Udupi: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅಧಿಕಾರಿಗಳ ನೇಮಕ

ಹಳ್ಳಿಗಳಲ್ಲಿ ಏರುತ್ತಿರುವ ರಾಜಕೀಯ ತೆರೆ ಮರೆಯ ರಂಗು ; ಆ.17ರ ಬಳಿಕ ಚುನಾವಣೆ

Team Udayavani, Aug 4, 2023, 3:23 PM IST

13-udupi-eletion

ಉಡುಪಿ/ಕಾಪು/ಬ್ರಹ್ಮಾವರ: ಗ್ರಾ. ಪಂ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆ.17ರ ಅನಂತರ ಹಲವೆಡೆ ನಡೆಯುವ ಸಾಧ್ಯತೆ ಇದ್ದು, ಜಿಲ್ಲೆಯ ಎಲ್ಲ ಗ್ರಾ. ಪಂ.ಗಳಿಗೆ ಈಗಾಗಲೇ ಗೊತ್ತುಪಡಿಸಿದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಕ ಮಾಡಿದ್ದಾರೆ.

ಬ್ರಹ್ಮಾವರ ತಾಲೂಕಿನ ಕನ್ಯಾನ ಗ್ರಾ.ಪಂ.ನಲ್ಲಿ ವಿಳಂಬವಾಗಿ ಚುನಾವಣೆ ನಡೆದ ಕಾರಣ ಅಲ್ಲಿನ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದಿಲ್ಲ. ಕುಂದಾಪುರ ತಾಲೂಕಿನ ಹೊಸಾಡು ಗ್ರಾ.ಪಂ.ನಲ್ಲಿ ಚುನಾವಣೆ ನಡೆದಿಲ್ಲ. ಇವೆರಡು ಬಿಟ್ಟು ಜಿಲ್ಲೆಯ 153 ಗ್ರಾ.ಪಂ.ಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.

ಜಿಲ್ಲೆಯಲ್ಲಿ ಈಗಾಗಲೇ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮುಂದಿನ ಎರಡೂವರೆ ವರ್ಷದ ಅವಧಿಗೆ ಜಿಲ್ಲಾಡಳಿತ ಮೀಸಲಾತಿ ನಿಗದಿಗೊಳಿಸಿದೆ. ಗ್ರಾ. ಪಂ. ಅಧಿಕಾರಕ್ಕಾಗಿ ಕಾಂಗ್ರೆಸ್‌-ಬಿಜೆಪಿ ಬೆಂಬಲಿಗರಿಂದ ಬಾರಿ ಕಸರತ್ತು ನಡೆಯುತ್ತಿದ್ದು, ಹಳ್ಳಿ ರಾಜಕಾರಣ ಗರಿಗೆದರಿದೆ. ಮೀಸಲಾತಿ ಅರ್ಹತೆ ಪಡೆದ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಎಲ್ಲ ರೀತಿಯ ರಾಜಕೀಯ ಲೆಕ್ಕಾಚಾರ ಆರಂಭಗೊಂಡಿದೆ.

ಗ್ರಾ.ಪಂ.ಗಳಲ್ಲಿ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ನಡೆಯುವುದರಿಂದ ಕೆಲವು ಕಡೆಗಳಲ್ಲಿ ಅಧಿಕಾರಕ್ಕಾಗಿ ಹಣ ಬಲ, ಪಕ್ಷ ಬಲವು ಹೆಚ್ಚಾಗಿ ನಡೆಯುತ್ತಿದೆ. ಕೆಲವು ಗ್ರಾ.ಪಂ.ಗಳಲ್ಲಿ ಅವಿರೋಧ ಆಯ್ಕೆ ಸಾಧ್ಯತೆ ಹೆಚ್ಚಿದೆ. ಕೆಲವು ಕಡೆ ಗಳಲ್ಲಿ ಕಳೆದ ಮೊದಲನೇ ಅವಧಿಯಲ್ಲಿ ಇದ್ದಂತಹ ಗ್ರಾ.ಪಂ. ಸದಸ್ಯರು ಬೇರೆ ಒಂದು ಗುಂಪಿನಿಂದ ಮತ್ತೂಂದು ಗುಂಪುಗಳಿಗೆ ಅಧಿಕಾರಕ್ಕಾಗಿ ಬದಲಾವಣೆ ಆಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕೆ ಶಾಸಕರ ಖರೀದಿ ಇದ್ದಂತೆ ಗ್ರಾ. ಪಂ. ಮಟ್ಟದಲ್ಲಿಯೂ ಸಹ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು, ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿದಿದೆ. ಜಿಲ್ಲೆಯಲ್ಲಿ ಎಲ್ಲ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿರುವ ಹಿನ್ನೆಲೆಯಲ್ಲಿ ಎರಡು ರಾಜಕೀಯ ಪಕ್ಷಗಳ ಲೆಕ್ಕಾಚಾರ ಸೂಕ್ಷ್ಮವಾಗಿ ರೂಪುಗೊಳ್ಳುತ್ತಿವೆ. ಈ ನೆಲೆಯಲ್ಲಿ ಮುಂಬರುವ ತಾ.ಪಂ., ಜಿ.ಪಂ. ಹಾಗೂ ಲೋಕಸಭಾ ಚುನಾವಣೆ ವೇಳೆಗೆ ಹಳ್ಳಿ ರಾಜಕೀಯ ಚಿತ್ರಣವೇ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗಳಿಂದ ಬದಲಾಗುವ ಸಾಧ್ಯತೆ ದಟ್ಟವಾಗಿದೆ.

