ಡೈಲಿ ಡೋಸ್‌: ಆಡಿಸುವಾತ ಆಟವ ಮುಗಿಸಿ ಸೀಟಿ ಊದಿದ ಓಡುವಾತನ ಕುರ್ಚಿ ಕಸಿದು ಕೆಳಗೆ ಕೂರಿಸಿದ !

Team Udayavani, Mar 30, 2023, 7:58 AM IST

poli

ಕುರ್ಚಿ ಹಿಡಿದುಕೊಳ್ಳುವ ಭರದಲ್ಲಿ ಕೆಲವರು
ಬೀಳುವುದುಂಟು
ಇನ್ನೂ ಕೆಲವರು ಕಾಲನ್ನೇ ಮುರಿದುಕೊಳ್ಳುವುದೂ ಉಂಟು. ಎಲ್ಲವೂ ಅಷ್ಟೇ. ಆಟ ನಮ್ಮದಲ್ಲ
ನೋಟವಷ್ಟೇ ನಮ್ಮದು.

ಮ್ಯೂಸಿಕ್‌ ಚೇರ್‌ ಆಟ ನೋಡಿರ್ಬೇಕು, ಆಡಿರಲೂ ಬೇಕು ಎಲ್ಲರೂ. ಬಹಳ ಇಂಟರೆಸ್ಟಿಂಗ್‌ ಆಟ ಅದು. ಆಟ ಆಡಿಸೋರು ಸೀಟಿ ಹಾಕ್ತಾರೆ. ಕೂಡಲೇ ಕುರ್ಚಿ ಪಕ್ಕದಲ್ಲಿ ನಿಂತವರು ಓಡುತ್ತಾ ಸುತ್ತು ಹಾಕಬೇಕು. ನಿಧಾನವಾಗಿ ಅಥವಾ ಬಿರುಸಾಗಿ ನಡೆಯುವಂತೆಯೂ ಇಲ್ಲ. ಆಗ ಸೀಟಿ ಹಾಕೋರು ಜೋರಾಗಿ “ಓಡಿ..ಓಡಬೇಕು” ಎಂದು ಹುಕುಂ ಹೊರಡಿಸುತ್ತಾರೆ. ಆಗ ಓಡಲೇಬೇಕು. ಹೀಗೆ ಸುತ್ತು ಹಾಕುವಾಗ ಸೀಟಿ ಹಾಕುವವರ ಸೀಟಿ ಊದಿ ಬಿಡುತ್ತದೆ. ಆಗ ಈ ಓಡ್ತಾ ಇದ್ದ ಮಂದಿ ಗಕ್ಕನೆ ನಿಂತು ತಮ್ಮ ಹತ್ತಿರದ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು. ಯಾರಿಗೆ ಕುರ್ಚಿ ಸಿಗಲಿಲ್ಲವೋ ಅವರು ಪಂದ್ಯದಿಂದ ಔಟ್‌. ಅಂದರೆ ಹೊರಗೆ.

ಒಂದು ಮಾತು ಇದೆ. ಇರುವ ಆಟಗಾರರಿಗಿಂತ ಒಂದು ಕುರ್ಚಿ ಕಡಿಮೆ ಇರುತ್ತದೆ. ಅದಕ್ಕೇ ಅದು ಇಂಟರೆಸ್ಟಿಂಗ್‌ ಅಂದದ್ದು. ಈ ಪಂದ್ಯದ ಎರಡು ವಾಸ್ತವಗಳೆಂದರೆ, ಒಂದು- ಒಬ್ಬರಿಗಂತೂ ಸೀಟು ಖೋತಾ. ಎರಡನೆಯದು- ಕುರ್ಚಿ ಹಿಡಿಯಲಿಕ್ಕೆ ಪೈಪೋಟಿ ಇದ್ದೇ ಇರುತ್ತೆ ಎಂಬುದು.

