ನನಗೆ ಭಯವಾಗುತ್ತಿದೆ… ನೇಣಿಗೆ ಶರಣಾದ ಉಪನ್ಯಾಸಕ : ಫ್ರಿಡ್ಜ್ ನಲ್ಲಿತ್ತು ಡೆತ್ ನೋಟ್


Team Udayavani, Jul 11, 2023, 10:23 AM IST

ಮನೆಯಲ್ಲಿ ನೇಣು ಬಿಗಿದು ಉಪನ್ಯಾಸಕ ಆತ್ಮಹತ್ಯೆ… ಫ್ರಿಡ್ಜ್ ನಲ್ಲಿತ್ತು ಡೆತ್ ನೋಟ್

ಮಹಾರಾಷ್ಟ್ರ: ಮನೆಯಲ್ಲಿ ಯಾರೂ ಇರದ ವೇಳೆ ಉಪನ್ಯಾಸಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ನಾಗ್ಪುರದ ನರೇಂದ್ರ ನಗರದ ನಿವಾಸಿಯಾಗಿರುವ ಗಜಾನನ ಜನರೋಜಿ ಕರಾಡೆ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕ.

ಕರಾಡೆ ಅವರು ನಾಗ್ಪುರದ ಜಿಎಸ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜ್ ನಲ್ಲಿ ಹಿಂದಿ ಉಪನ್ಯಾಸಕರಾಗಿ ಕಳೆದ 12 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಕುಟುಂಬದ ಮಾಹಿತಿ ಪ್ರಕಾರ ಕಳೆದ ಕೆಲ ತಿಂಗಳಿಂದ ಕರಾಡೆ ಮಾನಸಿಕವಾಗಿ ಕುಗ್ಗಿದ್ದರು ಅಲ್ಲದೆ ತಮ್ಮದೇ ಕಾಲೇಜ್ ನಲ್ಲಿ ಕೆಲ ಉಪನ್ಯಾಸಕರು ಹಾಗೂ ಕಾಲೇಜ್ ಆಡಳಿತ ಮಂಡಳಿಯ ಕೆಲ ಸದಸ್ಯರು ಮಾನಸಿಕ ಕಿರುಕುಳ ನೀಡುತ್ತಿರುವ ಕುರಿತು ನೋವಿನ ಮಾತುಗಳನ್ನು ಮನೆಮಂದಿಯೊಂದಿಗೆ ಹೇಳಿಕೊಂಡಿದ್ದರು ಎಂದು ಹೇಳಿದ್ದಾರೆ.

ಘಟನೆ ವಿವರ: ಕಳೆದ ಭಾನುವಾರ ಕರಾಡೆ ಅವರ ಪತ್ನಿ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆಂದು ಅಮರಾವತಿಗೆ ತೆರಳಿದ್ದರು ಈ ವೇಳೆ ಕರಾಡೆ ತನ್ನ ಸೋದರ ಮಾವನಿಗೆ ಕರೆ ಮಾಡಿ ಅಪರಿಚಿತ ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ನಡೆಸುತ್ತಾರೆಂಬ ಭಯ ಕಾಡುತ್ತಿದೆ ಹಾಗಾಗಿ ನನಗೇನಾದರೂ ಅಪಾಯ ಸಂಭವಿಸದರೆ ಮನೆಯ ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದ ಡೈರಿಯಲ್ಲಿ ಎಲ್ಲವನ್ನು ಬರೆದಿದ್ದೇನೆ ಯಾರು ಯಾರು ನನಗೆ ಕಿರುಕುಳ ನೀಡುತಿದ್ದರು ಎಂಬ ವಿಚಾರ ಡೈರಿಯಲ್ಲಿ ಬರೆದಿದ್ದನೆ ಎಂದು ಹೇಳಿದ್ದಾರೆ. ಈ ಮಾತು ಕೇಳಿದ ಸೋದರ ಮಾವ ಹಾಗೂ ಕರಾಡೆ ಅವರ ಪತ್ನಿ ಕೂಡಲೇ ಅಮರಾವತಿಯಿಂದ ನಾಗ್ಪುರಕ್ಕೆ ಹೊರಟಿದ್ದಾರೆ ಮನೆಗೆ ಬಂದು ನೋಡಿದಾಗ ಕರಾಡೆ ತನ್ನ ಮನೆಯ ಕೊನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಕರಾಡೆ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಿಸಿಕೊಂಡ ಪೊಲೀಸರು ಮನೆಗೆ ಬಂದು ಕುಟುಂಬದವರ ಜೊತೆ ವಿವರ ಪಡೆದು ಬಳಿಕ ಸಂಬಂಧಿಕರು ಮನೆಯ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಡೈರಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ಮಾಹಿತಿಯಂತೆ ಕಾಲೇಜ್ ನ ಕೆಲ ಪ್ರಾಧ್ಯಾಪಕರ ಹಾಗೂ ಆಡಳಿತ ಮಂಡಳಿಯ ಸದಸ್ಯರ ಹೆಸರು ಇರುವ ಕುರಿತು ಮಾಹಿತಿ ನೀಡಿದ್ದಾರೆ.
ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಬಿಗಿ ಭದ್ರತೆಯಲ್ಲಿ ಪಂಚಾಯತ್ ಚುನಾವಣೆ ಮತ ಎಣಿಕೆ ಆರಂಭ

