Dream: ಕಾಣುವ ಕನಸು ದೊಡ್ಡದಿರಲಿ


Team Udayavani, Dec 21, 2023, 4:26 PM IST

17-uv-fusion

ಕನಸು …ಇದು ನಮ್ಮನು ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತದೆ, ಇದರಿಂದ ನಮಗೆ ಖುಷಿಯನ್ನು ಕೊಡುತ್ತದೆ ದುಃಖವನ್ನು ಕೊಡುತ್ತದೆ ಭಯವನ್ನು ತರಿಸುತ್ತದೆ ಧೈರ್ಯವನ್ನು ಕೊಡುತ್ತದೆ. ಇದು ಬರುವುದು ಕೆಲವು ನಿಮಿಷಗಳು ಆದರೂ ಇದರ ಪರಿಣಾಮ ಬೇರೇನೇ ಇರುತ್ತದೆ.

ನನಗೆ ತಿಳಿದ ಹಾಗೆ ಕನಸಿನಲ್ಲಿ ಎರಡು ವಿಧ, ಒಂದು ನಿದ್ರೆ ಮಾಡುವಾಗ ಬರುವ ಕನಸು ಇನೊಂದು ನಮಗೆ ನಿದ್ರೆ ಮಾಡಲು ಬಿಡದ ಕನಸು. ಒಂದು ದಿನ ನಾನು ನಮ್ಮ ಅಣ್ಣನನು ಕೇಳಿದೆ, ಭವಿಷ್ಯದಲ್ಲಿ ನೀನು ಏನು ಆಗಬೇಕು ಬಯಸಿರುವೆ ಎಂದು. ಅವನು ಹೇಳಿದ ನಾನು ಈ ರಾಷ್ಟ್ರದ ಪ್ರಧಾನಿ ಆಗ್ತೀನಿ ಅಂತ, ಇದನು ಕೇಳಿದ ನನಗೆ ಆಶ್ಚರ್ಯ, ನಾನು ನಗುತ್ತಾ ಅವನಿಗೆ ಹೇಳಿದೆ, ಊರಿನಲ್ಲಿ ಇರುವ ಗ್ರಾಮ ಪಂಚಾಯತ್‌ ಸದಸ್ಯನೇ ಆಗಲಿಕ್ಕೆ ಆಗಿಲ್ಲ ನಿನಗೆ, ನೀನು ಪ್ರಧಾನಿ ಆಗುವವನಾ ಎಂದೇ.

ಅವನು ಆ ದಿನ ಹೇಳಿದ ಮಾತಿನಿಂದ ನಾನು ಏಷ್ಟೋ ದಿನ ನಿದ್ದೆಯನ್ನು ಮರೆತೇ ಎಂದು ಹೇಳಬಹುದು. ಅವನು ಹೇಳಿದನು ಮನುಷ್ಯನು ಭವಿಷ್ಯದ ಬಗೆ ಕನಸು ಕಾಣುವುದು ಸಹಜ, ಆದರೆ ಅದೇ ಕನಸನ್ನು ದೊಡ್ಡದಾಗಿ ಕಾಣಬೇಕು ನಾವು ಅದನು ನನಸಾಗಿಸುವ ಹಾದಿಯಲ್ಲಿ ನಮ್ಮ ಜೀವನವನು ಸುಂದರವಾಗಿ ರೂಪಿಸಿಕೊಳ್ಳಬಹುದು, ಎಂದನು. ಇದನು ತಿಳಿದ ನಾನು ನನ್ನ ಕನಸನ್ನು ದೊಡ್ಡದಾಗಿಸಿದೆ, ಅನೇಕ ನಕಾರಾತ್ಮಕ ಸಮಸ್ಯೆಗಳು ಕಂಡರು ಕೂಡ ಆ ಕನಸಿನ ಕಡೆ ಗಮನ ಹರಿಸಲಾರಂಭಿಸಿದೆ.

ನಮಗೆ ನಿದ್ರೆ ಮಾಡುವಾಗ ಬೀಳುವ ಕನಸುಗಳು ಕ್ಷಣಿಕವಾಗಿರುತ್ತದೆ ನಮ್ಮ ಹಿಂದಿನ ದಿನಗಳ ಯೋಚನೆಯಿಂದ ಬೀಳುತ್ತವೆ ಎನ್ನುವುದು ನನ್ನ ಅನುಭವ. ಆದರೆ ನಾವು ನಿದ್ರೆ ಮಾಡಲು ಬಿಡದ ಕನಸಿನ ಬಗೆ ನೆನಸಿಕೊಂಡಾಗ, ನನಗೆ ನನ್ನ ಸ್ನೇಹಿತ ನೆನಪಾಗುತ್ತಾನೆ ಒಂದೇ ಊರಿನ ನಮ್ಮ ಕನ್ನಡ ಮಾಧ್ಯಮ ಶಾಲೆಯಾಲ್ಲೇ. ಜತೆಯÇÉೆ ಓದಿರುವ ಸ್ನೇಹಿತ, ನೋಡಿ, ಕನ್ನಡ ಮಾಧ್ಯಮ ಶಾಲೆ ಎಂದು ಹೇಳಲು ಇಂದು ನನಗೆ ಹೆಮ್ಮೆಯಾಗುತ್ತದೆ ಏಕೆಂದರೆ ನಾವು ಎಲ್ಲಿಯವರೆಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಿರುತೇವೋ ಅಲ್ಲಿಯವರೆಗೂ ನಮಗೆ ಆದಂತಹ ಅನುಭವ ಮತ್ತು ನಮಗೆ ಸಿಕ್ಕಂತಹ ಶಿಕ್ಷಕರು ಮತ್ತು ಪರಿಚಯ ಆದ ಸ್ನೇಹಿತರನು ಮರೆಯಲಾರೆವು. ಅಲ್ಲಿ ನಮಗೆ ಶಿಕ್ಷಣದ ಜತೆಗೆ ಜೀವನ ಪಾಠಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ.

