ಶಿವಮೊಗ್ಗದ ಅಕ್ರಮ ಕಸಾಯಿಖಾನೆಯಲ್ಲಿ 7 ಹಸುಗಳ ಕತ್ತು ಕೊಯ್ದು ಬರ್ಬರ ಹತ್ಯೆ
Team Udayavani, Jan 13, 2023, 1:13 PM IST
ಶಿವಮೊಗ್ಗ: ಅಕ್ರಮ ಕಸಾಯಿಖಾನೆಯಲ್ಲಿ ಏಳು ಹಸುಗಳ ಕತ್ತುಕೊಯ್ದು ಬರ್ಬರ ಹತ್ಯೆ ನಡೆಸಿದ ಘಟನೆ ಶಿವಮೊಗ್ಗ ಹೊರವಲಯದ ಸೂಳೇಬೈಲಿನಲ್ಲಿ ನಡೆದಿದೆ.
ಸೂಳೆಬೈಲಿನ ಅಜೀಜ್ ಎಂಬುವರ ಮನೆ ಹಿಂಭಾಗದ ಶೆಡ್ ನಲ್ಲಿ ಮಾಂಸಕ್ಕಾಗಿ ಗೋವುಗಳ ಹತ್ಯೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಇಂದು ಬೆಳಿಗ್ಗೆ 5.30 ಕ್ಕೆ ತುಂಗಾ ನಗರ ಠಾಣೆ ಪಿಐ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ದಾಳಿ ಮಾಡಿದ್ದಾರೆ. ಆದರೆ ಈ ವೇಳೆ ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರ ದಾಳಿಗೂ ಮುನ್ನವೇ ಏಳು ಹಸುಗಳ ಮಾರಣಹೋಮ ನಡೆದಿದೆ.
ಇದನ್ನೂ ಓದಿ:ಉಚಿತ ವಿದ್ಯುತ್ ಕಾಂಗ್ರೆಸ್ ನ ಸುಳ್ಳು ಡಂಗುರ: ಸಚಿವ ಸುನಿಲ್ ಕುಮಾರ್
ದಾಳಿ ಬೆನ್ನಲ್ಲೆ ಆರೋಪಿಗಳು ಪರಾರಿಯಾಗಿದ್ದಾರೆ. ಅಜೀಜ್, ಬಾಬು, ಅಬ್ದುಲ್ ಸತ್ತರ್ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಪೊಲೀಸರು ಕಸಾಯಿಖಾನೆಯಲ್ಲಿದ್ದ ಉಳಿದ 10 ಹಸು ರಕ್ಷಣೆ ಮಾಡಿದ್ದಾರೆ. ಗೋವುಗಳನ್ನು ಗೋಶಾಲೆಗೆ ಶಿಫ್ಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು