ಟಿ20 ಪಂದ್ಯ: ವೆಸ್ಟ್ಇಂಡೀಸ್ ವಿರುದ್ಧ ಭಾರತಕ್ಕೆ 59 ರನ್ ಗೆಲುವು
Team Udayavani, Aug 7, 2022, 12:38 AM IST
ಲಾಡರ್ಹಿಲ್: ವೆಸ್ಟ್ಇಂಡೀಸ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 59 ರನ್ನುಗಳಿಂದ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಭಾರತ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು 5 ವಿಕೆಟಿಗೆ 191 ರನ್ ಗಳಿಸಿತ್ತು. ರಿಷಬ್ ಪಂತ್ 44, ರೋಹಿತ್ ಶರ್ಮ 33 ಮತ್ತು ಸಂಜು ಸ್ಯಾಮ್ಸನ್ 30 ರನ್ ಹೊಡೆದಿದ್ದರು. ಇದಕ್ಕುತ್ತರವಾಗಿ ವೆಸ್ಟ್ಇಂಡೀಸ್ ತಂಡವು 19.1 ಓವರ್ಗಳಲ್ಲಿ ಕೇವಲ 132 ರನ್ನಿಗೆ ಆಲೌಟಾಗಿತ್ತು. ಅರ್ಷದೀಪ್ ಸಿಂಗ್ 12 ರನ್ನಿಗೆ 3 ವಿಕೆಟ್ ಪಡೆದಿದ್ದರೆ ಆವೇಶ್ ಖಾನ್, ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯಿ ತಲಾ 2 ವಿಕೆಟ್ ಉರುಳಿಸಿದ್ದರು.