ಸಾಹಿತ್ಯ ಅಕಾಡೆಮಿ ಪುಸ್ತಕಗಳ ಭರ್ಜರಿ ಮಾರಾಟ; 345 ಪುಸ್ತಕ ಒಳಗೊಂಡ ಸೆಟ್‌ಬಾಕ್ಸ್‌

ಮಲ್ಲೇಪುರಂ ಜಿ.ವೆಂಕಟೇಶ ಅವರ "ದೇಶಿಯ ದರ್ಶನ ಮಾಲೆ" ಕೃತಿಗಳನ್ನು ಅಧಿಕ ಸಂಖ್ಯೆಯಲ್ಲಿ ಓದುಗರು ಖರೀದಿಸಿದ್ದಾರೆ.

Team Udayavani, Oct 14, 2022, 9:52 AM IST

ಸಾಹಿತ್ಯ ಅಕಾಡೆಮಿ ಪುಸ್ತಕಗಳ ಭರ್ಜರಿ ಮಾರಾಟ; 345 ಪುಸ್ತಕ ಒಳಗೊಂಡ ಸೆಟ್‌ಬಾಕ್ಸ್‌

ಬೆಂಗಳೂರು: ಹಣ ಕೊಟ್ಟು ಪುಸ್ತಕಗಳನ್ನು ಖರೀದಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಮಾತಿಗೆ ಅಪವಾದ ಎಂಬಂತೆ ಕರ್ನಾಟಕ ಸಾಹಿತ್ಯಅಕಾಡೆಮಿ ರಾಜ್ಯದ ವಿವಿಧ ಕಾಲೇಜು ಮತ್ತು ವಿವಿಗಳಲ್ಲಿ ಹಮ್ಮಿಕೊಂಡಿದ್ದ ಶೇ.50ರ ರಿಯಾಯ್ತಿ ದರದ ಪುಸ್ತಕಗಳ ಮಾರಾಟದಲ್ಲಿ ಭರ್ಜರಿ ಖರೀದಿ ವಹಿವಾಟು ನಡೆದಿದೆ.

ಬೆಂಗಳೂರಿನಿಂದ ಆರಂಭವಾದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಬಸವ ಕಲ್ಯಾಣದಲ್ಲಿ ಮುಕ್ತಾಯವಾಗಿದ್ದು ಸುಮಾರು 5 ಸಾವಿರಕ್ಕೂ ಹೆಚ್ಚಿನ ವಿವಿಧ ಶೀರ್ಷಿಕೆ ಗಳ ಪುಸ್ತಕಗಳ ಮಾರಾಟವಾಗಿವೆ. ಸುಮಾರು 35ಲಕ್ಷ ರೂ.ಗಳ ಖರೀದಿ ವಹಿವಾಟು ನಡೆದಿದೆ.

ಹಿರಿಯ ಸಾಹಿತಿಗಳ ಕೃತಿಗಳು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದ್ದು ಅಕಾಡೆಮಿಯ ಉತ್ಸಾಹ ಇಮ್ಮಡಿಸಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಕಾಡೆಮಿ ರಾಜ್ಯದ 75 ಪದವಿ, ಪದವಿ ಪೂರ್ವ ಕಾಲೇಜು ಹಾಗೂ ಕೆಲ ವಿಶ್ವವಿದ್ಯಾಲಯಗಳಲ್ಲಿ ತಾನು ಪ್ರಕಟಿಸಿದ್ದ ಪುಸ್ತಕಗಳ ಪ್ರದರ್ಶನ, ಮಾರಾಟವನ್ನು ಏರ್ಪಡಿಸಿತ್ತು. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಕಾರ್ಯಕ್ರಮಗಳನ್ನು ರೂಪಿಸಿತ್ತು.

ಆ ಹಿನ್ನೆಲೆಯಲ್ಲಿ ಅಕಾಡೆಮಿ ಕೂಡ ದೇಶದ ಸ್ವಾತಂತ್ರ ಸಾಧಕರ ಕುರಿತು ಕನ್ನಡ ಭಾಷೆಯಲ್ಲಿ 75 ಪುಸ್ತಕಗಳ ಮಾಲೆಯನ್ನು ಹೊರತಂದಿತ್ತು. ಇದಾದ ಬಳಿಕ ಸಾಕ್ಷ್ಯ ಚಿತ್ರದ ಜತೆಗೆ ರಾಜ್ಯದ 31 ಜಿಲ್ಲೆಗಳ ಪದವಿ ಮತ್ತು ಪದವಿ ಪೂರ್ವ ಮತ್ತು ವಿವಿಗಳಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿತ್ತು. ಇಲ್ಲಿ ಭರ್ಜರಿಯಾಗಿಯೇ ಪುಸ್ತಕ ಖರೀದಿಯ ವಹಿವಾಟು ನಡೆದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಹೇಳುತ್ತಾರೆ.

