20 ನಿಮಿಷ ವಿಳಂಬವಾದ್ದಕ್ಕೆ ಉದ್ಯೋಗಿ ವಜಾ
Team Udayavani, Aug 5, 2022, 7:00 AM IST
ನವದೆಹಲಿ: ಏಳು ವರ್ಷಕ್ಕಿಂತಲೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಉದ್ಯೋಗಿಯೊಬ್ಬ ಕಚೇರಿಗೆ 20 ನಿಮಿಷ ವಿಳಂಬವಾಗಿ ಆಗಮಿಸಿದ್ದ ಎಂಬ ಕಾರಣಕ್ಕಾಗಿ ಆತನನ್ನು ವಜಾ ಮಾಡಲಾಗಿದೆ.
ಇಂಥ ಘಟನೆ ನಡೆದಿದ್ದ ಅಮೆರಿಕದ ಫ್ಲಾರಿಡಾದಲ್ಲಿ. ಈ ಬಗ್ಗೆ ರೆಡ್ಇಟ್ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಘಟನೆಯನ್ನು ವಿವರಿಸಿ ಬರೆದುಕೊಂಡಿದ್ದಾರೆ.
ಕಂಪನಿಯ ಆಡಳಿತ ಮಂಡಳಿಯ ನಿರ್ಧಾರ ಉಳಿದ ಉದ್ಯೋಗಿಗಳನ್ನು ಸಿಟ್ಟಿಗೆಬ್ಬಿಸಿದೆ. ಏಳು ವರ್ಷಕ್ಕಿಂತಲೂ ಅಧಿಕ ಆತ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ನಿಗದಿತ ಅವಧಿಗೆ ಆತ ಕರ್ತವ್ಯಕ್ಕೆ ಹಾಜರಾಗುತ್ತಿದ್ದ. ಒಂದು ದಿನ 20 ನಿಮಿಷ ವಿಳಂಬವಾಗಿ ಬಂದಿದ್ದಾನೆ ಎಂಬ ಕಾರಣಕ್ಕಾಗಿ ಆತನನ್ನು ವಜಾ ಮಾಡಲಾಗಿದೆ.
ಆತನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಇತರ ಉದ್ಯೋಗಿಗಳು ಪ್ರತಿಭಟನೆ ನಡೆಸಲಾರಂಭಿಸಿದ್ದಾರೆ. ಈ ಘಟನೆ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ
Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್
Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ
CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!
West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