ಅರಣ್ಯಾಧಿಕಾರಿ ವಿರುದ್ಧ ಬಾರುಕೋಲು ಚಳವಳಿ; ಒಕ್ಕಲೆಬ್ಬಿಸಲು ಹುನ್ನಾರ

ಡಿ.11ರಂದು ಜಿಲ್ಲಾ ಉಸ್ತುವಾರಿ ಸಚಿವ ಜಾಗೇರಿಗೆ ಆಗಮಿಸಲಿದ್ದು ಅಲ್ಲಿ ರೈತರ ಸಮಸ್ಯೆ ಪರಿಹರಿಸಬೇಕು.

Team Udayavani, Dec 9, 2022, 5:40 PM IST

ಅರಣ್ಯಾಧಿಕಾರಿ ವಿರುದ್ಧ ಬಾರುಕೋಲು ಚಳವಳಿ; ಒಕ್ಕಲೆಬ್ಬಿಸಲು ಹುನ್ನಾರ

ಕೊಳ್ಳೇಗಾಲ: ತಾಲೂಕಿನ ಜಾಗೇರಿ ಸಮೀಪದ ಬೂದಗಟ್ಟೆ ದೊಡ್ಡಿ ರೈತ ಮುಖಂಡರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದನ್ನು ಖಂಡಿಸಿ ಅಧಿಕಾರಿಗಳ ವಿರುದ್ಧ ಬಾರುಕೋಲು ಚಳವಳಿಯನ್ನು ರೈತ ಮುಖಂಡರು ಗುರುವಾರ ನಡೆಸಿದರು.

ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರು ನಗರದ ಡಾ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಬಳಿ ಜಮಾವಣೆಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಡಾ.ಅಂಬೇಡ್ಕರ್‌, ಡಾ.ರಾಜ್‌ಕುಮಾರ್‌ ರಸ್ತೆ, ಐಬಿ ರಸ್ತೆ, ಆರ್‌ ಎಂಸಿ ರಸ್ತೆಯ ಮೂಲಕ ಉಪ ಅರಣ್ಯ ಸಂರಕ್ಷಣೆ ಅಧಿಕಾರಿಗಳ ಕಚೇರಿಗೆ ಬಂದು ಸೇರಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತ ಮುಖಂಡರು ಸಮಸ್ಯೆಯನ್ನು ಆಲಿಸದೇ ಡಿಎಫ್ಒ ಸಂತೋಷ್‌ ಫ‌ಲಾಯಾನ ಮಾಡುವ ಮೂಲಕ ರೈತರಿಗೆ ದ್ರೋಹ ಎಸಗಿದ್ದಾರೆಂದು ಆರೋಪಿಸಿದರು.ಡಿ.12ರಂದು ಹನೂರು ತಾಲೂಕಿಗೆ ಮುಖ್ಯಮಂತ್ರಿಬರಲಿದ್ದು, ಅಂದು ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿ ಸಮಸ್ಯೆ ಪರಿಹರಿಸುವಂತೆ ಧರಣಿ ನಡೆಸುವುದಾಗಿ ಹೇಳಿದರು.

ಡಿ.11ರಂದು ಜಿಲ್ಲಾ ಉಸ್ತುವಾರಿ ಸಚಿವ ಜಾಗೇರಿಗೆ ಆಗಮಿಸಲಿದ್ದು ಅಲ್ಲಿ ರೈತರ ಸಮಸ್ಯೆ ಪರಿಹರಿಸಬೇಕು. ಇಲ್ಲವಾದ ಪಕ್ಷದಲ್ಲಿ ಮುಖ್ಯಮಂತ್ರಿಗಳ ವಿರುದ್ಧವೇ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಚಳವಳಿಯಲ್ಲಿ ಉಪಾಧ್ಯಕ್ಷ ಮಹೇಶ್‌ ಪ್ರಭು,ರಾಜ್ಯ ಸಮಿತಿ ಸದಸ್ಯ ಪ್ರಸನ್ನ ಗೌಡ, ಮೈಸೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕುಮಾರ್‌, ಮುಖಂಡರಾದ ಸಿದ್ದರಾಜು, ಶೈಲೇಂದ್ರ, ಸಂತೋಷ್‌, ಬಸವರಾಜು, ರೈತ ಮುಖಂಡರು, ಮಹಿಳೆಯರು ಇದ್ದರು.

ಟಾಪ್ ನ್ಯೂಸ್

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-qeqwqew

Gundlupete: ಕೊಳೆತ ಸ್ಥಿತಿಯಲ್ಲಿ ಹುಲಿಯ ಮೃತ ದೇಹ ಪತ್ತೆ

1-wqewqe

Gundlupete; ಓವರ್ ಟೇಕ್ ಭರದಲ್ಲಿ ಅಪಘಾತ: ಬೈಕ್ ಸವಾರ ಮೃತ್ಯು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.