Hunsur: ಹೊಸರಾಮನಹಳ್ಳಿಯ ಈರಣ್ಯೇಶ್ವರ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿ

ಕಂಬದಯ್ಯನಿಗೆ ಬಾಳೆಗೊನೆ ಸಮರ್ಪಿಸಿ ಧನ್ಯತಾಭಾವ ಮೆರೆದ ಭಕ್ತರು

Team Udayavani, Jan 12, 2024, 12:05 PM IST

3-hunsur

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಹೊಸರಾಮನಹಳ್ಳಿಯಲ್ಲಿ ನಾಲ್ಕು ದಿನಗಳ ಕಾಲ ವಿಶಿಷ್ಟವಾಗಿ ಆಚರಿಸುವ ಸುತ್ತಮುತ್ತಲ ಗ್ರಾಮಸ್ಥರ ಆರಾಧ್ಯದೈವ  ಈರಣ್ಣೇಶ್ವರ ಸ್ವಾಮಿಯ ಹಬ್ಬ ವಿಜೃಂಭಣೆಯಿಂದ ಜರುಗಿತು.  ಭಕ್ತರು ನೂರಾರು ಬಾಳೆಗೊನೆ ಸಮರ್ಪಿಸಿ ಧನ್ಯತಾ ಭಾವ ಮೆರೆದರು.

ಬಿಳಿಕೆರೆ-ಕೆ.ಆರ್.ನಗರ ಹೆದ್ದಾರಿಯ ಮುಖ್ಯ ರಸ್ತೆ ಪಕ್ಕದಲ್ಲೇ ಇರುವ ತಾಲೂಕಿನ ಹೊಸರಾಮೇನಹಳ್ಳಿಯ ಈರಣ್ಣೇಶ್ವರಸ್ವಾಮಿ ದೇವಾಲಯದ ಬಳಿ ಮುಂಬಾಗದ ಆವರಣದಲ್ಲಿ ಒಂಭತ್ತು ಬನ್ನೀ ಮರದ ಕಂಬಗಳ ನಡುವೆ ನಿಂತಿರುವ ಶೂಲದಯ್ಯ ಎನ್ನುವ ಹೆಸರಿನಿಂದಲೂ ಕರೆಯಿಸಿಕೊಳ್ಳುವ ಈರಣ್ಣೇಶ್ವರಿಗೆ ನಾಲ್ಕು ದಿನಗಳ ಕಾಲ ಸಂಪ್ರದಾಯಬದ್ಧವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಬಾಳೆಗೊನೆ ಸಮರ್ಪಣೆ: ಭಕ್ತರು ತಮ್ಮ ಸಂಕಷ್ಟಗಳನ್ನು ಪರಿಹರಿಸಬೇಕೆಂದು ದೇವರಲ್ಲಿ ಕೋರಿಕೊಳ್ಳುವ ಹರಕೆ ಈಡೇರಿಕೆಗಾಗಿ ಬಾಳೆಗೊನೆ ಕಟ್ಟುತ್ತಾರೆ.  ಉತ್ಸವಕ್ಕೂ ಮುನ್ನಾ ದಿನ ಬನ್ನಿ ಮರದಿಂದ ತಯಾರಿಸಿರುವ ಕಂಬಗಳಿಗೆ ಕಟ್ಟುವ ಬಾಳೆಗೊನೆಯನ್ನು ಮೂರು ದಿನದ ನಂತರ ತೆಗೆದು ಪ್ರಸಾದವನ್ನಾಗಿ ಸ್ವೀಕರಿಸಿದರು. ಹಬ್ಬಕ್ಕಾಗಮಿಸಿದ್ದ ನೆಂಟರು ಕೊನೆ ದಿನ ಬಾಡೂಟ ಪ್ರಸಾದ ಸವಿದರು.