ತಾಲೂಕಿನ ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನೇಮಕಗೊಂಡ ಅಧಿಕಾರಿಗಳ ವಿವರ ಇಂತಿದೆ:

ಉಡುಪಿ ತಾಲೂಕು: 16 ಗ್ರಾ.ಪಂ.

ಪೆರ್ಡೂರು, ಕುಕ್ಕೆಹಳ್ಳಿ: ಎಸ್‌.ಎನ್‌. ರಮೇಶ್‌, ಸಹಾಯಕ ನಿರ್ದೇಶಕರು, ತಾಲೂಕು ಸಮಾಜ ಕಲ್ಯಾಣ ಇಲಾಖೆ;

ಬೈರಂಪಳ್ಳಿ, ಬೊಮ್ಮರಬೆಟ್ಟು: ಗೌತಮ್‌ ಶಾಸ್ತ್ರಿ, ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ;

ಕಲ್ಯಾಣಪುರ, ತೋನ್ಸೆ: ಶಂಕರ್‌, ಜಿಲ್ಲಾ ವ್ಯವಸ್ಥಾಪಕರು, ಅಂಬೇಡ್ಕರ್‌ ನಿಗಮ;

ತೆಂಕನಿಡಿಯೂರು, ಬಡಾನಿಡಿಯೂರು: ಮೋಹನ್‌ರಾಜ್‌, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ;

ಅಂಬಲಪಾಡಿ, ಕಡೆಕಾರು: ಚಂದ್ರೇಗೌಡ, ಬಿಇಒ, ಉಡುಪಿ;

ಉದ್ಯಾವರ, 80 ಬಡಗಬೆಟ್ಟು: ನಿಧೀಶ್‌, ಸಹಾಯಕ ತೋಟಗಾರಿಕಾ ನಿರ್ದೇಶಕರು;

ಆತ್ರಾಡಿ, ಕೊಡಿಬೆಟ್ಟು: ಹಾಜಿರಾ ಸಜಿನಿ, ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ;

ಮಣಿಪುರ, ಅಲೆವೂರು: ವಿನಾಯಕ ಪೂಜಾರ್‌, ಎಇಇ, ಲೋಕೋಪಯೋಗಿ ಇಲಾಖೆ.

ಬ್ರಹ್ಮಾವರ ತಾಲೂಕು: 26 ಗ್ರಾ.ಪಂ.

ಕೋಟತಟ್ಟು, ಕೋಟ: ಎಚ್‌.ವಿ. ಇಬ್ರಾಹಿಂಪುರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ,

ಪಾಂಡೇಶ್ವರ, ಐರೋಡಿ: ಇಂದು ಎಂ. ಸಾಲಿಗ್ರಾಮ ಪ.ಪಂ. ಮುಖ್ಯಾಧಿಕಾರಿ,

ಬಾರಕೂರು, ವಡ್ಡರ್ಸೆ: ಸುಪ್ರಭಾ, ಕೋಟ ಸಹಾಯಕ ಕೃಷಿ ಅಧಿಕಾರಿ,

ಯಡ್ತಾಡಿ, ಶಿರಿಯಾರ: ಕೆ. ರಂಗನಾಥ ಕ್ಷೇತ್ರ ಶಿಕ್ಷಣಾಧಿಕಾರಿ,

ಬಿಲ್ಲಾಡಿ, ಆವರ್ಸೆ: ಅಶೋಕ ಪೂಜಾರಿ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌,

