BJP vs Congress : ಲೋಕ ಸಮರ ಪ್ರಚಾರಕ್ಕೆ ಮುನ್ನುಡಿ

ಫಿರ್‌ ಆಯೇಂಗೇ ನರೇಂದ್ರ ಮೋದಿ... ಆರ್‌ಎಸ್‌ಎಸ್‌ ಶಕ್ತಿ ಕೇಂದ್ರದಲ್ಲಿ ಹಮ್‌ ತಯ್ಯಾರ್‌ ಹೈ ಎಂದ ಕೈ ನಾಯಕರು

Team Udayavani, Dec 29, 2023, 6:00 AM IST

1-sddsad

ಮುಂದಿನ ಎಪ್ರಿಲ್‌-ಮೇಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ವಿಧ್ಯುಕ್ತವಾಗಿ ಪ್ರಚಾರ ಶುರು ಮಾಡಿವೆ ಎಂದು ಹೇಳಲು ಅಡ್ಡಿಯಿಲ್ಲ. “ಮೋದಿ ಫಿರ್‌ ಸೇ ಆಯೇಂಗೆ’ ಎಂದು ಬಿಜೆಪಿ ಘೋಷ ವಾಕ್ಯ ಮತ್ತು ಹಾಡು ಬಿಡುಗಡೆ ಮಾಡಿದ್ದರೆ, ಚುನಾವಣೆಗೆ ನಾವೂ ಸಿದ್ಧ ಎಂದು ನಾಗಪುರದಿಂದಲೇ ಕಾಂಗ್ರೆಸ್‌ ಅಬ್ಬರ ಪ್ರಚಾರಕ್ಕೆ ಅಡಿ ಇರಿಸಿದೆ.

ಫಿರ್‌ ಆಯೇಂಗೇ ನರೇಂದ್ರ ಮೋದಿ: ಬಿಜೆಪಿ ಘೋಷ ವಾಕ್ಯ

ಹೊಸದಿಲ್ಲಿ: ಆರ್‌ಎಸ್‌ಎಸ್‌ ಶಕ್ತಿ ಕೇಂದ್ರ ನಾಗಪುರದಲ್ಲಿ ಕಾಂಗ್ರೆಸ್‌ ಲೋಕಸಭೆ ಚುನಾವಣೆಗಾಗಿ ಬಹಿರಂಗ ಪ್ರಚಾರ ಶುರು ಮಾಡಿ ರುವಂತೆಯೇ, ಬಿಜೆಪಿ ಡಿಜಿಟಲ್‌ ಮಾಧ್ಯಮ ಮೂಲಕ ಪ್ರಚಾರ ಶುರು ಮಾಡಿದೆ. ಮುಂದಿನ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಹೊಸ ಧ್ಯೇಯ ವಾಕ್ಯ “ಫಿರ್‌ ಆಯೇಂಗೇ ಮೋದಿ’ (ಮೋದಿ ಮತ್ತೂಮ್ಮೆ ಬರಲಿದ್ದಾರೆ) ಎಂಬ ಹೆಸರಿನ ಧ್ಯೇಯ ವಾಕ್ಯದ ಹಾಡಿನ ವೀಡಿಯೋವನ್ನು ಗುರು ವಾರ ಬಿಡುಗಡೆ ಮಾಡಿದೆ.
ಅಯೋಧ್ಯೆಯಲ್ಲಿ ಮುಂ ದಿನ ತಿಂಗಳ 22ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಶುರು ವಾಗುವುದಕ್ಕಿಂತ ಮೊದಲು ಬಿಡುಗಡೆಯಾದದ್ದು ವಿಶೇಷ.

ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್‌ ಮಾಡಿ ರುವ ಬಿಜೆಪಿ “ಉತ್ತಮ ಸಾಧನೆ ಯ ಆಧಾರದ ಮೇಲೆ ಜಯದ ನಗಾರಿಗಳು ಬಾರಿಸ ಲ್ಪಡಲಿವೆ. ಶ್ರೀರಾಮನು ಉತ್ತಮ ಚಿಂತನಾ ಶಕ್ತಿಯನ್ನು ಕೊಡುವ ವಿಶ್ವಾಸವಿದೆ ಮತ್ತು ಮೋದಿಯವರು ಮತ್ತೆ ಆಯ್ಕೆಯಾಗಿ ಬರುವ ವಿಶ್ವಾಸವಿದೆ. ಮೋದಿಯವರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ದೇಶದ ಗೌರವದ ಪ್ರತೀಕ. ಅವರು ಈ ದೇಶದ 140 ಕೋಟಿ ಮಂದಿಯ ಆಶೋತ್ತರಗಳನ್ನು ಪ್ರತಿನಿಧಿಸುವವರು. ಮೋದಿ ಮತ್ತೂಮ್ಮೆ ಬರಲಿದ್ದಾರೆ. ‘ ಎಂದು ಬರೆದುಕೊಳ್ಳಲಾಗಿದೆ.