ಅಲ್ಲಿ ನನಗೆ ಪರಿಚಯ ಆದ ಸ್ನೇಹಿತರಲ್ಲಿ ಇವನು ಒಬ್ಬ, ನಮ್ಮ ಹಳ್ಳಿ ಶಾಲೆಯಲ್ಲಿ ಒಂದು ತರಗತಿಗೆ ಹತ್ತು- ಹದನೈದು ಜನ ಮಕ್ಕಳು, ನಮ್ಮ ತರಗತಿಯಲ್ಲಿ ನಾವು ಮೂರು ಜನ ಅತಿ ದಡ್ಡ ವಿದ್ಯಾರ್ಥಿಗಳು,ಶಿಕ್ಷಕರ ಪ್ರಕಾರ. ಅದರಲ್ಲೇ ನನ್ನ ಸ್ನೇಹಿತನು ಒಬ್ಬ, ನಮಗೆ ಶಿಕ್ಷಕರು ಹೇಳುತ್ತಿದ್ದರು.

ಎಲ್ಲರೂ ಶಿಕ್ಷಣ ಪಡೆದು ದೊಡ್ಡ  ದೊಡ್ಡ ಹುದ್ದೆಗೆ ಹೋದರೆ, ಕೂಲಿ ಕೆಲಸ ಮಾಡುವವರು ಯಾರು..? ಅದಕ್ಕೆ ಮುಂದೆ ನೀವೆಲ್ಲಾ ಉಪಯೋಗಕ್ಕೆ ಬರುವಿರಿ ಎನುತ್ತಿದರು, ಇಂಥ ಕೆಲವು ಅವಮಾನಗಳೇ… ನನ್ನ ಸ್ನೇಹಿತನಿಗೆ ಭವಿಷ್ಯದ ಬಗೆ ಕನಸು ಕಾಣಲು ಸಹಾಯಕವಾಗಿತೆಂದು ಭಾವಿಸುತ್ತೇನೆ, ಅವನು ಅಭ್ಯಾಸ ಮಾಡುತ್ತಾ ಮಾಡುತ್ತಾ. ಅವನ ವಿಚಾರಧಾರೆಗಳು ಹೆಚ್ಚಾಗುತ್ತಾ ಕನಸು ದೊಡ್ಡದಾಗುತ್ತಾ ಹೋಗಿತು.

ಅವನು ನಾನೊಂದಿಗೆ ಹೇಳಿಕೊಳ್ಳುತ್ತಿದ್ದಳು ಅವನ ಕನಸಿನ ಬಗೆ ಅದನು ನನಸಾಗಿಸಲು ಅವನ ಪ್ರಯತ್ನದ ಬಗೆ, ಅಂದು ದಡ್ಡ ವಿದ್ಯಾರ್ಥಿ ಇಂದು ದೊಡ್ಡ ಹುದ್ದೆಯಲ್ಲಿದ್ದಾನೆ. ಇದಕ್ಕೆ ಕಾರಣ ಅವನು ಕಾಣುತ್ತಿದ್ದ ಕನಸು ಮತ್ತು ಅದನು ನನಸಾಗಿಸಲು ಮಾಡಿದ ಅವನು ಪ್ರಯತ್ನ, ಕೆಲವೊಂದು ಸಾಧಕರನ್ನು ನೋಡಿದಾಗ ಅವರಲ್ಲಿ ಕಾಣುವ ಖುಷಿಗಿಂತ ಪರಿಶ್ರಮವೇ ಜೀವನ ಅನಿಸುತ್ತದೆ ನನಗೆ, ಅವರ ಸಾಧನೆಗೆ ಕಾರಣ ಅವರು ತಮ್ಮ ಸುಖ ನಿದ್ರೆಯನ್ನು ತ್ಯಜಿಸಿ, ನಿದ್ರೆ ಗೆಡಿಸುವಂತಹ ಕನಸು ಕಂಡಿದ್ದಕ್ಕೆ, ಮತ್ತೆ ಮತ್ತೆ ಹೇಳುತ್ತೇನೆ.. ನಮ್ಮ ಭವಿಷ್ಯದ ಕನಸು ದೊಡ್ಡದಾಗಿರಲಿ ಅದನು ನನಸಾಗಿಸುವ ಛಲ ಅಷ್ಟೇ ದೃಢವಾಗಿರಲಿ.

-ಭರತ್‌ ವಾಸು ನಾಯ್ಕ

ಶಿರಸಿ

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Dance: ಬಸಣ್ಣನ ಡ್ಯಾನ್ಸು

12-uv-fusion

Smile: ಕಷ್ಟ – ಸುಖದ ಜೀವನ… ನಗು ನಗುತಾ ಸಾಗಿ

11-uv-fusion

UV Fusion: ಕಡಲ ಕುವರರೇ, ನಿಮಗೊಂದು ಸಲಾಂ!

10-uv-fusion

Festival: ಊರ ಹಬ್ಬ

9-uv-fusion

Goal: ಬದಲಾವಣೆ ನಮ್ಮ ಗುರಿಯತ್ತ ಸಾಗುವಂತಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.