸಿದರು ನಿರ್ಮಾಪಕ ಭರತ್‌ ರಾಜ್‌ ಎಂ.

“ಇಡೀ ಸಿನಿಮಾದಲ್ಲಿ ತಿರುವು ಕೊಡುವಂಥ, ಸಾಕಷ್ಟು ಸಸ್ಪೆನ್ಸ್‌ ಇರುವಂಥ ಪಾತ್ರ ನನ್ನದು. ಇಂದಿನ ಜನರೇಶನ್‌ ಇಷ್ಟವಾಗುವಂಥ ಸಬ್ಜೆಕ್ಟ್ ಸಿನಿಮಾದ ಲ್ಲಿರುವುದರಿಂದ, ಥಿಯೇಟರ್‌ನಲ್ಲೂ “ಬೈಪಾಸ್‌ ರೋಡ್‌’ ಆಡಿಯನ್ಸ್‌ಗೆ ಇಷ್ಟವಾಗುತ್ತದೆ’ ಎಂಬ ಭರವಸೆಯ ಮಾತು ನಟ ಭರತ್‌ ಕುಮಾರ್‌ ಅವರದ್ದು.

ನಿರ್ಮಾಪಕ ಮಹೇಶ್‌ ಬಿ. ಎನ್‌, ವಿತರಕ “ಸತ್ಯ ಮಯೂರ ಪಿಕ್ಚರ್’ನ ಮಂಜುನಾಥ್‌ ಸಿನಿಮಾ ಬಿಡುಗಡೆಯ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

god promise kannada movie

Kannada Cinema; ‘ಗಾಡ್‌ ಪ್ರಾಮಿಸ್‌’ ಮುಹೂರ್ತ ಮಾಡಿದ್ರು

ಅರ್ಜುನ ಸಮಾಧಿಗೆ ದರ್ಶನ್‌ ಫ್ಯಾನ್ಸ್‌ ಸಾಥ್‌

Actor Darshan; ಅರ್ಜುನ ಸಮಾಧಿಗೆ ದರ್ಶನ್‌ ಫ್ಯಾನ್ಸ್‌ ಸಾಥ್‌

15

Vidhyarthi Vidyarthiniyare Trailer: ಟ್ರೇಲರ್‌ನಲ್ಲಿ ಟೀನೇಜ್‌ ಸ್ಟೋರಿ

Brinda Acharya: ಸಾವಿರ ಗುಂಗಲ್ಲಿ ಬೃಂದಾ ಆಚಾರ್ಯ; ಆಲ್ಬಂ ಸಾಂಗ್‌ನಲ್ಲಿ ನಟನೆ

Brinda Acharya: ಸಾವಿರ ಗುಂಗಲ್ಲಿ ಬೃಂದಾ ಆಚಾರ್ಯ; ಆಲ್ಬಂ ಸಾಂಗ್‌ನಲ್ಲಿ ನಟನೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.