Lok Sabha Election: ಸೋಲಿನ ಭೀತಿಯಿಂದ ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಕೊರತೆ: ಬೊಮ್ಮಾಯಿ
Team Udayavani, Mar 14, 2024, 10:45 PM IST
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳು ಸಿಗುತ್ತಿಲ್ಲ. ಸಚಿವರೂ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಅಭ್ಯರ್ಥಿಗಳ ಆಯ್ಕೆ ವಿನೂತನ ರೀತಿಯಾಗಿದೆ. ಡಾ. ಮಂಜುನಾಥ್ ಅವರು ಲಕ್ಷಾಂತರ ಜನರಿಗೆ ಆರೋಗ್ಯ ಕಾಪಾಡಿದ್ದಾರೆ. ಯದುವೀರ ಒಡೆಯರ್ ಅವರಿಗೆ ಟಿಕೆಟ್ ನೀಡಿರುವುದು ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ಸಂದೇಶ ನೀಡಿದಂತಾಗಿದೆ ಎಂದರು.
ಹಳೆ ಬೇರು, ಹೊಸ ಚಿಗುರಿಗೂ ಪಕ್ಷ ಅವಕಾಶ ನೀಡಿದೆ. ಈ ರೀತಿ ನಿರ್ಣಯ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಕಾಂಗ್ರೆಸ್ನಲ್ಲಿ ಆ ಪರಿಸ್ಥಿತಿ ಇಲ್ಲ. ಸಚಿವರೂ ಸೋಲುವ ಭಯದಲ್ಲಿ ಇದ್ದಾರೆ. ಟಿಕೆಟ್ ಸಿಗದ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನುವುದು ಡಿಸಿಎಂ ಡಿಕೆಶಿವಕುಮಾರ್ ಅವರ ಚಾಳಿ ಎಂದು ಹೇಳಿದರು.
ಕೆಲವರಿಗೆ ಟಿಕೆಟ್ ಮಿಸ್ ಆಗಿದೆ ನಿಜ. ಆದರೆ, ಹೊಸಬರಿಗೆ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಟಿಕೆಟ್ ಮಿಸ್ ಆದವರು ನಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ಕಾಂಗ್ರೆಸ್ಗೆ ಇಂತಹ ಕೆಟ್ಟ ಪರಿಸ್ಥಿತಿ ಬಂದಿದೆ ಎಂದಾಯಿತು. ಅಂತಹ ದಯನೀಯ ಸ್ಥಿತಿ ಅವರ ಪಕ್ಷಕ್ಕೆ ಬರಬಾರದಿತ್ತು. ಎಲ್ಲಕ್ಕೂ ಲೋಕಸಭಾ ಚುನಾವಣೆಯ ಫಲಿತಾಂಶ ಉತ್ತರ ನೀಡಲಿದೆ.– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೂನ್ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ
Prajwal ಬಂಧನಕ್ಕೆ ರೆಡ್ ಕಾರ್ನರ್ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ
State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್ ಆರೋಪ
Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ
Govt ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಕಡ್ಡಾಯಕ್ಕೆ ಆದೇಶ
MUST WATCH
ಹೊಸ ಸೇರ್ಪಡೆ
IPL Playoff ಪಂದ್ಯಗಳಿಗೆ ಮೀಸಲು ದಿನವಿದೆಯೇ? ಮಳೆ ನಿಯಮ ಏನು ಹೇಳುತ್ತದೆ?
Devil; ದರ್ಶನ್ ಚಿತ್ರಕ್ಕೆ ನಾಯಕಿಯಾದ ಕರಾವಳಿ ಬೆಡಗಿ
Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ
IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್