ಹಾಡಿನಲ್ಲಿ ಯಾವ ಅಂಶಗಳಿವೆ?

ಟ್ವೀಟ್‌ ಮಾಡಿರುವ ವೀಡಿಯೋದಲ್ಲಿ ಇರುವ ಹಾಡಿನಲ್ಲಿ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ಪ್ರಮುಖ ನಿರ್ಣಯಗಳಾಗಿರುವ 370ನೇ ವಿಧಿ ರದ್ದು, ರಾಮ ಮಂದಿರ ನಿರ್ಮಾಣ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್‌ ದಾಳಿ ನಡೆಸಿ ಉಗ್ರರ ತರಬೇತಿ ಶಿಬಿರಗಳ ನಾಶದ ಅಂಶವನ್ನು ವಿಶೇಷವಾಗಿ ಪ್ರಸ್ತಾವಮಾಡಲಾಗಿದೆ.

ವಿಪಕ್ಷಗಳ “ಇಂಡಿಯಾ’ ಒಕ್ಕೂಟವನ್ನು ಟೀಕಿಸಿ, ಪ್ರಧಾನಿ ಮೋದಿಯವರೇ ಪಕ್ಷದ ಅತ್ಯುನ್ನತ ನಾಯಕ ಮತ್ತು ಅವರೇ ಪಕ್ಷದ ಸಂಸ್ಕೃತಿಯ ಪ್ರತೀಕ ಎಂದು ಬಿಂಬಿಸಲಾಗಿದೆ.

ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ವಿರುದ್ಧದ ಹೋರಾಟವನ್ನು ಟಿಎಂಸಿ ಕೈಗೆತ್ತಿಕೊಳ್ಳಲಿದ್ದು, ಸಮ ಬಲದ ಹೋರಾಟ ನಡೆಸಲಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಸಿಪಿಎಂ ಆ ಪಕ್ಷದ ಜತೆಗೆ ಒಪ್ಪಂದ ಮಾಡಿಕೊಂಡಿವೆ. ದೇಶದಲ್ಲಿ ಈಗ ಕೇಂದ್ರ ತನಿಖಾ ಸಂಸ್ಥೆಗಳು ನಡೆಸುವ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ.
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಸಿಎಂ

ಇವಿಎಂ ಸರಿಯಾಗದಿದ್ದರೆ 400 ಕಡೆ ಬಿಜೆಪಿಗೆ ಜಯ: ಸ್ಯಾಮ್‌ ಪಿತ್ರೋಡಾ
“ಈ ಬಾರಿಯೂ ಇವಿಎಂಗಳನ್ನು ಸರಿ ಪಡಿಸದೇ ಹೋದರೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳಲ್ಲೂ ಜಯಗಳಿಸಲಿದೆ’ ಹೀಗೆಂದು ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ಹೇಳಿದ್ದಾರೆ. ಇವಿಎಂಗಳನ್ನು ಬಿಜೆಪಿ ಪರವಾಗಿ ಬಳಸಲಾಗುತ್ತಿದೆ ಎಂಬ ಹಿಂದಿನ ಆರೋಪವನ್ನೇ ಪಿತ್ರೋಡಾ ಪುನರುಚ್ಚರಿಸಿದ್ದಾರೆ. ಇವಿಎಂ ಬಗ್ಗೆ ಕಳವಳ ವ್ಯಕ್ತ ಪಡಿಸಿ ಚುನಾವಣೆ ಆಯೋಗಕ್ಕೂ ಪತ್ರ ಬರೆದಿದ್ದೆ. ಆದರೆ ಆಯೋಗ ಪ್ರತಿಕ್ರಿಯೆ ನೀಡದಕ್ಕೆ ಈಗ ಮಾತನಾಡಲೇ ಬೇಕಾದ ಸನ್ನಿವೇಶ ಎದುರಾಗಿದೆ ಎಂದಿದ್ದಾರೆ. ಅಲ್ಲದೆ ಲೋಕಸಭೆಯ ಎಲ್ಲ ಸ್ಥಾನಗಳಲ್ಲೂ ಗೆಲ್ಲುತ್ತೇವೆಂಬ ಭರವಸೆ ಬಿಜೆಪಿ ಇದ್ದರೆ ಇರಲಿ, ಅದನ್ನು ದೇಶ ನಿರ್ಧರಿಸುತ್ತದೆ ಎಂದರು.