ಗಿರಡ್ಡಿ, ಬರಗೂರು, ಸಿದ್ದಲಿಂಗಯ್ಯ ಪುಸ್ತಕಗಳಿಗೆ ಬೇಡಿಕೆ: ಅಕಾಡೆಮಿ ಪುಸ್ತಕ ಮಾರಾಟದಲ್ಲಿ  ಹಿರಿಯ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರ “ಸಾಹಿತ್ಯ ಪರಿಭಾಷಿಕ ಮಾಲೆ” (16 ಪುಸ್ತಕಗಳು), ಬರಗೂರು ರಾಮಚಂದ್ರ ಅವರ “ಕನ್ನಡ ಸಾಹಿತ್ಯ ಸಂಗಾತಿ’, ಹಿರಿಯ ಕವಿ ಸಿದ್ದಲಿಂಗಯ್ಯ ಮತ್ತು ಎಂ.ಎಚ್‌.ಕೃಷ್ಣಯ್ಯ ಸಂಪಾದನೆಯ “ಸಾಲು ದೀಪಗಳು’ ಹಾಗೂ ಮಲ್ಲೇಪುರಂ ಜಿ.ವೆಂಕಟೇಶ ಅವರ “ದೇಶಿಯ ದರ್ಶನ ಮಾಲೆ” ಕೃತಿಗಳನ್ನು ಅಧಿಕ ಸಂಖ್ಯೆಯಲ್ಲಿ ಓದುಗರು ಖರೀದಿಸಿದ್ದಾರೆ.

ರಿಯಾಯ್ತಿ ಪುಸ್ತಕ ಮಾರಾಟದಲ್ಲಿ ಸ್ನಾತಕೋತ್ತರ ಮತ್ತು ಪದವೀಧರ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಕನ್ನಡ ಪುಸ್ತಕಗಳನ್ನು ಖರೀದಿಸಿದ್ದಾರೆ. ಜತೆಗೆ ಕಾಲೇಜು ಉಪನ್ಯಾಸಕರು, ಸಾಹಿತ್ಯಆಸಕ್ತರು ಕೂಡ ಅಕಾಡೆಮಿ ಹೊರತಂದಿರುವ ವಿವಿಧ ಕೃತಿಗಳನ್ನು ಮಾರಾಟ ಕೇಂದ್ರಕ್ಕೆ ಬಂದು ಕೊಂಡುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಅಕಾಡೆಮಿ ಅಧಿಕಾರಿಗಳು ಹೇಳುತ್ತಾರೆ.

345 ಪುಸ್ತಕಗಳ ಒಳಗೊಂಡ ಸೆಟ್‌ಬಾಕ್ಸ್‌
ಅಕಾಡೆಮಿ ರಿಯಾಯ್ತಿ ಪುಸ್ತಕ ಮಾರಾಟಕ್ಕಾಗಿ 15,435 ರೂ. ಮುಖ ಬೆಲೆಯ 345 ಪುಸ್ತಕಗಳ ಒಳಗೊಂಡ ಸೆಟ್‌ ಸಿದ್ಧಪಡಿಸಿತ್ತು. ಇದರಲ್ಲಿ ಸುಮಾರು 22 ಸೆಟ್‌ ಬಾಕ್ಸ್‌ಗಳು ಮಾರಾಟವಾಗಿದೆ. ಬಹುತೇಕ ಸೆಟ್‌ ಬಾಕ್ಸ್‌ ಪುಸ್ತಕಗಳನ್ನು ವಿವಿಗಳು ಮತ್ತು ಕಾಲೇಜುಗಳು ಖರೀದಿ ಮಾಡಿವೆ. ಈ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಆಯೋಜನೆಯಿಂದಾಗಿ ಅಕಾಡೆಮಿಯಲ್ಲಿ ಉತ್ತಮ ಪುಸ್ತಕಗಳು ಇವೆ ಎಂಬುವುದು ಕಾಲೇಜು ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಗಮನಕ್ಕೆ
ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅಕಾಡೆಮಿ ರಾಜ್ಯದ 75 ಸ್ಥಳಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ರಿಯಾಯ್ತಿ ದರದಲ್ಲಿ ಪುಸ್ತಕಗಳ ಮಾರಾಟವನ್ನು ಹಮ್ಮಿಕೊಂಡಿತ್ತು. 35 ಲಕ್ಷ ರೂ. ಖರೀದಿ ವಹಿವಾಟು ನಡೆದಿದ್ದು, ಇದು ಕನ್ನಡ ಪುಸ್ತಕ ಓದುಗರಿಗೆ ಬರವಿಲ್ಲ ಎಂಬುವುದನ್ನು ತೋರಿಸುತ್ತದೆ.
● ಡಾ.ಬಿ.ವಿ. ವಸಂತಕುಮಾರ್‌,
ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ

