ವಿಷ ಮಿಶ್ರಿತ ಮ್ಯಾಗಿ ನೂಡಲ್ಸ್ ತಿಂದ ಮಹಿಳೆ ಸಾವು: ಪೊಲೀಸರ ಹೇಳಿಕೆಯಲ್ಲೇನಿದೆ?
ಪತಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ರೇಖಾ ಸಾವನ್ನಪ್ಪಿರುವುದಾಗಿ ದೇವರ್ಷಿ ತಿಳಿಸಿದ್ದಾರೆ.
Team Udayavani, Jul 30, 2022, 12:20 PM IST
ಮುಂಬಯಿ: ವಿಷ ಮಿಶ್ರಿತ ಮ್ಯಾಗಿ ನೂಡಲ್ಸ್ ಸೇವಿಸಿ 27 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ. ಮಲಾಡ್ ನ ಪಾಸ್ಕಲ್ ವಾಡಿ ಎಂಬ ಪ್ರದೇಶದಲ್ಲಿ ದುರಂತ ಸಂಭವಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಆರ್ ಎಸ್ಎಸ್ ಕಾರ್ಯಕರ್ತರ ಪಾದದ ಧೂಳಿಗೂ ಸಿದ್ದರಾಮಯ್ಯ ಸಮರಲ್ಲ: ಕೆ.ಎಸ್.ಈಶ್ವರಪ್ಪ
ಇಲಿಯನ್ನು ಕೊಲ್ಲಲು ವಿಷ ಹಾಕಿ ಇಟ್ಟಿದ್ದ ಟೊಮೆಟೊವನ್ನು ಮ್ಯಾಗಿ ನೂಡಲ್ಸ್ ತಯಾರಿಸುವ ವೇಳೆ ಆಕಸ್ಮಿಕವಾಗಿ ಕತ್ತರಿಸಿ ಹಾಕಿದ್ದು, ನಂತರ ಮ್ಯಾಗಿ ತಿಂದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ.
ಜುಲೈ 21ರಂದು ರೇಖಾ ನಿಶಾದ್ ಎಂಬಾಕೆಯ ಮನೆಯಲ್ಲಿ ಇಲಿಯನ್ನು ಕೊಲ್ಲಲು ಟೊಮೆಟೊದೊಳಗೆ ವಿಷ ಬೆರೆಸಿ ಇಟ್ಟಿದ್ದರು. ಆದರೆ ಮರುದಿನ ಆಕೆ ನೂಡಲ್ಸ್ ಮಾಡುವ ವೇಳೆ ಅದೇ ಟೊಮೆಟೊ ಕತ್ತರಿಸಿ ಹಾಕಿರುವುದಾಗಿ ವರದಿ ವಿವರಿಸಿದೆ.
ಟಿವಿ ನೋಡುತ್ತ ಕೆಲಸ ಮಾಡುತ್ತಿದ್ದ ರೇಖಾ ಅವರು ಆಕಸ್ಮಿಕವಾಗಿ ವಿಷ ಮಿಶ್ರಿತ ಟೊಮೆಟೊವನ್ನು ನೂಡಲ್ಸ್ ಗೆ ಕತ್ತರಿಸಿ ಹಾಕಿದ್ದರು ಎಂದು ಮಾಲ್ವಾನಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮೂಸಾ ದೇವರ್ಷಿ ತಿಳಿಸಿದ್ದಾರೆ.
ಮ್ಯಾಗಿ ನೂಡಲ್ಸ್ ತಿಂದ ನಂತರ ರೇಖಾ ವಾಂತಿ ಮಾಡಲು ಆರಂಭಿಸಿದ್ದರು. ನಂತರ ಪತಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ರೇಖಾ ಸಾವನ್ನಪ್ಪಿರುವುದಾಗಿ ದೇವರ್ಷಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