ಟಿ20 ವಿಶ್ವಕಪ್‌: ಆಸೀಸ್‌ಗೆ ಕಾದಿದೆ ಲಂಕಾ ಸ್ಪಿನ್‌ ಚಾಲೆಂಜ್‌


Team Udayavani, Oct 25, 2022, 8:00 AM IST

ಟಿ20 ವಿಶ್ವಕಪ್‌: ಆಸೀಸ್‌ಗೆ ಕಾದಿದೆ ಲಂಕಾ ಸ್ಪಿನ್‌ ಚಾಲೆಂಜ್‌

ಪರ್ತ್‌: ಸೂಪರ್‌-12 ಹಂತದಲ್ಲಿ ಸೋಲಿನ ಆರಂಭ ಕಂಡ ಹಾಲಿ ಚಾಂಪಿಯನ್‌ ಆಸ್ಟ್ರೇಲಿ ಯಕ್ಕೆ ಶ್ರೀಲಂಕಾದ ಸ್ಪಿನ್‌ ಸವಾಲು ಎದುರಾ ಗುವ ಸಾಧ್ಯತೆ ದಟ್ಟವಾಗಿದೆ. ಮಂಗಳ ವಾರದ ಏಕೈಕ ಮುಖಾಮುಖಿಯಲ್ಲಿ ಇತ್ತಂಡಗಳು ಎದುರಾಗಲಿವೆ.

ಕಪ್‌ ಉಳಿಸಿಕೊಳ್ಳುವ ಸಾಧ್ಯತೆಯನ್ನು ಹೊಂದಿರುವ ಕಾಂಗರೂ ಪಡೆಗೆ ಕಿವೀಸ್‌ 89 ರನ್ನುಗಳ ಬಲವಾದ ಆಘಾತವಿಕ್ಕಿತ್ತು. 17.1 ಓವರ್‌ಗಳಲ್ಲಿ ಆಸೀಸ್‌ 111 ರನ್ನಿಗೆ ಉದುರಿತ್ತು. ಇಂಥದೊಂದು ದೊಡ್ಡ ಸೋಲನ್ನು ಆರನ್‌ ಫಿಂಚ್‌ ಬಳಗ ನಿರೀಕ್ಷಿಸಿಯೇ ಇರಲಿಲ್ಲ. ಈ ಸೋಲಿನಿಂದ ಒಮ್ಮೆಲೇ ಹೊರಬರುವುದು ಸುಲಭವಲ್ಲ, ಹೊರಬರದ್ದಿರೆ ಉಳಿಗಾಲವಿಲ್ಲ. ಇದು ಆಸ್ಟ್ರೇಲಿಯದ ಸ್ಥಿತಿ.

ಇನ್ನೊಂದೆಡೆ ಶ್ರೀಲಂಕಾದ ಆತ್ಮವಿಶ್ವಾಸ ಬಹಳ ಎತ್ತರದಲ್ಲಿದೆ. ಅದೇನೂ ದೊಡ್ಡ ತಂಡವನ್ನು ಉರುಳಿಸಿಲ್ಲ. ಸೋಲಿಸಿದ್ದು ಅಷ್ಟೇನೂ ಅನುಭವಿಯಲ್ಲದ ಐರ್ಲೆಂಡ್‌ ಪಡೆಯನ್ನು. ಅಂತರ ಮಾತ್ರ ದೊಡ್ಡದು, 9 ವಿಕೆಟ್‌.
ಉರುಳಿದ 8 ಐರಿಷ್‌ ವಿಕೆಟ್‌ಗಳಲ್ಲಿ 5 ಸ್ಪಿನ್ನರ್‌ಗಳ ಪಾಲಾಗಿದ್ದವು. ಹೀಗಾಗಿ ಆಸೀಸ್‌ ವಿರುದ್ಧವೂ ಲಂಕಾ ಸ್ಪಿನ್‌ ಬಲವನ್ನೇ ಹೆಚ್ಚು ನೆಚ್ಚಿಕೊಂಡಿದೆ.

ವನಿಂದು ಹಸರಂಗ ಟ್ರಂಪ್‌ಕಾರ್ಡ್‌ ಆದಾರು ಎಂಬ ನಂಬಿಕೆ ಹೊಂದಿದೆ. ಈ ವಿಶ್ವಕಪ್‌ನಲ್ಲಿ ಅವರು ಸರ್ವಾಧಿಕ 9 ವಿಕೆಟ್‌ ಉರುಳಿಸಿದ್ದಾರೆ. ಹಾಗೆಯೇ ಆಫ್ಸ್ಪಿನ್ನರ್‌ ಮಹೀಶ್‌ ತೀಕ್ಷಣ ಕೂಡ ಅಪಾಯಕಾರಿ. ಇವರಿಬ್ಬರನ್ನು ಟಾರ್ಗೆಟ್‌ ಮಾಡುವುದು ತಮ್ಮ ಯೋಜನೆ ಎಂದು ಮಿಚೆಲ್‌ ಮಾರ್ಷ್‌ ಹೇಳಿದ್ದರಲ್ಲಿ ತಪ್ಪೇನಿಲ್ಲ.

ದಾಖಲೆಗಳಲ್ಲಿ ಆಸ್ಟ್ರೇಲಿಯ ತುಸು ಮುಂದಿದೆ. ಕಾಂಗರೂ ನೆಲದಲ್ಲಿ ಶ್ರೀಲಂಕಾ ಒಟ್ಟು 14 ಟಿ20 ಪಂದ್ಯಗಳನ್ನಾಡಿದ್ದು, ಆಸ್ಟ್ರೇಲಿಯ 7ರಲ್ಲಿ, ಲಂಕಾ 6ರಲ್ಲಿ ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಇತ್ತಂಡಗಳ 4 ಟಿ20 ವಿಶ್ವಕಪ್‌ ಪಂದ್ಯಗಳಲ್ಲಿ ಆಸೀಸ್‌ ಮೂರನ್ನು ಗೆದ್ದಿದೆ. ಉಳಿದೊಂದು ಪಂದ್ಯ ಲಂಕಾ ಪಾಲಾಗಿದೆ.

 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.