Laxmeshwar: ಭಾವೈಕ್ಯದ ಕೊರಿಕೊಪ್ಪ ಆಂಜನೇಯ ದೇವಸ್ಥಾನ…ಇಲ್ಲಿ ಮುಸ್ಲಿಮರೇ ಅರ್ಚಕರು

ಆಂಜನೇಯ ದೇವಸ್ಥಾನ ನೂರಾರು ವರ್ಷಗಳ ಹಿನ್ನೆಲೆ ಹೊಂದಿದೆ

Team Udayavani, Aug 28, 2023, 6:29 PM IST

Laxmeshwar: ಭಾವೈಕ್ಯದ ಕೊರಿಕೊಪ್ಪ ಆಂಜನೇಯ ದೇವಸ್ಥಾನ…ಇಲ್ಲಿ ಮುಸ್ಲಿಮರೇ ಅರ್ಚಕರು

ಲಕ್ಷ್ಮೇಶ್ವರ: ದೇಶದಲ್ಲಿ ಇವತ್ತಿಗೂ ಅನೇಕ ಕಡೆ ಹಿಂದೂ-ಮುಸ್ಲಿಮರು ಜಾತಿ, ಧರ್ಮ ಭೇದ ಮರೆತು ಸಹೋದರತೆಯಿಂದ ಬಾಳುತ್ತಾ ಬಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ಹಬ್ಬ ಹರಿದಿನ, ಜಾತ್ರೆ, ಸಂಪ್ರದಾಯ ಆಚರಣೆ ಸಂದರ್ಭದಲ್ಲಿ ಇದನ್ನು ಕಾಣಬಹುದಾಗಿದೆ.

ಇದಕ್ಕೆ ಲಕ್ಷ್ಮೇಶ್ವರದ ಸಮೀಪದ ಅಡರಕಟ್ಟಿ- ಕೊಂಡಿಕೊಪ್ಪ ಗ್ರಾಮದ ಬಳಿ ಕೊರಿಕೊಪ್ಪ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಉತ್ತಮ ಉದಾಹರಣೆಯಾಗಿದೆ. ವಿಶೇಷವಾಗಿ ಈ ದೇವಸ್ಥಾನವನ್ನು ತಲೆ ತಲಾಂತರಗಳಿಂದ ಮುಸ್ಲಿಂ, ಹಿಂದೂ ಬಾಂಧವರು ನಡೆದುಕೊಳ್ಳುತ್ತಿದ್ದು, ಇಲ್ಲಿಗೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಪೂಜೆಯನ್ನು ಪು. ಬಡ್ನಿ ಗ್ರಾಮದ ಮುಸ್ಲಿಂ ಕುಟುಂಬದವರೇ ಮಾಡುತ್ತಾ ಬಂದಿದ್ದಾರೆ. ಅದಕ್ಕಾಗಿ ಅವರಿಗೆ ದೇಗುಲಕ್ಕೆ ಹೊಂದಿಕೊಂಡಂತೆ ಜಮೀನಿದೆ.

ದೇವಸ್ಥಾನದ ಹಿನ್ನೆಲೆ: ಕೊರಿಕೊಪ್ಪ ಆಂಜನೇಯ ದೇವಸ್ಥಾನ ನೂರಾರು ವರ್ಷಗಳ ಹಿನ್ನೆಲೆ ಹೊಂದಿದೆ. ದೇವಸ್ಥಾವಿರುವ ಪ್ರದೇಶದಲ್ಲಿ ಹಿಂದೆ ಕೊನೇರಿಕೊಪ್ಪ, ಕೊರಿಕೊಪ್ಪ ಹಾಗೂ ಕೊಂಡಿಕೊಪ್ಪ ಎಂಬ ಗ್ರಾಮಗಳು ಇದ್ದವು. ಈ ಗ್ರಾಮಗಳಲ್ಲಿನ ಜನರು ಪ್ಲೇಗ್‌, ಸಿಡುಬು, ಕಾಲರಾಗಳಂತ ಸಾಂಕ್ರಾಮಿಕ ಕಾಯಿಲೆಗಳಿಂದ ಗ್ರಾಮಗಳನ್ನು ತೊರೆದು ಬೇರೆಡೆ ನೆಲೆ ನಿಂತರು. ಇದಕ್ಕೆ ಸಾಕ್ಷಿ ಎಂಬಂತೆ ಈ ಸ್ಥಳದಲ್ಲಿರುವ ಆಂಜನೇಯ, ದೇವಿ ದೇವಸ್ಥಾನ, ಇಲ್ಲಿನ ಜಮೀನುಗಳಲ್ಲಿ ಈಗಲೂ ಆಗಾಗ್ಗೆ ಕಾಣಸಿಗುವ ಒಡೆದ ಮಣ್ಣಿನ ಮಡಕೆ, ಬಿಸುವ ಕಲ್ಲು, ಒಳ್ಳಕಲ್ಲು, ಧಾನ್ಯ ಸಂಗ್ರಹದ ಹಗೆವು ಪತ್ತೆಯಾಗುತ್ತವೆ.

