Instagram ಗೆಳೆಯನ ಕಿರುಕುಳ: ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ


Team Udayavani, Oct 25, 2023, 7:29 PM IST

Instagram ಗೆಳೆಯನ ಕಿರುಕುಳ: ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಭಟ್ಕಳ: ಇನ್ಸ್ಟಾಗ್ರಾಮ್ ಗೆಳೆಯನ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಮಕ್ಕಿ, ಹಾಡವಳ್ಳಿಯಲ್ಲಿ ನಡೆದಿದೆ.

ಮೃತ ಯುವತಿಯನ್ನು ನೇತ್ರಾ ಮುತ್ತಯ್ಯ ಗೋವಾಳಿ ಎಂದು ಗುರುತಿಸಲಾಗಿದೆ. ಈಕೆ ಭಟ್ಕಳ ನಗರದಲ್ಲಿ ಖಾಸಗಿ ಕಚೇರಿಯೊಂದರಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೆಲಸ ನಿರ್ವಹಿಸುತ್ತಿದ್ದಳು ಎನ್ನಲಾಗಿದೆ.

ಈಕೆಗೆ ಕಿರುಕುಳವನ್ನು ನೀಡಿದ ಆರೋಪಿಯಾದ ಮುಂಡಳ್ಳಿ ನಿವಾಸಿ ಗೋವರ್ಧನ ಮೊಗೇರ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ನಂತರ ಗೆಳೆತನ ಮಾಡಿಕೊಂಡವನು ತಾನು ಖರ್ಚು ಮಾಡಿದ ಹಣ ಕೊಡುವಂತೆ ಹೇಳಿ ಕರೆ ಮಾಡಿ ಹೆದರಿಸಿ ಚಿತ್ರಹಿಂಸೆ ನೀಡಿ, ನಿನ್ನ ಅಶ್ಲೀಲ ಫೋಟೋಗಳನ್ನು ತಾನು ಫೇಸ್ ಬುಕ್ ನಲ್ಲಿ ಹಾಕಿ ನಿನ್ನ ಮಾನ ಮರ್ಯಾದೆ ತೆಗೆದು ನಿನಗೆ ಸಾಯಿಸುತ್ತೇನೆ ಇಲ್ಲಾದರೆ ಮರ್ಯಾದೆಗೆ ನೀನೆ ಸಾಯಬೇಕು ಎಂದು ಹೇಳಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಯುವತಿ ಮನನೊಂದು ತನ್ನ ಹಳೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ತನ್ನ ಮಗಳ ಸಾವಿಗೆ ಗೋವರ್ಧನ ಮೊಗೇರ ಈತನ ಕಿರುಕುಳವೇ ಕಾರಣ ಎಂದು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ಯುವತಿಯ ತಂದೆ ಮುತ್ತಯ್ಯ ಗೋವಾಳಿ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪಿ.ಎಸ್.ಐ. ಶ್ರೀಧರ ನಾಯ್ಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

ವಿದ್ಯಾವಂತಳಾದ ಯುವತಿ ಆತ್ಮಹತ್ಯೆಗೆ ಮುಂದಾಗಿರುವುದು ಕುಟುಂಬದ ಆಕ್ರಂದನಕ್ಕೆ ಕಾರಣವಾಗಿದ್ದು ಆತನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-sirsi

Sirsi: ತಂಜಾವೂರಿನಲ್ಲಿ ನಡೆಯುವ ಭಾರತದ ರಾಜವಂಶಸ್ಥರ ಬೈಟಕ್ ಗೆ ಸೋಂದಾ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

3-sirsi

Sirsi: ಬಾರದ ಹೈನು ಪ್ರೋತ್ಸಾಹ; ಶೀಘ್ರ ಬಿಡುಗಡೆಗೆ ಒತ್ತಾಯ

Minchu

Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.