ಸಿರಿ ಲಂಬೋದರ ವಿವಾಹ ವಿಮರ್ಶೆ: ಸಸ್ಪೆನ್ಸ್‌-ಕಾಮಿಡಿ ಉಣಬಡಿಸುವ ಎಸ್‌ಎಲ್‌ವಿ


Team Udayavani, Feb 18, 2023, 12:01 PM IST

Siri lambodara vivah review

“ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಅನ್ನುವ ಮಾತು ಇಂದಿಗೂ ಪ್ರಸ್ತುತ. ಆದರೆ ಒಬ್ಬರು ಉತ್ತರ ಅಂದರೆ, ಇನ್ನೊಬ್ಬರು ದಕ್ಷಿಣ ಅನ್ನುವ ಜೋಡಿ ಸೇರಿ ಮದುವೆ ಮಾಡಿಸೋಕೆ ಹೊರಟರೆ ಆ ಮದುವೆ ಪರಿಸ್ಥಿತಿ ಏನಾಗಬಹುದು! ಹೌದು, ಇಂಥದ್ದೆ ಒಂದು ಕಾಮಿಡಿ ಜರ್ನಿಯ ಕಥೆ ಈ ವಾರ ತೆರೆಕಂಡ “ಎಸ್‌ಎಲ್‌ವಿ’ (ಸಿರಿ ಲಂಬೋದರ ವಿವಾಹ) ಚಿತ್ರ.

ಚಿತ್ರದ ನಾಯಕ ಸಂಜಯ್‌ ಮತ್ತು ನಾಯಕಿ ಲೀಲಾ ಇಬ್ಬರೂ ಬಾಲ್ಯ ಸ್ನೇಹಿತರು. ಮೇಲಾಗಿ ಇಬ್ಬರ ತಂದೆಯಂದಿರೂ ಸ್ನೇಹಿತರು. ಸ್ನೇಹಿತರಾದರೂ ವಿಚಿತ್ರ ಎಂಬ ಇವರ ತಂದೆಯರ ಬಾಂಡಿಂಗ್‌. ಅದೇ ಕಿತ್ತಾಟದ ಸ್ನೇಹ ಈ ಇಬ್ಬರಲ್ಲೂ ಇದೆ. ಸಂಜಯ್‌ ಮತ್ತು ಲೀಲಾ ಜೀವನದಲ್ಲಿ ಅದ್ಧೂರಿಯಾಗಿ ಬದುಕಬೇಕೆಂಬ ಕನಸು ಹೊತ್ತವರು. ವಿಧಿಯಾಟ ಅವರ ಯೋಚನೆಗಳು ತಲೆಕೆಳಗಾಗಿ, ವೆಡ್ಡಿಂಗ್‌ ಪ್ಲಾನರ್‌ಗಳಾಗಿ ಕೆಲಸ ಆರಂಭಿಸುತ್ತಾರೆ. ಬಾಲ್ಯದಿಂದಲೂ ಪೈಪೋಟಿ ಮನೋಭಾವದ ಈ ಇಬ್ಬರೂ ತಮ್ಮ ಪ್ರೊಫೆಷನ್‌ನಲ್ಲೂ ಪೈಪೋಟಿ ಮುಂದುವರಿಸುತ್ತಾರೆ. ಲೈಫ್ ಚೆಂಜಿಂಗ್‌ ಅನ್ನುವ ಒಂದು ಸುರ್ವಣಾವಕಾಶ, ರಾಜಕಾರಿಣಿಗಳ ಮಕ್ಕಳ ಮದುವೆ ಮಾಡಿಸುವುದು ಇವರ ಪಾಲಾಗುತ್ತದೆ. ಈ ಗಲಾಟೆ ಜೋಡಿ “ಸಿರಿ ಲಂಬೋದರ ವಿವಾಹ’ವನ್ನು ನೇರವೇರಿಸುತ್ತಾರಾ? ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.

“ಎಸ್‌ಎಲ್‌ವಿ’ ಸಿನಿಮಾದ ಮೊದಲಾರ್ಧ ನಾಯಕ-ನಾಯಕಿಯರ ಕಿತ್ತಾಟ, ಕಾಮಿಡಿ ನಡುವೆ ಒಂದೊಂದು ಆ್ಯಕ್ಷನ್‌ ಸೀನ್‌ಗಳ ಮೂಲಕ ಸಾಗುತ್ತದೆ. ಆದರೆ ಕಥೆಗೆ ನಿಜವಾದ ಸಸ್ಪೆನ್ಸ್‌ ನೀಡುವುದೇ ದ್ವಿತಿಯಾರ್ಧ. ಪಂಚಿಂಗ್‌ ಕಾಮಿಡಿಗೆ ನಗುವ ಪ್ರೇಕ್ಷಕರನ್ನು ದ್ವಿತಿಯಾರ್ಧ ಗಂಭೀರವಾಗಿಸುವಂತೆ ಮಾಡುತ್ತದೆ. ನಿರ್ದೇಶಕ ಸೌರಭ್‌ ಕುಲರ್ಕಣಿ ತಮ್ಮ ಮೊದಲ ಪ್ರಯತ್ನದಲ್ಲೇ ಸಂಪೂರ್ಣ ಮನರಂಜನೆ ನೀಡುವ ಕಡೆಗೆ ಶ್ರಮ ವಹಿಸಿದ್ದಾರೆ ಎಂಬುದು ಚಿತ್ರದಲ್ಲಿ ಕಾಣುತ್ತದೆ. ಚಿತ್ರಕಥೆ ಇನ್ನಷ್ಟು ಬಿಗಿಯಾಗಿದ್ದರೆ ಚಿತ್ರ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಆದರೂ ಒಂದೊಳ್ಳೆ ಪ್ರಯತ್ನವಾಗಿ “ಎಸ್‌ಎಲ್‌ವಿ’ಯನ್ನು ಮೆಚ್ಚುಬಹುದು.

ಇನ್ನು ನಾಯಕ ಅಂಜನ್‌ ಭಾರಾದ್ವಾಜ್‌, ನಾಯಕಿ ದಿಶಾ ಮೊದಲ ಪ್ರಯತ್ನದಲ್ಲೆ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಸುಂದರ್‌, ರಾಜೇಶ್‌ ನಟರಂಗ, ಬಾಲಾ ರಾಜವಾಡಿ, ರೋಹಿತ್‌ ಸೇರಿದಂತೆ ಪ್ರಮುಖ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ವಾಣಿ ಭಟ್ಟ

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.