ಅಲ್ಲದೇ ವಿಶೇಷತೆ ಹೊಂದಿರುವ ದೇವಸ್ಥಾನದ ಸುತ್ತ ನಿಧಿ ಸಿಗುತ್ತದೆಂಬ ಕಾರಣದಿಂದ ದೇವಸ್ಥಾನದ ಸುತ್ತಲು ನಿಧಿ ಕಳ್ಳರು ಗುಂಡಿ ತೊಡಿರುವುದು, ಮೂರ್ತಿ ಧ್ವಂಸ, ವಾಮಾಚಾರ ಮಾಡುವ ಮೂಲಕ ನಿಧಿ ಆಸೆಗೆ ಈ ಸ್ಥಳದಲ್ಲಿ ಅನೇಕ ದುಷ್ಕೃತ್ಯಗಳು ನಡೆಯುತ್ತಲೇ ಇವೆ. ಆದರೆ ಸುತ್ತಲಿನ ನೂರಾರು ರೈತರಿಗೆ ಇಷ್ಟಾರ್ಥಸಿದ್ಧಿಸುವ ದೇವಸ್ಥಾನ ಇದಾಗಿದೆ. ಕೇವಲ ಕಲ್ಲಿನ ಗೂಡಿನಂತಿರುವ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕೆಂದು ಕೊಂಡಿಕೊಪ್ಪ, ಅಡರಕಟ್ಟಿ, ಪು. ಬಡ್ನಿ, ಲಕ್ಷ್ಮೇಶ್ವರ ಭಾಗದ ರೈತರೆಲ್ಲರ ಸಂಕಲ್ಪ-ಸಹಕಾರದಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ.

ಮೂರ್ತಿ ಮರು ಪ್ರತಿಷ್ಠಾಪನೆ
ಶ್ರಾವಣ ಮಾಸದ 2ನೇ ಶನಿವಾರದ ದೇವಸ್ಥಾನದಲ್ಲಿ ಮೂಲ ಆಂಜನೇಯ ಮೂರ್ತಿ ಮರು ಪ್ರತಿಷ್ಠಾಪನೆ, ಹೋಮ, ಹವನ, ಅಭಿಷೇಕ, ಕುಂಕುಮಾರ್ಚನೆ, ಭಜನೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಶ್ರದ್ಧಾ, ಭಕ್ತಿ ನಂಬಿಕೆಯುಳ್ಳ ಅಪಾರ ಭಕ್ತರು ದರ್ಶನ ಪಡೆದರು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರೈತರಾದ ಶಿವಪುತ್ರಯ್ಯ ಶಿಗ್ಲಿಮಠ, ರಾಮಣ್ಣ ಚಿಕ್ಕಣ್ಣವರ, ಶಿವಪ್ಪ ಜೈನ್‌, ರವಿ ನಾಯಕ, ಮೊಹಮ್ಮದ್‌ ಲಕ್ಷ್ಮೇಶ್ವರ, ಲಕ್ಷ್ಮಣ ಲಮಾಣಿ, ಬಸವರಾಜ ದೊಡಮನಿ, ಅಶೋಕ ಬನ್ನಿಮಟ್ಟಿ, ಜೀನೆಶ್‌ ಜೈನ್‌, ಮಂಜು ಲಮಾಣಿ ಸೇರಿ ಹಲವರಿದ್ದರು.

ಟಾಪ್ ನ್ಯೂಸ್

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

ಈಶ್ವರ್ ಖಂಡ್ರೆ

Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

Virat kohli spoke about his post-retirement life

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

Lack of Water: ನೀರಿನ ಅಭಾವ… ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಜೆ

Lack of Water: ನೀರಿನ ಅಭಾವ… ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಜೆ

3-mundaragi

Mundargi: ದುರಸ್ತಿ ಸಂದರ್ಭ ವಿದ್ಯುತ್‌ ಶಾಕ್‌ ; ಕೂಲಿಕಾರ ಸಾವು

ಮುಂಡರಗಿ-ರಾಜ್ಯ ಸರ್ಕಾರವೂ ಬರ ಪರಿಹಾರ ನೀಡಲಿ: ಶಿವಾನಂದ ಇಟಗಿ

ಮುಂಡರಗಿ-ರಾಜ್ಯ ಸರ್ಕಾರವೂ ಬರ ಪರಿಹಾರ ನೀಡಲಿ: ಶಿವಾನಂದ ಇಟಗಿ

ಗದಗ: ಬಿಸಿಲಿನ ಬೇಗೆಗೆ ಸಿಮ್ಮಿಂಗ್‌ ಫೂಲ್‌ಗೆ ಲಗ್ಗೆ

ಗದಗ: ಬಿಸಿಲಿನ ಬೇಗೆಗೆ ಸ್ವಿಮ್ಮಿಂಗ್‌ ಫೂಲ್‌ಗೆ ಲಗ್ಗೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

god promise kannada movie

Kannada Cinema; ‘ಗಾಡ್‌ ಪ್ರಾಮಿಸ್‌’ ಮುಹೂರ್ತ ಮಾಡಿದ್ರು

Wadgera; A crocodile appeared in the farm

Wadgera; ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಆತಂಕ ತಂದ ಮೊಸಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.