ತಮಿಳುನಾಡಿನ 45 ಸ್ಥಳಗಳಲ್ಲಿ RSS ಪಥಸಂಚಲನ

ತಮಿಳುನಾಡು ಸರ್ಕಾರ ಜತೆ ನಡೆದಿತ್ತು ಕಾನೂನು ಹೋರಾಟ

Team Udayavani, Apr 17, 2023, 7:05 AM IST

RSS MARCH

ಚೆನ್ನೈ: ಕಾನೂನು ಹೋರಾಟದ ನಂತರ ತಮಿಳುನಾಡಿನ 45 ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು(ಆರ್‌ಎಸ್‌ಎಸ್‌) ಭಾನುವಾರ ಪಥಸಂಚಲನ ನಡೆಸಿತು.

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ಚೆನ್ನೈ, ವೆಲ್ಲೂರ್‌, ಹೊಸೂರು, ಸೇಲಂ, ಚೆಂಗಲ್‌ಪಟ್ಟು, ಕಾಂಚೀಪುರಂ, ತಿರುವಣ್ಣಮಲೈ, ಅರಣಿ, ಕೊಯಂಮತ್ತೂರು, ಮೆಟ್ಟುಪಾಳ್ಯಂ, ಪಲ್ಲಾಡಂ, ಕರೂರ್‌, ತಂಕಾಸಿ, ಕನ್ಯಾಕುಮಾರಿ, ಮಧುರೈ ಸೇರಿದಂತೆ ತಮಿಳುನಾಡಿನ 45 ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಭಾನುವಾರ ಪಥಸಂಚಲನ ನಡೆಸಿತು. ಪಥಸಂಚಲನದಲ್ಲಿ ನೂರಾರು ಆರ್‌ಎಸ್‌ಎಸ್‌ ಕಾರ್ಯಕರ್ತರು ಭಾಗವಹಿಸಿದ್ದರು. ಇದೇ ವೇಳೆ ಬಹಿರಂಗ ಸಾರ್ವಜನಿಕ ಸಭೆಗಳು ನಡೆಯಿತು.

ಚೆನ್ನೈ ಹೊರವಲಯದ ಕರಟ್ಟೂರ್‌ ಪ್ರದೇಶದಲ್ಲಿ ನಡೆದ 5 ಕಿ.ಮೀ. ಪಥಸಂಚಲನದಲ್ಲಿ ಕೇಂದ್ರ ಮೀನುಗಾರಿಕೆ ಸಚಿವ ಡಿ.ಎಲ್‌.ಮುರುಗನ್‌ ಪಾಲ್ಗೊಂಡಿದ್ದರು.

ಕಳೆದ ವರ್ಷದ ಅ.2ರಂದು ಪಥಸಂಚಲನ ನಡೆಸಲು ಆರ್‌ಎಸ್‌ಎಸ್‌ ತಮಿಳುನಾಡು ಸರ್ಕಾರದ ಅನುಮತಿ ಕೋರಿತ್ತು. ಆದರೆ, ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ್ದರಿಂದ ಮದ್ರಾಸ್‌ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ಹೋರಾಟ ನಡೆದಿತ್ತು. ಡಿಎಂಕೆ ಸರ್ಕಾರ ಅನುಮತಿ ನೀಡದೇ ಇದ್ದುದನ್ನು ಪ್ರಶ್ನಿಸಿ ಆರ್‌ಎಸ್‌ಎಸ್‌ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿತ್ತು. ಪಥಸಂಚಲನ ನಡೆಸಲು ಹೈಕೋರ್ಟ್‌ ಅನುಮತಿ ನೀಡಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಡಿಎಂಕೆ ಸರ್ಕಾರ, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಏ.11ರಂದು ತಮಿಳುನಾಡು ಸರ್ಕಾರದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌, ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ತೀರ್ಪುನ್ನು ಎತ್ತಿಹಿಡಿಯಿತು.

