ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ


Team Udayavani, Mar 25, 2017, 3:14 PM IST

gul6.jpg

ಕಲಬುರಗಿ: ವಿದ್ಯಾರ್ಥಿಗಳು ಯೋಗ ಹಾಗೂ ಕ್ರೀಡೆಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಸಲಹೆ ನೀಡಿದರು. ಶುಕ್ರವಾರ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದೈಹಿಕ ಶಿಕ್ಷಣ, ಯೋಗ ಮತ್ತು ಕ್ರೀಡಾ ವಿಜ್ಞಾನ 2017 ಅಂತಾರಾಷ್ಟ್ರೀಯ ಸಮ್ಮೇಳನಉದ್ಘಾಟಿಸಿ ಅವರು ಮಾತನಾಡಿದರು.

ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೆ ಅಗತ್ಯ. ಕ್ರೀಡೆ ಮತ್ತು ಯೋಗ ಇವರೆಡನ್ನು ಸಾಕಾರಗೊಳಿಸುತ್ತದೆ ಎಂದರು. ದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಮಹತ್ವ ಕೊಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜರ್ಮನ್‌ ದೇಶವು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದೆ. ಆ ದೇಶದ ಪ್ರತಿ ಗ್ರಾಮೀಣ ಪ್ರದೇಶದಲ್ಲಿಯೂ ಕ್ರೀಡಾಂಗಣವಿದೆ. ಅಂತಹ ಮನೋಭಾವವು ದೇಶದಲ್ಲಿಯೂ ಬೆಳೆಯಬೇಕು ಎಂದರು. 

ತಮಿಳುನಾಡು ದೈಹಿಕ ಹಾಗೂ ಕ್ರೀಡಾ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎ.ಎಂ. ಮೂರ್ತಿ ಮಾತನಾಡಿ, ಕ್ರೀಡಾ ಕ್ಷೇತ್ರಕ್ಕೆ ಯಾವುದೇ ವಯೋಮಿತಿ ನಿರ್ಬಂಧವಿಲ್ಲ. ಹಿರಿಯರು, ಕಿರಿಯರು ಭಾಗವಹಿಸಬಹುದಾಗಿದೆ. ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ತಮಿಳುನಾಡಿನಲ್ಲಿ ಕ್ರೀಡಾ ವಿಜ್ಞಾನ ವಿಷಯ ಕಡ್ಡಾಯಗೊಳಿಸಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಜಾರಿಯಲ್ಲಿ ಬರಬೇಕು ಎಂದು ಸಲಹೆ ಮಾಡಿದರು. 

ಯೋಗವು ವಿದೇಶದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಆದಾಗ್ಯೂ, ನಮ್ಮ ದೇಶದಲ್ಲಿ ಅಂತಹ ಜನಪ್ರಿಯತೆ ಕೊರತೆ ಇದೆ. ಆ ಕೊರತೆ ನಿವಾರಿಸಬೇಕು. ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳು ಇದ್ದು, ಅವು ಸದ್ಬಳಕೆ ಆಗಬೇಕು. ವಿದೇಶಗಳಂತೆ ಕ್ರೀಡಾ ವಿಜ್ಞಾನಕ್ಕೆ ಭಾರತದಲ್ಲಿಯೂ ಮಹತ್ವ ನೀಡುವ ಮೂಲಕ ಓಲಂಪಿಕ್ಸ್‌ನಲ್ಲಿ ದೇಶ ಹೆಚ್ಚಿನ ಪದಕ ಪಡೆಯುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ| ಎಸ್‌.ಆರ್‌. ನಿರಂಜನ್‌ ಮಾತನಾಡಿ, ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಸುದೀರ್ಘ‌ ಪ್ರಸ್ತಾವನೆ ಸಲ್ಲಿಸಿರುವೆ. ಸುಸಜ್ಜಿತ ಕ್ರೀಡಾಂಗಣ, ಈಜುಕೊಳ, ಸಣ್ಣ ಕೆರೆ, ಶಿಕ್ಷಕರಿಗೆ ಅತ್ಯಾಧುನಿಕ ಗುಣಮಟ್ಟದ ತರಬೇತಿ ಕೇಂದ್ರ ಮುಂತಾದ ಬೇಡಿಕೆಗಳಿಗೆ ಅವರು ಸಮ್ಮತಿಸಿದ್ದಾರೆ ಎಂದರು. 

ಹೂವಿನಭಾವಿ ಬಾಬಣ್ಣ, ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ| ಸುಂದರರಾಜ ಅರಸ್‌, ಮಲೇಶಿಯಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ| ಲಿನ್‌ ಲೂಮ್‌ ಹುಯಿ, ಪ್ರೊ| ರಾಜೇಶಕುಮಾರ, μಲಿಫೈನ್ಸ್‌ ಎಂ.ಎಸ್‌. ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ| ಹೆನ್ರಿ ಸಿ. ಡಾಯಟ್‌ ಗೌರವ ಅತಿಥಿಗಳಾಗಿ ಆಗಮಿಸಿದ್ದರು.

ದೇಶ, ವಿದೇಶಗಳ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಡಾ| ಎಂ.ಎಸ್‌. ಪಾಸೋಡಿ ಸ್ವಾಗತಿಸಿದರು. ವಿಜಯ ನಾಲವಾರ, ವಿಜಯಲಕ್ಷ್ಮೀ ಪಾಟೀಲ ನಿರೂಪಿಸಿದರು. ಕುಲಸಚಿವ ಪ್ರೊ| ದಯಾನಂದ ಅಗಸರ್‌, ಡಾ| ಎಚ್‌.ಎಸ್‌. ಜಂಗೆ, ಪ್ರೊ| ರಾಜೇಶಕುಮಾರ್‌ ಹಾಜರಿದ್ದರು.  

ಟಾಪ್ ನ್ಯೂಸ್

1-qweqwqe

IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

1-qweewqe

Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

ಕಲಬುರಗಿ: ಎಂಎಲ್ಸಿ ಚುನಾವಣೆಯಲ್ಲಿ ಕೈತಪ್ಪಿದ ಟಿಕೆಟ್: ಬಿಜೆಪಿಯಲ್ಲಿ ಬಂಡಾಯ ಬಿಸಿ

ಎಂಎಲ್ಸಿ ಚುನಾವಣೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾದ ಬಿಜೆಪಿ ನಾಯಕ…

2-kalburgi

Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-qweq-eeqw

Ajekar;ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು

1-qweqwqe

IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.