ಗಿಬ್ಬನ್ ಕೋತಿ ಮರಿ ಹಾಕಿದ್ದು ಹೇಗೆ? ಕಾರಣ ಹೀಗೆ ಬಯಲಾಯ್ತು….
Team Udayavani, Feb 15, 2023, 7:35 AM IST
ಟೋಕಿಯೋ:ಜಪಾನಿನ ನಾಗಸಾಕಿಯ ಕುಜುಕುಜಿಮಾ ಮೃಗಾಲಯದಲ್ಲಿ ಪ್ರತ್ಯೇಕ ಬೋನ್ನಲ್ಲಿದ್ದರೂ, ಗರ್ಭಿಣಿಯಾಗಿ ಆಡಳಿತ ಸಿಬ್ಬಂದಿಗೆ ಅಚ್ಚರಿ ಮೂಡಿಸಿದ್ದ ಗಿಬ್ಬನ್ ತಳಿಯ ಕೋತಿ ಆರೋಗ್ಯಯುತವಾದ ಮರಿಗೆ ಜನ್ಮ ನೀಡಿದೆ. ಇದೀಗ ಅದಕ್ಕೆ ಕಾರಣ ಯಾರು ಎಂಬ ಅಂಶವನ್ನು ಡಿಎನ್ಎ ಪರೀಕ್ಷೆ ಮೂಲಕ ಮೃಗಾಲಯದ ಆಡಳಿತ ಮಂಡಳಿ ಖಚಿತಪಡಿಸಿದೆ.
12 ವರ್ಷದ ಮೋಮೋ ಎಂಬ ಹೆಸರಿನ ಹೆಣ್ಣು ಕೋತಿ ಏಕಾಂಗಿಯಾಗಿತ್ತು. ಅದಕ್ಕೆ ಅಲ್ಲಿನ ಸಿಬ್ಬಂದಿ ಗಂಡು ಕೋತಿಯ ಸಾಮೀಪ್ಯ ನೀಡಿರಲಿಲ್ಲ. ಹೀಗಾಗಿ, ಹೆಣ್ಣು ಕೋತಿ ಮರಿಗೆ ಜನ್ಮ ನೀಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿತ್ತು.
ಪಕ್ಕದ ಬೋನಿನಲ್ಲಿ ಇದ್ದ 34 ವರ್ಷದ ಗಿಬ್ಬನ್ ತಳಿಯ ಗಂಡು ಕೋತಿಯೇ ಅದಕ್ಕೆ ಕಾರಣ. ಎರಡು ಬೋನುಗಳ ನಡುವೆ ಅಂತರ ಕಡಿಮೆ ಇದ್ದ ಕಾರಣ, ಎರಡೂ ಕೋತಿಗಳು ಸಹಜವಾಗಿಯೇ ಸಾಮಿಪ್ಯಕ್ಕೆ ಬಂದಿವೆ. ಹೀಗಾಗಿ, ಆರೋಗ್ಯಯುತ ಮರಿ ಜನಿಸಿದೆ ಎಂಬ ಅಂಶ ದೃಢಪಟ್ಟಿದೆ.
ಇನ್ನು ಮರಿ ಕೋತಿ 2 ಕೆಜಿ ತೂಕವಿದ್ದು, ಆರೋಗ್ಯಯುತವಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!