ಹೃದಯವಿದ್ರಾಹಕ ಘಟನೆ: ಮಗನ ಅಂತ್ಯಕ್ರಿಯೆ ನಡೆದ ಕೆಲ ಹೊತ್ತಿನಲ್ಲೇ ಹೃದಯಘಾತದಿಂದ ತಂದೆ ಸಾವು
Team Udayavani, Feb 24, 2023, 11:08 PM IST
ಬೀದರ: ಮಗನ ಅಂತ್ಯಕ್ರಿಯೆ ಮಾಡಿ ಮನೆಗೆ ಬಂದ ಬಳಿಕ ತಂದೆ ಸಹ ಸಾವಿಗೀಡಾದ ಹೃದಯವಿದ್ರಾಹಕ ಘಟನೆ ಮಾಳೆಗಾಂವ್ ನಲ್ಲಿ ಶುಕ್ರವಾರ ನಡೆದಿದೆ.
ಆರೋಗ್ಯ ಸಮಸ್ಯೆ ಕಾರಣ ಭೀಮಣ್ಣ ಮಾದಪ್ಪನೋರ್ (40) ಗುರುವಾರ ನಿಧನ ಹೊಂದಿದ್ದರು. ಶುಕ್ರವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಿ ಕುಟುಂಬಸ್ಥರು ಮನೆಗೆ ಬಂದಿದ್ದಾರೆ. ಸಣ್ಣ ವಯಸ್ಸಿನ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ತಂದೆ ಸಿದ್ರಾಮಪ್ಪ (90) ಮನೆಗೆ ಬಂದ ತಕ್ಷಣ ಹೃದಯಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.
ಪತ್ನಿ, ಇಬ್ಬರು ಪುತ್ರರು, ಇಬ್ಬರು ಪತ್ರಿಯರನ್ನು ಅಗಲಿದ್ದು, ಶನಿವಾರ ಮಧ್ಯಾಹ್ನ 12.30ಕ್ಕೆ ಮಾಳೆಗಾಂವ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ: ತಿಕೋಟಾ ಸುತ್ತಮುತ್ತ ಭಾರಿ ಸದ್ದಿನೊಂದಿಗೆ ಭೂಕಂಪನ: ಮನೆಗಳಿಂದ ಹೊರ ಓಡಿ ಬಂದ ಜನ