Institution Ranking: ಬೆಂಗಳೂರಿನ ಐಐಎಸ್‌ಸಿ ದ್ವಿತೀಯ

 ರಾಜ್ಯದ 70ಕ್ಕೂ ಹೆಚ್ಚು ಸಂಸ್ಥೆಗಳಿಗೆ ಉತ್ತಮ ರ್‍ಯಾಂಕಿಂಗ್‌; ಐಐಟಿ ಮದ್ರಾಸ್‌ಗೆ ಉನ್ನತ ಸ್ಥಾನ

Team Udayavani, Jun 6, 2023, 8:25 AM IST

Institution Ranking: ಬೆಂಗಳೂರಿನ ಐಐಎಸ್‌ಸಿ ದ್ವಿತೀಯ

ಬೆಂಗಳೂರು: ಈ ಬಾರಿಯೂ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ (ಐಐಎಸ್‌ಸಿ) ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯ ಮತ್ತು ಸಂಶೋಧನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಸರಕಾರ ಬಿಡುಗಡೆ ಮಾಡಿದ 2023ನೇ ಸಾಲಿನ ನ್ಯಾಶನಲ್‌ ರ್‍ಯಾಂಕಿಂಗ್‌ ಫ್ರೆಮ್‌ವರ್ಕ್‌ (ಎಮ್‌ಐಆರ್‌ಎಫ್)ನಲ್ಲಿ ಈ ವಿಚಾರ ಬಹಿರಂಗಗೊಂಡಿದೆ.

ಸತತ 5ನೇ ವರ್ಷವೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಪಡೆದಿದೆ. ಒಟ್ಟು ರ್‍ಯಾಂಕಿಂಗ್‌ನಲ್ಲಿ 7 ಐಐಟಿಗಳು (ಮದ್ರಾಸ್‌, ಬಾಂಬೆ, ದಿಲ್ಲಿ, ಕಾನ್ಪುರ, ಖರಗ್‌ಪುರ, ರೂರ್ಕಿ ಮತ್ತು ಗುವಾಹಟಿ) ಟಾಪ್‌ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕೇಂದ್ರ ಶಿಕ್ಷಣ ಖಾತೆ ಸಹಾಯಕ ಸಚಿವ ರಾಜ್‌ಕುಮಾರ್‌ ರಂಜನ್‌ ಸಿಂಗ್‌ ಸೋಮವಾರ ಈ ರ್‍ಯಾಂಕಿಂಗ್‌ ಬಿಡುಗಡೆ ಮಾಡಿದರು. ಒಟ್ಟು ಶ್ರೇಯಾಂಕದಲ್ಲಿ ಬೆಂಗಳೂರಿನ ಐಐಎಸ್‌ಸಿ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜು ಮೊದಲ ಸ್ಥಾನ ಪಡೆದಿದೆ. ಸಂಶೋಧನ ವಿಭಾಗದಲ್ಲಿ ಐಐಎಸ್‌ಸಿ ಮೊದಲ ಸ್ಥಾನ, ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ 2ನೇ ಸ್ಥಾನಕ್ಕೆ ಪಾತ್ರವಾಗಿದೆ.

ಫಾರ್ಮಸಿ ವಿಭಾಗದಲ್ಲಿ ಜೆಎಸ್‌ಎಸ್‌ ಕಾಲೇಜ್‌ ಆಫ್ ಫಾರ್ಮಸಿ ಏಳನೇ ಸ್ಥಾನ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಮೆಂಟಲ್‌ ಹೆಲ್ತ್‌ ಆಂಡ್‌ ನ್ಯೂರೋ ಸೈನ್ಸಸ್‌, ಬೆಂಗಳೂರು (ನಿಮ್ಹಾನ್ಸ್‌) ನಾಲ್ಕನೇ ಸ್ಥಾನ, ಎ.ಬಿ. ಶೆಟ್ಟಿ ಮೆಮೊರಿಯಲ್‌ ಇನ್‌ಸ್ಟಿಟ್ಯೂಟ್‌ ಆಫ್ ಡೆಂಟಲ್‌ ಸೈನ್ಸಸ್‌, ಮಂಗಳೂರು 5ನೇ ಸ್ಥಾನ, ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸಸ್‌, ಮಂಗಳೂರು 8ನೇ ಸ್ಥಾನ ಪಡೆದಿವೆ. ವಿವಿಧ ವಿಭಾಗಗಳಲ್ಲಿ ರಾಜ್ಯದ 70 ಸಂಸ್ಥೆಗಳು ಉತ್ತಮ ಸಾಧನೆಗೈದಿವೆ.