ಹೆಗ್ಗುಂಜೆ, ಹನೆಹಳ್ಳಿ: ಪವಿತ್ರಾ ಎಸ್‌., ಕೋಟದ ಸಹಾಯಕ ತೋಟಗಾರಿಕಾ ಅಧಿಕಾರಿ,

ಕಾಡೂರು, ನಾಲ್ಕೂರು: ಡಾ| ಪ್ರದೀಪ್‌ ಕುಮಾರ್‌, ಸಾಯಿಬ್ರಕಟ್ಟೆ ಪಶು ವೈದ್ಯಾಧಿಕಾರಿ,

ಕೊಕ್ಕರ್ಣೆ, ಚೇರ್ಕಾಡಿ: ಮಹಾಂತೇಶ, ಬ್ರಹ್ಮಾವರ ಸಹಾಯಕ ತೋಟಗಾರಿಕೆ ಅಧಿಕಾರಿ,

ಕಳ್ತೂರು, ಕರ್ಜೆ: ಡಾ| ಮಂಜುನಾಥ ಅಡಿಗ, ಕಳ್ತೂರು ಪಶು ವೈದ್ಯಾಧಿಕಾರಿ,

ಆರೂರು, ಉಪ್ಪೂರು: ಕುಮಾರ್‌ ನಾಯಕ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ,

ವಾರಂಬಳ್ಳಿ, ಹಾರಾಡಿ: ಪಾಪಣ್ಣ ಎನ್‌.ಎ., ಬಾರಕೂರು ಕಾಲೇಜು ಸಹಾಯಕ ಪ್ರಾಧ್ಯಾಪಕ,

ಚಾಂತಾರು, ಹಾವಂಜೆ: ಸತೀಶ್‌ ಕುಮಾರ್‌, ಸಹಾಯಕ ಪ್ರಾಧ್ಯಾಪಕ,

ಹಂದಾಡಿ, ನೀಲಾವರ: ರಾಘವ ಶೆಟ್ಟಿ ಶಿಕ್ಷಣ ಸಂಯೋಜಕ.

ಕಾಪು ತಾಲೂಕು: 16 ಗ್ರಾ.ಪಂ.

ಬೆಳ್ಳೆ, ಮುದರಂಗಡಿ, ಪಲಿಮಾರು: ಗುರುಪ್ರಸಾದ್‌, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ,

ಕುರ್ಕಾಲು,ಶಿರ್ವ, ಕಟಪಾಡಿ: ಸಚಿನ್‌, ಮೀನುಗಾರಿಕಾ ಸಹಾಯಕ ನಿರ್ದೇಶಕರು, ಉಡುಪಿ,

ಇನ್ನಂಜೆ, ಮಜೂರು, ಪಡುಬಿದ್ರಿ: ವರುಣ್‌ ಕೆ.ಜೆ., ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ ಉಡುಪಿ,

ಕೋಟೆ: ವಿವೇಕಾನಂದ ಗಾಂವ್ಕರ್‌, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಉಡುಪಿ,

ಕುತ್ಯಾರು, ಎಲ್ಲೂರು: ವೆಂಕಟೇಶ್‌, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಉಡುಪಿ,

ಬೆಳಪು, ಬಡಾ: ನಿಧೀಶ್‌ ಕೆ.ಜೆ., ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಉಡುಪಿ,

ತೆಂಕ, ಹೆಜಮಾಡಿ: ಅಶ್ವಿ‌ನಿ ಎಂ.ಎಂ., ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ.

ಟಾಪ್ ನ್ಯೂಸ್

ಪೆನ್‌ಡ್ರೈವ್‌ ಪ್ರಕರಣ: ಕಲಾಪ ತಾತ್ಕಾಲಿಕ ಸ್ಥಳಾಂತರಕ್ಕೆ ರಿಜಿಸ್ಟ್ರಾರ್‌ಗೆ ಪತ್ರ

ಪೆನ್‌ಡ್ರೈವ್‌ ಪ್ರಕರಣ: ಕಲಾಪ ತಾತ್ಕಾಲಿಕ ಸ್ಥಳಾಂತರಕ್ಕೆ ರಿಜಿಸ್ಟ್ರಾರ್‌ಗೆ ಪತ್ರ

Hasana: “ದೇಶ ಆಳಿದ ಕುಟುಂಬ ಸದಸ್ಯನ ದುಷ್ಕೃತ್ಯ ಬೇಸರ ತರಿಸಿದೆ’: ಕೆ.ಎಂ.ಶಿವಲಿಂಗೇಗೌಡ

Hasana: “ದೇಶ ಆಳಿದ ಕುಟುಂಬ ಸದಸ್ಯನ ದುಷ್ಕೃತ್ಯ ಬೇಸರ ತರಿಸಿದೆ’: ಕೆ.ಎಂ.ಶಿವಲಿಂಗೇಗೌಡ

1-wqeqewqe

Mass sick leave; ವಜಾಗೊಂಡ ಎಲ್ಲಾ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್ ಸಿಬಂದಿ ಮರುನೇಮಕ

