ಥಾಯ್ಲೆಂಡ್ ಮಾಸ್ಟರ್:ಕೆ. ಶ್ರೀಕಾಂತ್ ಮುನ್ನಡೆ
Team Udayavani, Feb 1, 2024, 12:29 AM IST
ಬ್ಯಾಂಕಾಕ್: ಕೆ. ಶ್ರೀಕಾಂತ್ “ಥಾಯ್ಲೆಂಡ್ ಮಾಸ್ಟರ್’ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮೊದಲ ಸುತ್ತು ದಾಟಿದ್ದಾರೆ. ಅವರು 45 ನಿಮಿಷಗಳ ಹೋರಾಟದಲ್ಲಿ ಚೈನೀಸ್ ತೈಪೆಯ ವಾಂಗ್ ಜು ವೀ ವಿರುದ್ಧ 22-20, 21-19 ಅಂತರದ ಜಯ ಸಾಧಿಸಿದರು.
ಎಸ್.ಎಂ. ಸುಬ್ರಹ್ಮಣಿಯನ್ ಕೂಡ 2ನೇ ಸುತ್ತು ಪ್ರವೇಶಿಸಿದ್ದಾರೆ. ಅವರು ಮಲೇಷ್ಯಾದ ಲಿಯಾಂಗ್ ಜುನ್ ಹಾವೊ ವಿರುದ್ಧ 21-14, 21-17ರಿಂದ ಗೆದ್ದು ಬಂದರು. ಆದರೆ ಸಮೀರ್ ವರ್ಮ ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು. ವನಿತಾ ಸಿಂಗಲ್ಸ್ನಲ್ಲಿ ಮಾಳವಿಕಾ ಬನ್ಸೋಡ್, ಅಶ್ಮಿತಾ ಚಲಿಹಾ ಕೂಡ ದ್ವಿತೀಯ ಸುತ್ತು ತಲುಪಿದ್ದಾರೆ.