ಈಗ ಚುನಾವಣೆ ಘೋಷಣೆ ಯಾಗಿದೆ. ಈ ಬದಿಯಲ್ಲಿ ಇದ್ದ ಸೀಟಿ ಊದುವವರು ಊದಾಯಿತು. ಈಗ ಓಡುವವರೂ ಓಡಲಿಕ್ಕೆ ಶುರು ಮಾಡಿದ್ದಾರೆ. ಒಬ್ಬರಿಗಿಂತ ಒಬ್ಬರು ಜೋರು. ಅಷ್ಟೇ ಏಕೆ? ಅವರು ಓಡಿಸೋಕೆ, ಬಾಲ ತಿಪ್ಪಲಿಕ್ಕೆ ಬೇರೆ ಜನಾ ಇದ್ದಾರೆ. ಯಾಕೆಂದರೆ ಓಡಬೇಕಲ್ಲ ವೇಗವಾಗಿ. ಸೀಟು ಹಿಡ್ಕೊಂಡ್ರೆ ಸಾಲದು, ಅದು ಹಿಡಿದುಕೊಂಡು ಕುಳಿತುಕೊಳ್ಳಬೇಕು. ಇಲ್ಲದೇ ಇದ್ದರೆ ಪಕ್ಕದವನು ಕುಳಿತುಕೊಂಡ್ರೆ ಕಷ್ಟ. ಯಾಕೆಂದರೆ ಗೇಮ್‌ ರೂಲ್‌ ಪ್ರಕಾರ ಸೀಟು ಹಿಡಿದರೆ ಸಾಲದು, ಕುಳಿತುಕೊಂಡಿರಲೇಬೇಕು.

ಅದಕ್ಕೇ ಉತ್ಸಾಹ ತುಂಬಲಿಕ್ಕೆ ಒಂದಿಷ್ಟು ಮಂದಿ ಜೈಕಾರ ಹಾಕ್ತಾರೆ, ಇನ್ನೊಂದಿಷ್ಟು ಮಂದಿ ಚಪ್ಪಾಳೆ ತಟ್ತಾರೆ. ಆದರೆ ಕುರ್ಚಿ ಪಕ್ಕ ಓಡೋರು ಓಡ್ತಾನೇ ಇರಬೇಕು.
ಈಗ ಪಂದ್ಯ ಶುರುವಾಗಿದೆ. ಓಟವೂ ಶುರು ವಾಗಿದೆ. ಈ ಬದಿಯಲ್ಲಿ ಕುಳಿತ ಸೀಟಿ ಊದೋರು ಆ ಬದಿಯಲ್ಲಿದ್ದವರಿಗಿಂತ ಜೋರು. ಐದೂ ಸುತ್ತೂ ಹೊಡೆಸಬಹುದು, ಆರು ಸುತ್ತೂ ಹೊಡೆಸಬಹುದು. ಇಲ್ಲ, ಇರಲಿ.. ತಾಕತ್‌ ಇದ್ದರೆ ಕುದುರೆ ಓಡಲಿ ಅಂತಾ ಹತ್ತು ರೌಂಡ್‌ ಸಹ ಹೊಡೆಸಬಹುದು. ಹತ್ತೂವರೆ ರೌಂಡಿಗೆ ಇಳಿದಾಗ ಪಟ್ಟನೆ ಸೀಟಿ ಊದಿಬಿಡಬಹುದು. ಆಗ ಎಷ್ಟು ಜನರಿಗೆ ಕುರ್ಚಿ ಸಿಗುತ್ತೋ? ಎಷ್ಟು ಜನರಿಗೆ ಕುರ್ಚಿ ಹೋಗುತ್ತೋ?

ವಿಚಿತ್ರವೆಂದರೆ, ಎಲ್ಲವೂ ಈ ಬದಿಯಲ್ಲಿ ಕುಳಿತು ಸೀಟಿ ಊದೋರಿಗೆ ಮೊದಲೇಗೊತ್ತು. ಆದರೂ ಸುಮ್ಮನೆ ಸೀಟಿ ಊದ್ತಾರೆ, ಆಟ ಆಡಿ ಸ್ತಾರೆ. ಪಂದ್ಯ ಮುಗಿಯುವವರೆಗೂ ಗೊಂದಲ ದಲ್ಲೇ ಇರಿಸುತ್ತಾರೆ. ಕಾಲ ಕೆಳಗಿನ ಚಾಪೆ ಎಳೆದಾ ಗಲೇ ರಿಸಲ್ಟ್ ಗೊತ್ತಾಗೋದು!

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.