ಒಟ್ಟು ಶ್ರೇಯಾಂಕದಲ್ಲಿ ಎನ್‌ಐಟಿಕೆ, ಸುರತ್ಕಲ್‌ 38, ಜೆಎಸ್‌ಎಸ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ 55, ಮೈಸೂರು ವಿ.ವಿ. 71, ವಿಶ್ವೇಶ್ವರಯ್ಯ ತಂತ್ರಜ್ಞಾನ ವಿ.ವಿ. 92ನೇ ರ್‍ಯಾಂಕ್‌ ಪಡೆದಿವೆ. ಅಗ್ರ 100 ವಿಶ್ವವಿದ್ಯಾನಿಲಯಗಳಲ್ಲಿ ಜೆಎಸ್‌ಎಸ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಆ್ಯಂಡ್‌ ರಿಸರ್ಜ್‌, ಮೈಸೂರು 34, ಮೈಸೂರು ವಿ.ವಿ. 44, ವಿಶ್ವೇಶ್ವರಯ್ಯ ತಂತ್ರಜ್ಞಾನ ವಿ.ವಿ. 63, ಎನ್‌ಐಟಿಕೆ, ಸುರತ್ಕಲ್‌ 65, ಕ್ರೈಸ್ಟ್‌ ವಿ.ವಿ. 67, ಜೈನ್‌ ವಿ.ವಿ. 68, ಯೇನಪೊಯ ವಿ.ವಿ. 85, ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್‌ ಸೈನ್ಸ್‌, ಬೆಂಗಳೂರು 90ನೇ ಸ್ಥಾನ ಪಡೆದಿವೆ. 10 ನಾವೀನ್ಯತ ಸಂಸ್ಥೆಗಳಲ್ಲಿ ಐಐಎಸ್‌ಸಿಗೆ ಆರನೇ ರ್‍ಯಾಂಕ್‌ ಬಂದಿದೆ.

ಮಾಹೆ ಪಾರಮ್ಯ ಮುಂದುವರಿಕೆ
ಎಂಐಆರ್‌ಎಫ್ನಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಅಂಗಸಂಸ್ಥೆಗಳ ಪಾರಮ್ಯ ಮುಂದುವರಿದಿದೆ. ಬಹುತೇಕ ಎಲ್ಲ ವಿಭಾಗಗಳಲ್ಲಿಯೂ ಮಾಹೆಗೆ ಸೇರಿದ ಸಂಸ್ಥೆಗಳು ಉತ್ತಮ ಶ್ರೇಯಾಂಕ ಪಡೆದು ದೇಶದ ಅಗ್ರಮಾನ್ಯ ಸಂಸ್ಥೆಗಳಾಗಿ ಹೊರಹೊಮ್ಮಿವೆ. ಒಟ್ಟು 100 ಅಗ್ರಮಾನ್ಯ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಕಳೆದ ವರ್ಷ 17ನೇ ಸ್ಥಾನ ಪಡೆದಿದ್ದ ಮಾಹೆ, ಮಣಿಪಾಲವು ಈ ಬಾರಿ ಒಂದು ಸ್ಥಾನ ಉತ್ತಮಪಡಿಸಿಕೊಂಡು 16ನೇ ಸ್ಥಾನಕ್ಕೇರಿದೆ. ವಿ.ವಿ.ಗಳ ಶ್ರೇಯಾಂಕದಲ್ಲಿ ಕಳೆದ ಬಾರಿ 7ರಲ್ಲಿದ್ದ ಸಂಸ್ಥೆಯು ಈ ಬಾರಿ ಆರನೇ ಸ್ಥಾನಕ್ಕೆ ಜಿಗಿದಿದೆ. ತನ್ಮೂಲಕ ದೇಶದ ಅಗ್ರ 10 ವಿ.ವಿ.ಗಳ ಸಾಲಿನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಉಳಿದಂತೆ ಎಂಜಿನಿಯರಿಂಗ್‌ವಿಭಾಗದಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ 61ನೇ ಸ್ಥಾನ, ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಟಿಎ ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌, ಮಣಿಪಾಲ 42ನೇ ಸ್ಥಾನ ಪಡೆದಿವೆ.