“ಆರ್‌ಎಸ್‌ಎಸ್‌ ಪಥಸಂಚಲನವನ್ನು ನಿರ್ವಹಿಸಲು ಕಷ್ಟವಾಗಬಹುದು ಮತ್ತು ಅಸ್ಥಿರತೆಗೆ ಕಾರಣವಾಗಬಹುದು” ಎಂದು ತಮಿಳುನಾಡು ಸರ್ಕಾರ ತನ್ನ ಅರ್ಜಿಯಲ್ಲಿ ಹೇಳಿತ್ತು. ಮುಚ್ಚಿದ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಮದ್ರಾಸ್‌ ಹೈಕೋರ್ಟ್‌ ಸೂಚಿಸಿದ ನಂತರವೂ ಸರ್ಕಾರ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿತ್ತು.

ಟಾಪ್ ನ್ಯೂಸ್

‌IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್‌ ತೀಕ್ಷ್ಣ ತಿರುಗೇಟು!

‌IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್‌ ತೀಕ್ಷ್ಣ ತಿರುಗೇಟು!

1-wewewqe

Kaduru; ನಿಂತಿದ್ದ ಲಾರಿಗೆ ಟಿಟಿ ಢಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ

Jaishankar

Mind Game; ಪಾಶ್ಚಿಮಾತ್ಯ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ ಜೈಶಂಕರ್

crime (2)

Hubli: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಭೀಕರ ಹತ್ಯೆ!

1-wwqwewq

Vijayapura NTPC ಚಿಮಣಿ ಮೇಲಿಂದ ಬಿದ್ದು UP ಮೂಲದ ಕಾರ್ಮಿಕ ಸಾವು

ISREL

Rafah; ಇಸ್ರೇಲ್ ಗೆ 1 ಬಿಲಿಯನ್ ಡಾಲರ್ ನ ಶಸ್ತ್ರಾಸ್ತ್ರ ಕಳುಹಿಸುತ್ತಿರುವ ಅಮೆರಿಕ

1-wqqqwe

Rajasthan; ಗಣಿಯಲ್ಲಿ ಲಿಫ್ಟ್ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ 14 ಮಂದಿಯ ರಕ್ಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್‌ ತೀಕ್ಷ್ಣ ತಿರುಗೇಟು!

‌IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್‌ ತೀಕ್ಷ್ಣ ತಿರುಗೇಟು!

Jaishankar

Mind Game; ಪಾಶ್ಚಿಮಾತ್ಯ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ ಜೈಶಂಕರ್

1-wqqqwe

Rajasthan; ಗಣಿಯಲ್ಲಿ ಲಿಫ್ಟ್ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ 14 ಮಂದಿಯ ರಕ್ಷಣೆ

Excise Policy Case: ಆಪ್‌ ಆರೋಪಿ! ದಿಲ್ಲಿ ಹೈಕೋರ್ಟ್‌ಗೆ ಇ.ಡಿ. ಮಾಹಿತಿ

Excise Policy Case: ಆಪ್‌ ಆರೋಪಿ! ದಿಲ್ಲಿ ಹೈಕೋರ್ಟ್‌ಗೆ ಇ.ಡಿ. ಮಾಹಿತಿ

Muslims also have allies, attempt to undermine my charisma: PM

Election; ಮುಸ್ಲಿಮರಲ್ಲೂ ಮಿತ್ರರಿದ್ದಾರೆ, ನನ್ನ ವರ್ಚಸ್ಸಿಗೆ ಧಕ್ಕೆ ತರಲು ಯತ್ನ: ಪಿಎಂ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

‌IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್‌ ತೀಕ್ಷ್ಣ ತಿರುಗೇಟು!

‌IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್‌ ತೀಕ್ಷ್ಣ ತಿರುಗೇಟು!

1-wewewqe

Kaduru; ನಿಂತಿದ್ದ ಲಾರಿಗೆ ಟಿಟಿ ಢಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ

Jaishankar

Mind Game; ಪಾಶ್ಚಿಮಾತ್ಯ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ ಜೈಶಂಕರ್

crime (2)

Hubli: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಭೀಕರ ಹತ್ಯೆ!

1-wwqwewq

Vijayapura NTPC ಚಿಮಣಿ ಮೇಲಿಂದ ಬಿದ್ದು UP ಮೂಲದ ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.