ಯುಎಸ್‌ ಓಪನ್‌ ಟೆನಿಸ್‌: ಗಾಯದ ನಡುವೆಯೂ ಗೆದ್ದ ರಫೆಲ್‌ ನಡಾಲ್‌


Team Udayavani, Sep 2, 2022, 11:44 PM IST

ಯುಎಸ್‌ ಓಪನ್‌ ಟೆನಿಸ್‌: ಗಾಯದ ನಡುವೆಯೂ ಗೆದ್ದ ರಫೆಲ್‌ ನಡಾಲ್‌

ನ್ಯೂಯಾರ್ಕ್‌: ಸ್ಪೇನ್‌ನ ರಫೆಲ್‌ ನಡಾಲ್‌ ಪಂದ್ಯದ ನಡುವೆ ಗಾಯಗೊಂಡರೂ ಚೇತರಿಸಿಕೊಂಡು ಇಟಲಿಯ ಫ್ಯಾಬಿಯೊ ಫಾಗ್ನಿನಿ ಅವರರನ್ನು ನಾಲ್ಕು ಸೆಟ್‌ಗಳ ಹೋರಾ ಟದಲ್ಲಿ ಸೋಲಿಸಿ ಯುಎಸ್‌ ಓಪನ್‌ ಟೆನಿಸ್‌ ಕೂಟದಲ್ಲಿ ಮೂರನೇ ಸುತ್ತು ತಲುಪಿದರು.

ದ್ವಿತೀಯ ಸುತ್ತಿನ ಪಂದ್ಯದ ವೇಳೆ ಚೆಂಡನ್ನು ಹೊಡೆಯುವ ವೇಳೆ ನಡಾಲ್‌ ಅವರ ರ್ಯಾಕೆಟ್‌ ಮೂಗಿಗೆ ಬಲವಾಗಿ ಬಡಿದ ಕಾರಣ ತೀವ್ರವಾದ ನೋವನ್ನು ಅನುಭವಿಸಿ ದರು. ರಕ್ತ ನಿಲ್ಲಿಸಲು ಬ್ಯಾಂಡೇಜ್‌ ಹಾಕಲಾಯಿತು. ನೋವು ಶಮನ ಗೊಳ್ಳಲು ಅವರು ವೈದ್ಯಕೀಯ ವಿಶ್ರಾಂತಿ ಪಡೆದರು. ಈ ಘಟನೆ ಮೂರನೇ ಸೆಟ್‌ ವೇಳೆ ನಡೆದಿತ್ತು.

ಗಾಯದ ನೋವಿನ ನಡುವೆಯೂ ಆಡಿದ 22 ಬಾರಿಯ ಗ್ರ್ಯಾನ್‌ ಸ್ಲಾಮ್‌ ವಿಜೇತ ನಡಾಲ್‌ ಅವರು ಫಾಗ್ನಿನಿ ಅವರನ್ನು 2-6, 6-4, 6-2, 6-1 ಸೆಟ್‌ಗಳಿಂದ ಸೋಲಿಸಲು ಯಶಸ್ವಿ ಯಾದರು. ರ್ಯಾಕೆಟ್‌ನ ಹೊಡೆತದಿಂದ ಒಮ್ಮೆ ತಲೆತಿರುಗಿದಂತೆ ಆಯಿತು. ತೀವ್ರವಾದ ನೋವಿನಿಂದ ಬಳಲಿದೆ ಎಂದು ಅವರು ಹೇಳಿದರು.

ಕಿರ್ಗಿಯೋಸ್‌ಗೆ ದಂಡ
ಬುಧವಾರ ನಡೆದ ಯುಎಸ್‌ ಓಪನ್‌ನಲ್ಲಿ ಎರಡನೇ ಸುತ್ತಿನ ಗೆಲುವಿನ ಸಂದರ್ಭ ಉಗುಳುವುದು ಮತ್ತು ಕೇಳಬಹುದಾದ ಅಶ್ಲೀಲ ಮಾತಿಗಾಗಿ ಆಸ್ಟ್ರೇಲಿಯದ ಆಟಗಾರ ನಿಕ್‌ ಕಿರ್ಗಿಯೋಸ್‌ ಅವರಿಗೆ 7,500 ಡಾಲರ್‌ ದಂಡ ವಿಧಿಸಲಾಗಿದೆ ಎಂದು ಪಂದ್ಯಾವಳಿಯ ಸಂಘಟಕರು ತಿಳಿಸಿದ್ದಾರೆ. ಇದು ಇದುವರೆಗೆ ಈ ಪಂದ್ಯಾವಳಿಯಲ್ಲಿ ಆಟಗಾರನಿಗೆ ನೀಡಿದ ದೊಡ್ಡ ಮೊತ್ತದ ದಂಡವಾಗಿದೆ.

ವಿಂಬಲ್ಡನ್‌ನಲ್ಲಿ ಫೈನಲಿಗೇರಿದ್ದ ಕಿರ್ಗಿಯೋಸ್‌ ಫ್ರಾನ್ಸ್‌ನ ಬೆಂಜಲಿನ್‌ ಬೊಂಜಿ ವಿರುದ್ಧ 7-6 (3), 6-4, 4-6, 6-4 ಅಂತರದಲ್ಲಿ ಜಯ ಗಳಿಸುವ ವೇಳೆ ಉಗುಳುವುದು ಮತ್ತು ಅಶ್ಲೀಲ ಮಾತು ಆಡಿದ್ದರು.

ಸೆರೆನಾ ಜೋಡಿಗೆ ಸೋಲು
ಸೆರೆನಾ ಮತ್ತು ವೀನಸ್‌ ವಿಲಿಯಮ್ಸ್‌ ಅವರು ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಜೆಕ್‌ನ ಲೂಸಿ ಹೃದೆಕ್ಕಾ ಮತ್ತು ಲಿಂಡಾ ನೊಸ್ಕೋವಾ ಅವರಿಗೆ 7-6 (5), 6-4 ಸೆಟ್‌ಗಳಿಂದ ಸೋತು ಹೊರಬಿದ್ದಿದ್ದಾರೆ.

ಎರಡು ಯುಎಸ್‌ ಸಹಿತ ಒಟ್ಟಾರೆ 14 ಗ್ರ್ಯಾನ್‌ ಸ್ಲಾಮ್‌ ಕೂಟದ ಪ್ರಶಸ್ತಿ ಗೆದ್ದಿರುವ ವಿಲಿಯಮ್ಸ್‌ ಸಹೋದರಿಯರು ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿ ಜತೆಯಾಗಿ ಆಡಿದ್ದರು. ಆದರೆ ನೇರ ಸೆಟ್‌ಗಳಿಂದ ಸೋತಿರುವುದು ಅವರಿಗೆ ಆಘಾತವನ್ನುಂಟು ಮಾಡಿದೆ.

 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.