ಮೆಡಿಕಲ್‌ ಕಾಲೇಜು ವಿಭಾಗದಲ್ಲಿ ಕೆಎಂಸಿ, ಮಣಿಪಾಲ 9ನೇ ಸ್ಥಾನ, ಕೆಎಂಸಿ ಮಂಗಳೂರು 30ನೇ ಸ್ಥಾನ, ಫಾರ್ಮಸಿ ವಿಭಾಗದಲ್ಲಿ ಮಣಿಪಾಲ ಕಾಲೇಜ್‌ ಆಫ್ ಫಾರ್ಮಾಸ್ಯೂಟಿಕಲ್‌ ಸೈನ್ಸಸ್‌, ಮಣಿಪಾಲವು 9ನೇ ಸ್ಥಾನ ಪಡೆದುಕೊಂಡಿದೆ.ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸಸ್‌, ಮಣಿಪಾಲ ದ್ವಿತೀಯ, ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸಸ್‌, ಮಂಗಳೂರು ಎಂಟನೇ ರ್‍ಯಾಂಕ್‌ ಪಡೆದುಕೊಂಡಿವೆ. ವಾಸ್ತುಶಿಲ್ಪ ಮತ್ತು ಪ್ಲ್ರಾನಿಂಗ್‌ ವಿಭಾಗದಲ್ಲಿ ಮಣಿಪಾಲ್‌ ಸ್ಕೂಲ್‌ ಆಫ್ ಆರ್ಕಿಟೆಕ್ಚರ್‌ ಆ್ಯಂಡ್‌ ಪ್ಲ್ರಾನಿಂಗ್‌, ಮಣಿಪಾಲ 25ನೇ ಸ್ಥಾನಕ್ಕೆ ಪಾತ್ರವಾಗಿದೆ.

ಅತ್ಯುನ್ನತ ಪಟ್ಟಿಯಲ್ಲಿ ವಿಟಿಯು
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಎಂಜಿನಿಯರಿಂಗ್‌ ವಿಭಾಗದಲ್ಲಿ 52ನೇ ಸ್ಥಾನ, ವಿಶ್ವವಿದ್ಯಾನಿಲಯ ವಿಭಾಗದಲ್ಲಿ 63ನೇ ಸ್ಥಾನ, ಸಮಗ್ರ ಶಿಕ್ಷಣ ಸಂಸ್ಥೆಗಳ ಶ್ರೇಷ್ಠ 92ನೇ ಸ್ಥಾನ ಪಡೆದುಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ತನ್ನ ಶ್ರೇಯಾಂಕವನ್ನು ಹೆಚ್ಚಿಸಿಕೊಂಡಿದೆ.

ವಿಟಿಯು ರಾಷ್ಟ್ರದ ಶ್ರೇಷ್ಠ 100 ವಿವಿಗಳ (ತಾಂತ್ರಿಕ ಮತ್ತು ತಾಂತ್ರಿಕೇತರ) ವಿಭಾಗದಲ್ಲಿಯೂ 9 ಸ್ಥಾನಗಳ ಜಿಗಿತ ಕಂಡು 63ನೇ ಸ್ಥಾನ ಪಡೆದಿದೆ.

ಟಾಪ್ ನ್ಯೂಸ್

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

Prajwal Revanna Case ಕಾರ್ತಿಕ್‌ ನಿರೀಕ್ಷಣ ಜಾಮೀನು ಅರ್ಜಿ ವಜಾ

Prajwal Revanna Case ಕಾರ್ತಿಕ್‌ ನಿರೀಕ್ಷಣ ಜಾಮೀನು ಅರ್ಜಿ ವಜಾ

Prajwal Revanna ಪರ ಮಾತನಾಡಲಾರೆ, ರೇವಣ್ಣ ಪರ ಮಾತ್ರ ಹೋರಾಟ: ಕುಮಾರಸ್ವಾಮಿ

Prajwal Revanna ಪರ ಮಾತನಾಡಲಾರೆ, ರೇವಣ್ಣ ಪರ ಮಾತ್ರ ಹೋರಾಟ: ಕುಮಾರಸ್ವಾಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

Prajwal Revanna ಪರ ಮಾತನಾಡಲಾರೆ, ರೇವಣ್ಣ ಪರ ಮಾತ್ರ ಹೋರಾಟ: ಕುಮಾರಸ್ವಾಮಿ

Prajwal Revanna ಪರ ಮಾತನಾಡಲಾರೆ, ರೇವಣ್ಣ ಪರ ಮಾತ್ರ ಹೋರಾಟ: ಕುಮಾರಸ್ವಾಮಿ

Parameshwara; ಪ್ರಜ್ವಲ್‌ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ

Parameshwara; ಪ್ರಜ್ವಲ್‌ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.