ಟಾಪ್ ನ್ಯೂಸ್

1-wwewqewq

NADA ಬೆನ್ನಲ್ಲೇ UWW ನಿಂದಲೂ ವರ್ಷಾಂತ್ಯದ ವರೆಗೆ ಬಜರಂಗ್ ಅಮಾನತು

Politics: ಸಿಎಂ ಸಿದ್ದರಾಮಯ್ಯ “ಕಾಮ್‌ ಚೋರ್‌’: ಅಶೋಕ್‌ ಆರೋಪ

Politics: ಸಿಎಂ ಸಿದ್ದರಾಮಯ್ಯ “ಕಾಮ್‌ ಚೋರ್‌’: ಅಶೋಕ್‌ ಆರೋಪ

Revanna 2

H.D. Revanna ಮೇ 13 ರ ವರೆಗೆ ಪರಪ್ಪನ ಅಗ್ರಹಾರದಲ್ಲೇ

1-ewewqe

Gokarana; ಮಹಾಬಲೇಶ್ವರ ಗರ್ಭಗುಡಿಯ ನಂದಿ ಪೂಜೆ ವಿವಾದ: ಪ್ರತಿಭಟನೆ!

goa

Goa; ಚುನಾವಣೆ ಸಂದರ್ಭ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ

kl rahul

KL Rahul; ಮಾಲಕರ ತರಾಟೆಯ ಬಳಿಕ ಲಕ್ನೋ ತಂಡದ ನಾಯಕತ್ವ ತೊರೆದ ರಾಹುಲ್?

Explosion At Fireworks Factory Near Sivakasi

Sivakasi ಪಟಾಕಿ ಘಟಕದಲ್ಲಿ ಸ್ಪೋಟ; ಐವರು ಮಹಿಳೆಯರು ಸೇರಿ 8 ಮಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

goa

Goa; ಚುನಾವಣೆ ಸಂದರ್ಭ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ

Jaishankar

PoK ಭಾರತದ ಭಾಗ; ಮರಳುವಿಕೆ ಖಚಿತಪಡಿಸಿಕೊಳ್ಳಲು ಎಲ್ಲಾ ಪಕ್ಷಗಳು ಬದ್ಧವಾಗಿವೆ: ಜೈಶಂಕರ್

Explosion At Fireworks Factory Near Sivakasi

Sivakasi ಪಟಾಕಿ ಘಟಕದಲ್ಲಿ ಸ್ಪೋಟ; ಐವರು ಮಹಿಳೆಯರು ಸೇರಿ 8 ಮಂದಿ ಸಾವು

BJP Symbol

Pitroda’s remarks; ದೆಹಲಿ ಕಾಂಗ್ರೆಸ್ ಕಚೇರಿ ಬಳಿ ಬಿಜೆಪಿ ಪ್ರತಿಭಟನೆ

ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯದ ಆರೋಪ.. ರಾಜ್ಯಪಾಲರಿಂದ ರಾಜಭವನದ CCTV ದೃಶ್ಯ ಬಹಿರಂಗ

ಲೈಂಗಿಕ ದೌರ್ಜನ್ಯ ಎಸಗಿದ ಆರೋಪ.. ರಾಜ್ಯಪಾಲರಿಂದ ರಾಜಭವನದ CCTV ದೃಶ್ಯ ಬಹಿರಂಗ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

R. Ashok: ಸೋನಿಯಾ ಯಾರೆಂದು ಪಿತ್ರೊಡಾ ಹೇಳಲಿ?; ಅಶೋಕ್‌

R. Ashok: ಸೋನಿಯಾ ಯಾರೆಂದು ಪಿತ್ರೊಡಾ ಹೇಳಲಿ?; ಅಶೋಕ್‌

1-wwewqewq

NADA ಬೆನ್ನಲ್ಲೇ UWW ನಿಂದಲೂ ವರ್ಷಾಂತ್ಯದ ವರೆಗೆ ಬಜರಂಗ್ ಅಮಾನತು

Politics: ಸಿಎಂ ಸಿದ್ದರಾಮಯ್ಯ “ಕಾಮ್‌ ಚೋರ್‌’: ಅಶೋಕ್‌ ಆರೋಪ

Politics: ಸಿಎಂ ಸಿದ್ದರಾಮಯ್ಯ “ಕಾಮ್‌ ಚೋರ್‌’: ಅಶೋಕ್‌ ಆರೋಪ

Kundapur: ಸರಣಿ ಅಪಘಾತ: ಹಲವರಿಗೆ ಗಾಯ

Kundapur: ಸರಣಿ ಅಪಘಾತ: ಹಲವರಿಗೆ ಗಾಯ

ತಲೆ ತಿರುಗಿ ಬಿದ್ದು ವ್ಯಕ್ತಿ ಸಾವು

ತಲೆ ತಿರುಗಿ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.