ಆರ್‌ಎಸ್‌ಎಸ್‌ ಶಕ್ತಿ ಕೇಂದ್ರ ನಾಗಪುರದಲ್ಲಿ ಹಮ್‌ ತಯ್ಯಾರ್‌ ಹೈ ಎಂದ ಕೈ ನಾಯಕರು
ಮುಂಬಯಿ: ಬಿಜೆಪಿ ಲೋಕಸಭೆ ಚುನಾವಣೆಗಾಗಿ ಫಿರ್‌ ಮೋದಿ ಆಯೇಂಗೇ ಎಂಬ ಧ್ಯೇಯ ವಾಕ್ಯದ ಹಾಡು ಬಿಡುಗಡೆ ಮಾಡಿರುವಂತೆಯೇ ಕಾಂಗ್ರೆಸ್‌ ಕೂಡ ಆರ್‌ಎಸ್‌ಎಸ್‌ ಶಕ್ತಿ ಕೇಂದ್ರ ನಾಗಪುರದಿಂದ ಗುರುವಾರ ಬಹಿರಂಗ ಪ್ರಚಾರ ಆರಂ ಭಿಸಿದೆ. ಈ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ “ನಾವು ಸಿದ್ಧರಿದ್ದೇವೆ’ (ಹಮ್‌ ತಯ್ಯಾ ರ್‌ ಹೈ’) ಎಂಬ ಸವಾಲನ್ನು ಬಿಜೆಪಿಗೆ ಒಡ್ಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಬಿಜೆಪಿ ಸರಕಾರ ದೇಶವನ್ನು ಬಡತನಕ್ಕೆ ನೂಕಿದೆ. ದೇಶದ ಹಿಡಿತ ಶ್ರೀಸಾಮಾನ್ಯನ ಕೈಯಲ್ಲಿ ಇದ್ದರೆ ಮಾತ್ರವೇ ರಾಷ್ಟ್ರ ಸುಭಿಕ್ಷವಾಗಬಲ್ಲದು ಎಂದು ಹೇಳಿದ್ದಾರೆ.

ದೇಶದಲ್ಲಿ ಎರಡು ಪ್ರಬಲ ಹೋರಾಟಗಳು ನಡೆಯುತ್ತಿವೆ. ಆ ಹೋರಾಟ ರಾಜಕೀಯಕ್ಕಾಗಿ ಅಥವಾ ಅಧಿಕಾರಕ್ಕಾಗಿ ಎಂದು. ಜನರು ತಿಳಿದಿದ್ದಾರೆ. ಆದರೆ ಈ ಹೋರಾಟವಾಗುತ್ತಿರುವುದು 2 ಸಿದ್ಧಾಂತಗಳ ನಡುವೆ ಮತ್ತು ಈ ಹೋರಾಟದಲ್ಲಿ ಕಾಂಗ್ರೆಸ್‌ನ ಉದ್ದೇಶ ಸಾಮಾನ್ಯ ಜನರ ಕೈಗೆ ದೇಶದ ಅಧಿಕಾರವನ್ನು ಸಿಗುವಂತೆ ಮಾಡುವುದೇ ಆಗಿದೆ ಎಂದರು.

ಪ್ರತಿನಿಧಿಸುವವರು ಇಲ್ಲ

ದಲಿತರು, ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಅವರನ್ನು ಪ್ರತಿನಿಧಿಸುವವರಿಲ್ಲ. ತಾನು ಒಬಿಸಿ ಎಂದು ಹೇಳಿಕೊಳ್ಳುತ್ತಿದ್ದ ಮೋದಿ ಜಾತಿಗಣತಿ ವಿಚಾರ ಬರುತ್ತಿದ್ದಂತೆ ಬಡವರೆಲ್ಲ ಒಂದೇ ಜಾತಿ ಎನ್ನುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಹರಿಹಾಯ್ದರು.