ಕಂಬದಯ್ಯ: ಗುಡಿಯ ಮುಂಬಾಗ ನಿರ್ಮಿಸಿರುವ ದೇವರ ಚಾವಡಿಯಲ್ಲಿ ದೊಡ್ಡ 9 ಬನ್ನಿಮರಗಳನ್ನು ಕಡಿದು ತಂದು ನೆಡುತ್ತಾರೆ. ಹಾಗಾಗಿ ಕಂಬದಯ್ಯನೆಂದೂ ಕರೆಯುತ್ತಾರೆ.  ಈ  ಮರದಲ್ಲಿ ಹರಕೆ ಹೊತ್ತವರು ತಂದ ನೂರಾರು ಬಾಳೆಗೊನೆಗಳನ್ನು ನೇತು ಹಾಕಲಾಗುತ್ತದೆ. ನಾಲ್ಕು ದಿನಗಳ ನಂತರ ಈ ಬಾಳೆಕಾಯಿಗಳು ಮಾಗಿದ್ದರೂ ಸಹ ಯಾವೊಂದು ಪಕ್ಷಿಯೂ ಬಾಳೆಗೊನೆಯನ್ನು ತಿನ್ನಲು ಬರದಿರುವುದು ಇಲ್ಲಿನ ದೇವರ ವೈಶಿಷ್ಟ್ಯ. ಹಬ್ಬದ ನಂತರ ಬಾಳೆಗೊನೆ ಪಡೆಯುವಾಗ ತಾವು ಯಾವ ಗೊನೆ ಹರಕೆಗಾಗಿ ಕಟ್ಟುತ್ತಾರೋ ಅದೇ ಗೊನೆಯನ್ನೇ ವಾಪಾಸ್ ಸಿಗುವುದು ಮತ್ತೊಂದು ವಿಶೇಷ.

ಈರಣ್ಣಸ್ವಾಮಿ ಗುಡಿಯ ಸುತ್ತ ಐದು ಗ್ರಾಮದೇವತೆ ಗುಡಿಗಳಿದ್ದು, ಇದರಲ್ಲಿ  ಚೌಡೇಶ್ವರಿ, ಚಿಕ್ಮಮ್ಮತಾಯಿ, ಚಿಕ್ಕಮ್ಮ, ದಂಡಮ್ಮ, ಮಂಚಮ್ಮ  ದೇವಾಲಯಗಳನ್ನೂ ದೀಪಾಲಂಕಾರಗಳಿAದ ಸಿಂಗರಿಸಿ ಪೂಜೆ ಸಲ್ಲಿಸಿದರು.

ದೀಪೋತ್ಸವ: ರಾತ್ರಿ ಒಂಭತ್ತು ಕಂಬದಯ್ಯನಿಗೆ ಮಣ್ಣಿನ ಹಣತೆಯಲ್ಲಿ ಎಳ್ಳೇಣ್ಣೆ ದೀಪ ಹಚ್ಚಿ ದೀಪೋತ್ಸವ ನೆರವೇರಿದರು. ಈ ವೇಳೆ ಸ್ಥಳೀಯ ಜಾನಪದ ಕಲಾತಂಡಗಳ ಗುಡ್ಡರ ಕುಣಿತ, ಮಾರಿ ಕುಣಿತ ಮುಂತಾದ ಕಲಾತಂಡಗಳು ಪ್ರದರ್ಶನ ನೀಡಿದ ನಂತರ ಮಾರನೆಯ ಮುಂಜಾನೆ ಹರಕೆಗೆ ಕಟ್ಟಿದ್ಚ ಬಾಳೆಗೊನೆಗಳನ್ನು ಕೆಳಗಿಳಿಸಿ ಜಾತ್ರೆಗಾಗಮಿಸಿದ್ದ ಭಕ್ತರಿಗೆ ವಿತರಿಸಿದರು.

ಹಬ್ಬಕ್ಕೆಂದು ದೂರದ ಉರುಗಳಿಂದ ಬಂದಿದ್ದ ನೆಂಟರಿಗೆ ಗ್ರಾಮದ ಮನೆಮನೆಗಳಲ್ಲಿ ಹಬ್ಬದ ಅಡುಗೆ ತಯಾರಿಸಿ ಉಣಬಡಿಸಿದರು.

ಶಾಸಕ ಜಿ.ಡಿ.ಹರೀಶ್‌ಗೌಡ ಸೇರಿದಂತೆ  ಹಲವಾರು ಮುಖಂಡರು ಹಬ್ಬದಲ್ಲಿ ಬಾಗವಹಿಸಿ, ಈರಣ್ಣೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.

ಟಾಪ್ ನ್ಯೂಸ್

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsadas

Hunsur; ಬೈಕ್‌ಗಳ ಮುಖಾಮುಖಿ: ಓರ್ವ ಸಾವು, ಇಬ್ಬರು ಗಂಭೀರ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

6-hunsur

Hunsur: ನಾಗರಹೊಳೆಯಲ್ಲಿ ಗುಂಡಿಕ್ಕಿ ಅಪರೂಪದ ಕೂರ ಭೇಟೆಯಾಡಿದ್ದ ಇಬ್ಬರ ಬಂಧನ; ಓರ್ವ ಪರಾರಿ

3-hunsur

Hunsur: ಅತಿಯಾದ ಮದ್ಯ ಸೇವನೆ; ಯುವಕ ಸಾವು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.