ಕೆಲಸಗಾರ ಬೇಕೇ ಹೊರತು ಮಾತುಗಾರನಲ್ಲ: ಸಚಿವ ಡಾ| ಸುಧಾಕರ್‌

ಹುಟ್ಟೂರಿನಿಂದಲೇ ಚುನಾವಣ ಪ್ರಚಾರಕ್ಕೆ ಚಾಲನೆ

Team Udayavani, Apr 25, 2023, 5:51 AM IST

ಕೆಲಸಗಾರ ಬೇಕೇ ಹೊರತು ಮಾತುಗಾರನಲ್ಲ: ಸಚಿವ ಡಾ| ಸುಧಾಕರ್‌

ಚಿಕ್ಕಬಳ್ಳಾಪುರ: ಕ್ಷೇತ್ರಕ್ಕೆ ಅಗತ್ಯವಿರುವುದು ಕೆಲಸಗಾರನೇ ಹೊರತು ಮಾತುಗಾರನಲ್ಲ. ನಾವು ಆಡುವ ಮಾತೇ ಸಾಧನೆಯಾಗಬಾರದು, ಬದಲಿಗೆ ನಾವು ಮಾಡುವ ಕೆಲಸ ಸಾಧನೆಯಾಗಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ವಿರುದ್ಧ ಸಚಿವ ಡಾ| ಕೆ. ಸುಧಾಕರ್‌ ವಾಗ್ಧಾಳಿ ನಡೆಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ತಮ್ಮ ತವರೂರು ಪೆರೇಸಂದ್ರದಲ್ಲಿ ಸೋಮವಾರ ಗ್ರಾಮ ದೇವತೆ ರಾಜರಾಜೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಪೆರೇಸಂದ್ರ ಕ್ರಾಸ್‌ನಲ್ಲಿ ಚುನಾವಣ ಪ್ರಚಾರಕ್ಕೆ ವಿಧ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಕೆಲವರು ತಮ್ಮನ್ನು ಸುನಾಮಿ ಅಂತ ಬಿಂಬಿಸಿಕೊಂಡಿದ್ದಾರೆ. ಸುನಾಮಿ ಬಂದರೆ ಯಾರಾದರೂ ಬದುಕುಳಿಯಲು ಸಾಧ್ಯವೇ? ಬರೀ ಡೈಲಾಗ್‌, ಸ್ಲೋಗನ್‌ಗಳಿಂದ ಹೊಟ್ಟೆ ತುಂಬದು ಎಂದರು.

ಕೈಗಾರಿಕೆ ಸ್ಥಾಪನೆ ಭರವಸೆ
ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕೆಂದು ಶಾಸಕ ಸ್ಥಾನವನ್ನು ಪಣಕ್ಕಿಟ್ಟು ರಾಜೀನಾಮೆ ನೀಡಿ ವೈದ್ಯಕೀಯ ಕಾಲೇಜು ತಂದೆ. ನನಗೆ ಜನರ ಬದುಕು ಮುಖ್ಯ. ನನ್ನ ಜನರ ಹಾಗೂ ಕ್ಷೇತ್ರದ ಮಕ್ಕಳ ಭವಿಷ್ಯ ಮುಖ್ಯ. ಮುಂದಿನ ಐದು ವರ್ಷಗಳಲ್ಲಿ ಪ್ರತಿ ಮನೆಗೂ ಉದ್ಯೋಗ ನೀಡುವ ಕೆಲಸ ಮಾಡುತ್ತೇನೆ. ಅನೇಕ ಕೈಗಾರಿಕೆಗಳನ್ನು ಚಿಕ್ಕಬಳ್ಳಾಪುರಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಶಿಕ್ಷಕನ ಕುಟುಂಬದಿಂದ ಬಂದವನು ನಾನು, ರೈತ ಹಿನ್ನೆಲೆಯಿಂದ ಬಂದು ಅಕ್ಷರ ನೀಡುವವರ ಮಗನಾಗಿ ಇಂದು ಸಚಿವನಾಗಿದ್ದೇನೆ. ನಾನು ಬಡವರಿಗೆ ಅನ್ನ ನೀಡುವ, ನೊಂದವರಿಗೆ ಆರೋಗ್ಯ ನೀಡುವ, ಬಡವರಿಗೆ ಆಶ್ರಯ ನೀಡುವ ಮಗನಾಗಬೇಕು ಎಂದು ಬಯಸಿದ್ದೇನೆ. ಇವುಗಳೆಲ್ಲವನ್ನೂ ಮಾಡುವ ಚೈತನ್ಯ ಮತ್ತು ಶಕ್ತಿ ನನಗಿದೆ. ನಿಮ್ಮ ಮನೆಯ ಮಗನಾಗಿ ನಿಮ್ಮ ಸೇವೆ ಮಾಡಲು ಅವಕಾಶ ನೀಡುವಂತೆ ಕೋರಿದರು.

ಕೋವಿಡ್‌ ಬಂದಾಗ ಎಲ್ಲಿದ್ದಿರಿ?
ಕೋವಿಡ್‌ ಸಂದರ್ಭದಲ್ಲಿ ಇವರೆಲ್ಲರೂ ಎಲ್ಲಿದ್ದರು? ಈಗ ಮನೆ ಮನೆಗೆ ಬಂದು ಕಾಲಿಗೆ ಬೀಳುತ್ತಿ¨ªಾರೆ. ಕಷ್ಟದ ಸಂದರ್ಭದಲ್ಲಿ ಜನರಿಗೆ ಅನ್ನ ಕೊಟ್ಟ ಉದಾಹರಣೆ ಇವರಿಗಿದೆಯೇ? ಕಳೆದ 10 ವರ್ಷಗಳಿಂದ ಮನೆಯಲ್ಲಿದ್ದ ವ್ಯಕ್ತಿ ಈಗ ವಾಕಿಂಗ್‌ ಮಾಡಿದ್ದೇ ಮಾಡಿದ್ದು. ಅವರು ಎರಡನೇ ಸ್ಥಾನಕ್ಕೆ ಬರಲು ಬಹಳ ಪ್ರಯತ್ನ ಮಾಡುತ್ತಿ¨ªಾರೆ ಎಂದು ಪರೋಕ್ಷವಾಗಿ ಜೆಡಿಎಸ್‌ ಅಭ್ಯರ್ಥಿ ಬಚ್ಚೇಗೌಡ ವಿರುದ್ಧ ಲೇವಡಿ ಮಾಡಿದರು.

 

ಟಾಪ್ ನ್ಯೂಸ್

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಡಿಮೆ ಅಂಕ: ಕುಂದಾಪುರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

SSLC ಕಡಿಮೆ ಅಂಕ: ಕುಂದಾಪುರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

Chikkaballapur: ಎಸ್ಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಧರಣಿ ಕೂತ ಪೇದೆಗಳು

Chikkaballapur: ಎಸ್ಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಧರಣಿ ಕೂತ ಪೇದೆಗಳು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

police

Chikkaballapur: ಆಂಧ್ರದಿಂದ ಗಾಂಜಾ ತರುತ್ತಿದ್ದ ಇಬ್ಬರ ಬಂಧನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.