1-wwewqewq

NADA ಬೆನ್ನಲ್ಲೇ UWW ನಿಂದಲೂ ವರ್ಷಾಂತ್ಯದ ವರೆಗೆ ಬಜರಂಗ್ ಅಮಾನತು

Politics: ಸಿಎಂ ಸಿದ್ದರಾಮಯ್ಯ “ಕಾಮ್‌ ಚೋರ್‌’: ಅಶೋಕ್‌ ಆರೋಪ

Politics: ಸಿಎಂ ಸಿದ್ದರಾಮಯ್ಯ “ಕಾಮ್‌ ಚೋರ್‌’: ಅಶೋಕ್‌ ಆರೋಪ

Revanna 2

H.D. Revanna ಮೇ 13 ರ ವರೆಗೆ ಪರಪ್ಪನ ಅಗ್ರಹಾರದಲ್ಲೇ

1-ewewqe

Gokarana; ಮಹಾಬಲೇಶ್ವರ ಗರ್ಭಗುಡಿಯ ನಂದಿ ಪೂಜೆ ವಿವಾದ: ಪ್ರತಿಭಟನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

ಬಡಾನಿಡಿಯೂರು: ಊಟ ಮಾಡುತ್ತಿರುವಾಗಲೇ ವ್ಯಕ್ತಿ ಸಾವು

Missing: ಕನ್ನರ್ಪಾಡಿ; ಮದುವೆಗೆ ಬಂದ ವ್ಯಕ್ತಿ ನಾಪತ್ತೆ

Missing: ಕನ್ನರ್ಪಾಡಿ; ಮದುವೆಗೆ ಬಂದ ವ್ಯಕ್ತಿ ನಾಪತ್ತೆ

Cricket Betting: ಆ್ಯಪ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌; ಪ್ರಕರಣ ದಾಖಲು

Cricket Betting: ಆ್ಯಪ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌; ಪ್ರಕರಣ ದಾಖಲು

4-udupi

Udupi: ನಾಳೆ ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

HD Revanna: ರೇವಣ್ಣಗೆ ಧೈರ್ಯ ತುಂಬಿದ ಜೆಡಿಎಸ್‌ ಶಾಸಕರು

HD Revanna: ರೇವಣ್ಣಗೆ ಧೈರ್ಯ ತುಂಬಿದ ಜೆಡಿಎಸ್‌ ಶಾಸಕರು

ಪೆನ್‌ಡ್ರೈವ್‌ ಪ್ರಕರಣ: ಕಲಾಪ ತಾತ್ಕಾಲಿಕ ಸ್ಥಳಾಂತರಕ್ಕೆ ರಿಜಿಸ್ಟ್ರಾರ್‌ಗೆ ಪತ್ರ

ಪೆನ್‌ಡ್ರೈವ್‌ ಪ್ರಕರಣ: ಕಲಾಪ ತಾತ್ಕಾಲಿಕ ಸ್ಥಳಾಂತರಕ್ಕೆ ರಿಜಿಸ್ಟ್ರಾರ್‌ಗೆ ಪತ್ರ

Hasana: “ದೇಶ ಆಳಿದ ಕುಟುಂಬ ಸದಸ್ಯನ ದುಷ್ಕೃತ್ಯ ಬೇಸರ ತರಿಸಿದೆ’: ಕೆ.ಎಂ.ಶಿವಲಿಂಗೇಗೌಡ

Hasana: “ದೇಶ ಆಳಿದ ಕುಟುಂಬ ಸದಸ್ಯನ ದುಷ್ಕೃತ್ಯ ಬೇಸರ ತರಿಸಿದೆ’: ಕೆ.ಎಂ.ಶಿವಲಿಂಗೇಗೌಡ

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

1-ka

Udupi; ಶ್ರೀ ಕೃಷ್ಣ ಮಠದಲ್ಲಿ ಸ್ವರ್ಣಾಲಯದ ಶುಭಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.