Hunsur; 3.5 ಲಕ್ಷ ರೂನ ಆಭರಣವಿದ್ದ ಬ್ಯಾಗ್ ಮಾಲಕರಿಗೊಪ್ಪಿಸಿದ ಪೊಲೀಸರು

ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್

Team Udayavani, Apr 24, 2023, 10:29 PM IST

1-sdsads

ಹುಣಸೂರು: ಅಪರಿಚಿತ ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗನ್ನು ಪತ್ತೆಮಾಡಿ 3.5 ಲಕ್ಷರೂ ಬೆಲೆಬಾಳುವ ಆಭರಣವನ್ನು ಕಳೆದುಕೊಂಡಿದ್ದ ಮಾಲಿಕರಿಗೆ ನಗರ ಠಾಣೆ ಪೊಲೀಸರು ಒಪ್ಪಿಸಿದ್ದಾರೆ.

ಹುಣಸೂರು ನಗರದ ಶಬ್ಬೀರ್‌ನಗರದ ಸಫೀರ್ ಅಹಮದ್, ರಜಿಯಾ ಬೇಗಂ ಚಿನ್ನಾಭರಣದ ಬ್ಯಾಗ್ ಕಳೆದುಕೊಂಡಿದ್ದವರು.

ಶಬ್ಬೀರ್‌ನಗರದ ಸಫೀರ್ ಅಹಮದ್ ಮತ್ತವರ ಪತ್ನಿ ರಜಿಯಾಬೇಗಂ ತಮ್ಮ ಮನೆಯ ಬಳಿಯಿಂದ ಶನಿವಾರ ಸಂಜೆ 6 ಗಂಟೆ ವೇಳೆಯಲ್ಲಿ ಆಟೋ ಹತ್ತಿ ನಗರದ ಬಸ್ ನಿಲ್ದಾಣಕ್ಕೆ ಬಂದು ಕೆ.ಆರ್.ನಗರ ಕಡೆಗೆ ತೆರಳುವ ಬಸ್ ಹತ್ತಿ ಹಾಸನದತ್ತ ಪ್ರಯಾಣ ಬೆಳೆಸಿದ್ದರು, ಹಾಸನಕ್ಕೆ ಹೋಗುವ ವೇಳೆ ಚಿನ್ನಾಭರಣವಿದ್ದ ಬ್ಯಾಕ್ ಕಾಣೆಯಾಗಿರುವುದು ಪತ್ತೆಯಾಗಿದೆ. ತಕ್ಷಣವೇ ವಾಪಸ್ ಮರಳಿ ಮನೆಯಲ್ಲಿ ಹುಡುಕಾಡಿ ನಂತರ ರಾತ್ರಿ ಠಾಣೆಗೆ ಬಂದು ರಾತ್ರಿ 10 ರ ವೇಳೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆಟೋ ಪತ್ತೆಗೆ ಕ್ರಮ
ದೂರು ದಾಖಲಾಗುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಇನ್ಸ್ಪೆಕ್ಟರ್ ದೇವೇಂದ್ರರ ನೇತೃತ್ವದಲ್ಲಿ ಎ.ಎಸ್.ಐ.ರವಿ ಹಾಗೂ ಸಿಬ್ಬಂದಿಗಳು ನಗರದ ವಿವಿಧ ಆಟೋ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಹುಡುಕಾಟ ನಡೆಸಿ, ಬಸ್ ನಿಲ್ದಾಣದ ರಸ್ತೆ ಬದಿಯ ಅಂಗಡಿಗಳ ಸಿ.ಸಿ.ಕ್ಯಾಮರಾದಲ್ಲಿ ದಾಖಲಾಗಿದ್ದ ಆಟೋವನ್ನು ಕೊನೆಗೂ ಲಾಲ್‌ಬಂದ್ ಬೀದಿಯ ಮನೆ ಬಳಿಯಲ್ಲಿ ನಿಂತಿರುವುದು ಪತ್ತೆಯಾಯಿತು. ಆಟೋ ಚಾಲಕ ಮಹಮದ್ ಇಲಿಯಾಸ್ ಚಿನ್ನಾಭರಣವಿದ್ದ ಬ್ಯಾಂಗ್‌ನ್ನು ಗಮನಿಸದೆ ತನ್ನ ಆಟೋವನ್ನು ಮನೆ ಮುಂದೆ ನಿಲ್ಲಿಸಿದ್ದರು. ಆಟೋದಲ್ಲಿ ಹುಡುಕಾಟ ನಡೆಸಿದ ವೇಳೆ ಚಿನ್ನಾಭರಣ ಇದ್ದ ಬ್ಯಾಗ್ ಸೀಟಿನ ಹಿಂಬದಿಯಲ್ಲಿ ಪತ್ತೆಯಾಯಿತು.

ಆಟೋಸೀಟಿನ ಹಿಂಬದಿಯಲ್ಲಿ ಇಟ್ಟು ಪ್ರಯಾಣಿಕ ಸಫೀರ್ ಅಹಮದ್ ಇಳಿದು ಬಸ್ ಹತ್ತಿದ್ದರು. ಚಾಲಕ ಸಹ ಗಮನಿಸದೆ ಮನೆಗೆ ತೆರಳಿದ್ದರು. ಇನ್ಸ್ಪೆಕ್ಟರ್ ದೇವೇಂದ್ರರವರು ಚಿನ್ನಾಭರಣವಿದ್ದ ಬ್ಯಾಗನ್ನು ಮಾಲಿಕ ಸಫೀರ್ ಅಹಮದ್‌ರಿಗೆ ಒಪ್ಪಿಸಿದರು. ಕಳೆದು ಹೋಗಿದ್ದ ೬೫ ಗ್ರಾಂ.ಚಿನ್ನಾಭರಣ ಸಿಕ್ಕ ಸಂಭ್ರಮದಲ್ಲಿ ಸಫೀರ್ ಅಹಮದ್ ಪೊಲೀಸರು ಹಾಗೂ ಆಟೋ ಚಾಲಕನಿಗೆ ಧನ್ಯವಾದ ಹೇಳಿ ಮನೆಯತ್ತ ತೆರಳಿದರೆ, ಮಾಲಿಕರಿಗೆ ಆಭರಣವನ್ನು ಮರಳಿಸಿದ ಸಂತಸದಲ್ಲಿದ್ದರು.

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

2-hunsur

Hunsur: ಹೆದ್ದಾರಿ ಸರ್ವೆ ಕಾರ್ಯ ತಡೆದು ರೈತರ ಆಕ್ರೋಶ

1-sadsadas

Hunsur; ಬೈಕ್‌ಗಳ ಮುಖಾಮುಖಿ: ಓರ್ವ ಸಾವು, ಇಬ್ಬರು ಗಂಭೀರ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.