ವರ್ಷಾರಂಭದ ಟೆನಿಸ್ಗೆ ಮೆಲ್ಬರ್ನ್ ಮೆರುಗು
Team Udayavani, Jan 16, 2017, 3:45 AM IST
ಮೆಲ್ಬರ್ನ್: ವರ್ಷಾರಂಭದ ಗ್ರ್ಯಾನ್ಸ್ಲಾಮ್ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಲ್ಲಿನ “ಮೆಲ್ಬರ್ನ್ ಪಾರ್ಕ್’ನಲ್ಲಿ ಸೋಮವಾರದಿಂದ 15 ದಿನಗಳ ಕಾಲ ರ್ಯಾಕೆಟ್ ಬೀಸುವಿಕೆಯ ಸದ್ದು, ಟೆನಿಸಿಗರ ಹೂಂಕಾರ, ವೀಕ್ಷಕರ ಕರತಾಡನಗಳೆಲ್ಲ ಏಕಕಾಲದಲ್ಲಿ ಮಾರ್ದನಿಸಲಾರಂಭಿಸುತ್ತವೆ. ಟೆನಿಸ್ ಅಭಿಮಾನಗಳಿಗೆ ಭರಪೂರ ರಸ ದೌತಣ ನೀಡಲು “ಆಸ್ಟ್ರೇಲಿಯನ್ ಓಪನ್’ ಪಂದ್ಯಾವಳಿ ಸಜ್ಜಾಗಿದೆ.
ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಮುಂದೆ ಪ್ರಶಸ್ತಿ ಉಳಿಸಿ ಕೊಳ್ಳುವ ಸವಾಲಿದ್ದರೆ, ವನಿತಾ ಸಿಂಗಲ್ಸ್ ನಲ್ಲಿ ಅಚ್ಚರಿಯ ಸೋಲುಂಡು ರನ್ನರ್ ಅಪ್ಗೆ ತೃಪ್ತಿಪಟ್ಟ ಸೆರೆನಾ ವಿಲಿಯಮ್ಸ್ ಮುಂದೆ ಮತ್ತೆ ಕಾಂಗರೂ ನಾಡಿನ ಕ್ವೀನ್ ಎನಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಯುವ ಪ್ರತಿಭೆಗಳ ಸವಾಲು, ಅಚ್ಚ ರಿಯ ಫಲಿತಾಂಶಗಳೆಲ್ಲ ಈ ಸಲವೂ ಮರು ಕಳಿಸುವ ಸಾಧ್ಯತೆ ಇಲ್ಲದಿಲ್ಲ.
ಸರ್ಬಿಯಾದ ನಂ.2 ಆಟಗಾರ ನೊವಾಕ್ ಜೊಕೋವಿಕ್ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ಸವಾಲನ್ನು ಎದುರಿಸಲಿದ್ದಾರೆ. ಇದೊಂದು ತೀವ್ರ ಕುತೂಹಲದ ಸ್ಪರ್ಧೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಇದೇ ಕೂಟದ ಮೊದಲ ಸುತ್ತಿನಲ್ಲೇ ವೆರ್ದಸ್ಕೊ ನೆಚ್ಚಿನ ಆಟಗಾರ ರಫೆಲ್ ನಡಾಲ್ ಅವರಿಗೆ ಮನೆಯ ಹಾದಿ ತೋರಿಸಿದ್ದರು!
ಜೊಕೋವಿಕ್ ಆರಂಭಿಕ ಗೆಲುವು ಸಾಧಿಸಿ ಮುನ್ನಡೆದರೆ 4ನೇ ಸುತ್ತಿನಲ್ಲಿ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಅವರನ್ನು ಎದುರಿಸುವ ಸಂಭವವಿದೆ. ಕಳೆದ ವಾರವಷ್ಟೇ ಡಿಮಿಟ್ರೋವ್ ಬ್ರಿಸ್ಬೇನ್ ಟೆನಿಸ್ ಪ್ರಶಸ್ತಿ ಜಯಿಸಿದ್ದರು.
ಪುರುಷರ ಸಿಂಗಲ್ಸ್
1 ಆ್ಯಂಡಿ ಮರ್ರೆ,
2 ನೊವಾಕ್ ಜೊಕೋವಿಕ್,
3 ಮಿಲೋಸ್ ರಾನಿಕ್,
4 ಸ್ಟಾನಿಸ್ಲಾಸ್ ವಾವ್ರಿಂಕ,
5 ಕೀ ನಿಶಿಕೊರಿ,
6 ಗೇಲ್ ಮಾನ್ಫಿಲ್ಸ್,
7 ಮರಿನ್ ಸಿಲಿಕ್,
8 ಡೊಮಿನಿಕ್ ಥೀಮ್
9 ರಫೆಲ್ ನಡಾಲ್
10 ಥಾಮಸ್ ಬೆರ್ಡಿಶ್
ವನಿತಾ ಸಿಂಗಲ್ಸ್
1 ಆ್ಯಂಜೆಲಿಕ್ ಕೆರ್ಬರ್
2 ಸೆರೆನಾ ವಿಲಿಯಮ್ಸ್
3 ಅಗ್ನಿàಸ್ಕಾ ರಾದ್ವಂಸ್ಕಾ
4 ಸಿಮೋನಾ ಹಾಲೆಪ್
5 ಕ್ಯಾರೋಲಿನಾ ಪ್ಲಿಸ್ಕೋವಾ
6 ಡೊಮಿನಿಕಾ ಸಿಬುಲ್ಕೋವಾ
7 ಗಾರ್ಬಿನ್ ಮುಗುರುಜ
8 ಸ್ವೆತ್ಲಾನಾ ಕುಜ್ನೆತ್ಸೋವಾ
9 ಜೊಹಾನಾ ಕೊಂಟಾ
10 ಕಾರ್ಲಾ ಸೂರೆಜ್ ನವಾರೊ