ಬಿಜೆಪಿ -ಆರ್‌ಎಸ್‌ಎಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ನಾಶವಾಗುತ್ತದೆ. ನಾಗಪುರದಲ್ಲಿ 2 ಸಿದ್ಧಾಂತಗಳಿವೆ .ಒಂದು ಅಂಬೇಡ್ಕರ್‌ ಗೆ ಸಂಬಂಧಿಸಿದ ಪ್ರಗತಿಪರ ಚಿಂತನೆ . ಮತ್ತೂಂದು ದೇಶ ಹಾಳುಮಾಡುವ ಆರ್‌ಎಸ್‌ಎಸ್‌ ಸಿದ್ಧಾಂತ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

23 ಸೀಟು ಕೊಡಲು ಸಾಧ್ಯವಿಲ್ಲ: ಉದ್ಧವ್‌ ಕೋರಿಕೆ ತಿರಸ್ಕರಿಸಿದ ಕಾಂಗ್ರೆಸ್‌
ಮುಂಬಯಿ: 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದಲ್ಲಿ 23 ಸ್ಥಾನಗಳನ್ನು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಬಣಕ್ಕೆ ನೀಡಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್‌ ತಿರಸ್ಕರಿಸಿದೆ. ಮಹಾ ವಿಕಾಸ ಅಘಾಡಿಯ ಪಾಲುದಾರರಾಗಿದ್ದ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ನಡುವೆ ಸೀಟು ಹಂಚಿಕೆ ಕುರಿತಂತೆ ಚರ್ಚಿಸಲು ನಾಯಕರು ಸಭೆ ನಡೆಸಿದ್ದಾರೆ. ಈ ವೇಳೆ ಉದ್ಧವ್‌ ಬಣ 23 ಕ್ಷೇತ್ರಗಳಲ್ಲಿ ಸೀಟು ಕೇಳಿತ್ತು.

ಟಾಪ್ ನ್ಯೂಸ್

ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

Govt ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

1-weeewqe

KKR vs RR ಪಂದ್ಯ ಮಳೆಯಿಂದಾಗಿ ರದ್ದು: ಆರ್ ಸಿಬಿಗೆ ರಾಜಸ್ಥಾನ್ ಎಲಿಮಿನೇಟರ್‌ ಎದುರಾಳಿ

Devarajegowda ವಿರುದ್ಧ ಮಾನನಷ್ಟ ಕೇಸ್‌: ಶಿವರಾಮೇಗೌಡ

Devarajegowda ವಿರುದ್ಧ ಮಾನನಷ್ಟ ಕೇಸ್‌: ಶಿವರಾಮೇಗೌಡ

ರಾಜ್ಯ ಸರಕಾರಕ್ಕೆ ವರ್ಷ: ಸುರ್ಜೇವಾಲ ಹರ್ಷ

Congress ರಾಜ್ಯ ಸರಕಾರಕ್ಕೆ ವರ್ಷ: ಸುರ್ಜೇವಾಲ ಹರ್ಷ

ಕಡಿಮೆ ಅಂಕ: ಕುಂದಾಪುರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

SSLC ಕಡಿಮೆ ಅಂಕ: ಕುಂದಾಪುರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

1-qweqwqe

IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewqeqw

Pune; ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರನ ಪೋರ್ಷೆ ಕಾರಿಗೆ ಇಬ್ಬರು ಬಲಿ

1-weweqwew

CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ

14-panaji

Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

Govt ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

1-weeewqe

KKR vs RR ಪಂದ್ಯ ಮಳೆಯಿಂದಾಗಿ ರದ್ದು: ಆರ್ ಸಿಬಿಗೆ ರಾಜಸ್ಥಾನ್ ಎಲಿಮಿನೇಟರ್‌ ಎದುರಾಳಿ

Devarajegowda ವಿರುದ್ಧ ಮಾನನಷ್ಟ ಕೇಸ್‌: ಶಿವರಾಮೇಗೌಡ

Devarajegowda ವಿರುದ್ಧ ಮಾನನಷ್ಟ ಕೇಸ್‌: ಶಿವರಾಮೇಗೌಡ

ರಾಜ್ಯ ಸರಕಾರಕ್ಕೆ ವರ್ಷ: ಸುರ್ಜೇವಾಲ ಹರ್ಷ

Congress ರಾಜ್ಯ ಸರಕಾರಕ್ಕೆ ವರ್ಷ: ಸುರ್ಜೇವಾಲ ಹರ್ಷ

ಕಡಿಮೆ ಅಂಕ: ಕುಂದಾಪುರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

SSLC ಕಡಿಮೆ ಅಂಕ: ಕುಂದಾಪುರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.