ಮುಂಬಯಿ ಶೇರು 113 ಅಂಕ ಏರಿಕೆ; ಬ್ಯಾಂಕಿಂಗ್, ಎಫ್ಎಂಸಿಜಿ ಖರೀದಿ
Team Udayavani, Mar 24, 2017, 11:20 AM IST
ಮುಂಬಯಿ : ಹೂಡಿಕೆದಾರರು ಬ್ಯಾಂಕಿಂಗ್ ಮತ್ತು ಎಫ್ಎಂಸಿಜಿ ಶೇರುಗಳ ಖರೀದಿಯನ್ನು ಮುಂದುವರಿಸಿರುವಂತೆಯೇ ಮುಂಬಯಿ ಶೇರು ಪೇಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 113 ಅಂಕಗಳ ಉತ್ತಮ ಏರಿಕೆಯನ್ನು ಕಂಡಿದೆ.
ಬೆಳಗ್ಗೆ 11.15ರ ಹೊತ್ತಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 129.66 ಅಂಕಗಳ ಏರಿಕೆಯೊಂದಿಗೆ 2,461.82 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದ್ದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 33.80 ಅಂಕಗಳ ಏರಿಕೆಯೊಂದಿಗೆ 9,120.00 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ವಹಿವಾಟಿನಲ್ಲಿ ನಿಫ್ಟಿ 9,100 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿರುವುದು ಹಾಗೂ ಭಾರ್ತಿ, ಎಸ್ ಬ್ಯಾಂಕ್ ಶೇರುಗಳು ಗಮನಾರ್ಹ ಮುನ್ನಡೆ ಸಾಧಿಸಿರುವುದು ಮುಖ್ಯವಾಗಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬ್ಯಾಂಕ್ ಆಫ್ ಬರೋಡ, ಐಸಿಐಸಿಐ ಬ್ಯಾಂಕ್, ಎಸ್ಬಿಐ, ಐಟಿಸಿ, ಗೇಲ್ ಟಾಪ್ ಗೇನರ್ ಎನಿಸಿಕೊಂಡರೆ, ಬಿಪಿಸಿಎಲ್, ಟೆಕ್ ಮಹೀಂದ್ರ, ಓಎನ್ಜಿಸಿ, ಗ್ರಾಸಿಂ ಮತ್ತು ಝೀ ಎಂಟರ್ಟೇನ್ಮೆಂಟ್ ಟಾಪ್ ಲೂಸರ್ ಎನಿಸಿಕೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್