ಕನ್ನಡಕ್ಕೆ ಬಂದ ಜಾರ್ಖಂಡ್ ಹುಡುಗಿ ಸ್ಟೆಫಿ ಪಟೇಲ್
Team Udayavani, Jul 24, 2022, 1:58 PM IST
ನಟ ವಸಿಷ್ಠ ಸಿಂಹ ಶೀಘ್ರದಲ್ಲಿಯೇ “ಲವ್ ಲಿ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರೋದಕ್ಕೆ ರೆಡಿಯಾಗುತ್ತಿದ್ದಾರೆ. ಸದ್ಯ “ಲವ್ ಲಿ’ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಇದೀಗ “ಲವ್ ಲಿ’ ಸಿನಿಮಾಕ್ಕೆ ನಾಯಕಿಯ ಎಂಟ್ರಿಯಾಗಿದೆ.
ಹೌದು, “ಲವ್ ಲಿ’ ಸಿನಿಮಾದಲ್ಲಿ ವಸಿಷ್ಟ ಸಿಂಹಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಜೋಡಿಯಾಗುತ್ತಿದ್ದಾರೆ. ಹಿಂದಿ, ತಮಿಳು ಜೊತೆಗೆ ಕೊರಿಯನ್ ಭಾಷೆಯ ಸಿನಿಮಾ ಮತ್ತು ವೆಬ್ ಸಿರೀಸ್ಗಳಲ್ಲಿ ಅಭಿನಯಿಸಿದ ಅನುಭವಿರುವ ಸ್ಟೆಫಿ ಪಟೇಲ್ “ಲವ್ ಲಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಗೆ ನಾಯಕ ನಟಿಯಾಗಿ ಪರಿಚಯವಾಗುತ್ತಿದ್ದಾರೆ.
ಇತ್ತೀಚೆಗಷ್ಟೇ “ಲವ್ ಲಿ’ ಚಿತ್ರತಂಡ ಸೇರಿಕೊಂಡಿರುವ ಸ್ಟೆಫಿ ಪಟೇಲ್, ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಹೆಸರೇ ಹೇಳುವಂತೆ, “ಲವ್ ಲಿ’ ಔಟ್ ಆ್ಯಂಡ್ ಔಟ್ ರೊಮ್ಯಾಂಟಿಕ್ ಲವ್ ಸ್ಟೋರಿ ಕಂ ರೌಡಿಸಂ ಕಥಾಹಂದರದ ಸಿನಿಮಾವಾಗಿದ್ದು, ಚೇತನ್ ಕೇಶವ್ ಈ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಎಂ. ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿರುವ “ಲವ್ ಲಿ’ ಸಿನಿಮಾಕ್ಕೆ ಕೆನಡಿ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಒಟ್ಟಾರೆ ಕೆಲ ದಿನಗಳ ಹಿಂದಷ್ಟೇ “ಲವ್ ಲಿ’ ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿ ನೋಡುಗರ ಗಮನ ಸೆಳೆಯುತ್ತಿದ್ದು, ಸಿನಿಮಾದಲ್ಲಿ ವಸಿಷ್ಠ ಸಿಂಹ ಜೊತೆ ತೆರೆ ಹಂಚಿಕೊಳ್ಳುವ ನಾಯಕ ನಟಿ ಯಾರು ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