ಕಾಮನ್ವೆಲ್ತ್ ಗೇಮ್ಸ್ ಸ್ಕ್ವಾಷ್: ಜೋಶ್ನಾ ಚಿನ್ನಪ್ಪ ಕ್ವಾರ್ಟರ್ ಫೈನಲ್ಗೆ ಲಗ್ಗೆ
Team Udayavani, Jul 31, 2022, 11:37 PM IST
ಬರ್ಮಿಂಗ್ಹ್ಯಾಮ್: ನ್ಯೂಜಿಲ್ಯಾಂಡ್ನ ಕೇಟ್ಲಿನ್ ನ್ ವ್ಯಾಟ್ಸ್ ಅವರನ್ನು 3-1 ಅಂತರದಿಂದ ಸೋಲಿಸಿದ ಜೋಶ್ನಾ ಚಿನ್ನಪ್ಪ ಗೇಮ್ಸ್ ಸ್ಕ್ವಾಷ್ ಸ್ಪರ್ಧೆಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
18 ಬಾರಿಯ ರಾಷ್ಟ್ರೀಯ ಚಾಂಪಿಯನ್ ಆಗಿರುವ ಜೋಶ್ನಾ 11-8, 9-11, 11-4, 11-6 ಅಂತರದ ಗೆಲುವು ಒಲಿಸಿಕೊಂಡರು.
ಇವರ ಮುಂದಿನ ಎದುರಾಳಿ ಕೆನಡಾದ ಹೋಲೀ ನೌಟನ್. ಅವರು ಮಲೇಷ್ಯಾದ ಐಫಾ ಅಜ್ಮನ್ ವಿರುದ್ಧ 3-0 ಗೆಲುವು ಸಾಧಿಸಿದರು.