1,476 ಕೋಟಿ ರೂ. ಮೊತ್ತದ ಮಾದಕ ವಸ್ತು ವಶ; ಸ್ಪೇನ್ನಿಂದ ಬಂದಿದ್ದೇ ಬೃಹತ್ ಕಂಟೈನರ್?
ಮುಂಬೈನಲ್ಲಿ ಡಿಆರ್ಐ ಅಧಿಕಾರಿಗಳ ಕಾರ್ಯಾಚರಣೆ
Team Udayavani, Oct 1, 2022, 10:02 PM IST
ಮುಂಬೈ: ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್ಐ) ಅಧಿಕಾರಿಗಳು ಮುಂಬೈನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1,476 ಕೋಟಿ ರೂ. ಮೊತ್ತದ ಕೊಕೇನ್ ಮತ್ತು ಮೆಥಾಂಪೆಟಮೈನ್ ಎಂಬ 2 ವಿಧಗಳ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಾಣಿಜ್ಯ ನಗರಿಯ ವಶಿಯಲ್ಲಿ ಕಿತ್ತಳೆ ತುಂಬಿದ ಕಂಟೈನರ್ನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸಲಾಗುತಿತ್ತು. ಕಿತ್ತಳೆ ತುಂಬಿದ್ದ ಕಂಟೈನರ್ ಅನ್ನು ಸ್ಪೇನ್ನ ವೆಲೆನ್ಶಿಯಾದಿಂದ ತರಲಾಗಿತ್ತು ಎಂದು ಹೇಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್ಐ ಅಧಿಕಾರಿಗಳು, ಟ್ರಕ್ನಲ್ಲಿದ್ದ 198 ಕೆಜಿ ಮೆಥಾಂಪೆಟಮೈನ್ ಮತ್ತು 9 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಜತೆಗೆ ಇದನ್ನು ಆಮದು ಮಾಡಿಕೊಂಡವರನ್ನು ಬಂಧಿಸಿದ್ದಾರೆ.
ಶುಕ್ರವಾರವಷ್ಟೇ ಎನ್ಸಿಬಿ ಅಧಿಕಾರಿಗಳು ಮುಂಬೈನಲ್ಲಿ 13 ಕೋಟಿ ರೂ. ಮೌಲ್ಯದ ಬ್ಲಾಕ್ ಕೊಕೇನ್ ವಶಪಡಿಸಿಕೊಂಡಿದ್ದರು. ಈ ಬ್ಲಾಕ್ ಕೊಕೇನ್ ಕಣ್ಣಿಗೆ ಕಾಣುವುದಿಲ್ಲ ಮತ್ತು ಪೊಲೀಸ್ ಶ್ವಾನಗಳಿಗೂ ಅದನ್ನು ಪತ್ತೆಹಚ್ಚಲು ಅಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