*ದೇವೇಶ ಸೂರುಗುಪ್ಪ

ಟಾಪ್ ನ್ಯೂಸ್

BOULT BassBox X120

BassBox X120: ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

7

Bigg Boss OTT 3: ಈ ಬಾರಿ ಸಲ್ಮಾನ್‌ ಖಾನ್ ಅನುಮಾನ; ಬೇರೆ ನಿರೂಪಕರತ್ತ ಆಯೋಜಕರ ಚಿತ್ತ

Old Is Gold; ರೀ ರಿಲೀಸ್‌ನತ್ತ ಸ್ಟಾರ್‌ ಸಿನಿಮಾಗಳು

Old Is Gold; ರೀ ರಿಲೀಸ್‌ನತ್ತ ಸ್ಟಾರ್‌ ಸಿನಿಮಾಗಳು

ಜಮೀನು ಗಲಾಟೆ; ಕುಡಗೋಲಿನಿಂದ ಹಲ್ಲೆ ಮಾಡಿ ಹಾಡಹಗಲೇ ಸಂಬಂಧಿಯ ಕೊಲೆ

Shimoga ಜಮೀನು ಗಲಾಟೆ; ಕುಡಗೋಲಿನಿಂದ ಹಲ್ಲೆ ಮಾಡಿ ಹಾಡಹಗಲೇ ಸಂಬಂಧಿಯ ಕೊಲೆ

Stock Market- 4ನೇ ಹಂತದ ಮತದಾನ: ಬಾಂಬೆ ಷೇರುಪೇಟೆ ಸೂಚ್ಯಂಕ 750 ಅಂಕ ಕುಸಿತ

Stock Market- 4ನೇ ಹಂತದ ಮತದಾನ: ಬಾಂಬೆ ಷೇರುಪೇಟೆ ಸೂಚ್ಯಂಕ 750 ಅಂಕ ಕುಸಿತ

6

LS polls: ಮತ ಚಲಾಯಿಸಿದ ಟಾಲಿವುಡ್‌ ಸ್ಟಾರ್ಸ್; ಫೋಟೋಸ್‌ ವೈರಲ್

rcb

RCB ಪ್ಲೇಆಫ್ ತಲುಪಲು ಚೆನ್ನೈಯನ್ನು ಎಷ್ಟು ರನ್ ಗಳಿಂದ ಸೋಲಿಸಬೇಕು? ಹೀಗಿದೆ ಲೆಕ್ಕಾಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಸಣ್ಣಕೇರಿಯ ದೊಡ್ಡ‌ಕೆರೆಗೆ‌ ಕಾಯಕಲ್ಪ… ಕೆರೆ ಅಭಿವೃದ್ಧಿಗೆ ಚಾಲನೆ

Sirsi: ಕೆರೆ ಅಭಿವೃದ್ದಿ ಮಾಡಿದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯ… :ಶ್ರೀನಿವಾಸ ಹೆಬ್ಬಾರ್

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

ಆನೆ ಕಂಡು ಚರಂಡಿಗೆ ಇಳಿದ ಬೊಲೇರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

ಆನೆ ಕಂಡು ಚರಂಡಿಗೆ ಇಳಿದ ಬೊಲೆರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

Legislative Council Elections: ಬಿಜೆಪಿ-ಜೆಡಿಎಸ್‌ ಮೈತ್ರಿ 5:1 ಅಲ್ಲ, 4:2

Legislative Council Elections: ಬಿಜೆಪಿ-ಜೆಡಿಎಸ್‌ ಮೈತ್ರಿ 5:1 ಅಲ್ಲ, 4:2

Prajwal Revanna ವಿಮಾನ ಟಿಕೆಟ್‌ ರದ್ದು; ಸಂಸದನ ನಡೆ ಕುತೂಹಲ, ಸಿಗದ ಸುಳಿವು

Prajwal Revanna ವಿಮಾನ ಟಿಕೆಟ್‌ ರದ್ದು; ಸಂಸದನ ನಡೆ ಕುತೂಹಲ, ಸಿಗದ ಸುಳಿವು

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

BOULT BassBox X120

BassBox X120: ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

sanjiv nautiyal becomes CEO and MD of Ujjivan Small Finance Bank

Ujjivan Small Finance Bank; ಉಜ್ಜೀವನ್ ಎಂಡಿ, ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

7

Bigg Boss OTT 3: ಈ ಬಾರಿ ಸಲ್ಮಾನ್‌ ಖಾನ್ ಅನುಮಾನ; ಬೇರೆ ನಿರೂಪಕರತ್ತ ಆಯೋಜಕರ ಚಿತ್ತ

Old Is Gold; ರೀ ರಿಲೀಸ್‌ನತ್ತ ಸ್ಟಾರ್‌ ಸಿನಿಮಾಗಳು

Old Is Gold; ರೀ ರಿಲೀಸ್‌ನತ್ತ ಸ್ಟಾರ್‌ ಸಿನಿಮಾಗಳು

Sirsi: ಸಣ್ಣಕೇರಿಯ ದೊಡ್ಡ‌ಕೆರೆಗೆ‌ ಕಾಯಕಲ್ಪ… ಕೆರೆ ಅಭಿವೃದ್ಧಿಗೆ ಚಾಲನೆ

Sirsi: ಕೆರೆ ಅಭಿವೃದ್ದಿ ಮಾಡಿದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯ… :ಶ್ರೀನಿವಾಸ ಹೆಬ್ಬಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.