ಚೀನಾ ದೂರವಿಡಲು ಪ್ಲಾನ್ ನೇಪಾಳಕ್ಕೆ ಭಾರತದ ತೈಲ
Team Udayavani, Mar 29, 2017, 3:45 AM IST
ನವದೆಹಲಿ: ಅಡುಗೆ ಅನಿಲ ಪೂರೈಕೆಗಾಗಿ ನೇಪಾಳವು ಚೀನಾದೊಂದಿಗೆ ಸಖ್ಯ ಬೆಳೆಸಲಿದೆ ಎಂಬ ಸುಳಿವು ಸಿಕ್ಕ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತವು ನೇಪಾಳಕ್ಕೆ ಭರ್ಜರಿ ಕೊಡುಗೆ ಘೋಷಿಸಿದೆ. ಚೀನಾವನ್ನು ದೂರವಿಡುವ ಸಲುವಾಗಿ ನೇಪಾಳದೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿರುವ ಭಾರತವು 2022ರ ಮಾರ್ಚ್ವರೆಗೂ ತೈಲ ಪೂರೈಸುವ ವಾಗ್ಧಾನ ನೀಡಿದೆ. ಈ ಒಪ್ಪಂದದಂತೆ, ನೇಪಾಳಕ್ಕೆ ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವಾರ್ಷಿಕ ಸುಮಾರು 13 ಲಕ್ಷ ಟನ್ ತೈಲ ರವಾನಿಸಲಿದೆ. ಈ ಪ್ರಮಾಣವನ್ನು 2020ರ ವೇಳೆಗೆ ದುಪ್ಪಟ್ಟುಗೊಳಿಸುವ ಭರವಸೆಯನ್ನೂ ನೀಡಲಾಗಿದೆ. ಈ ಮೂಲಕ ಭಾರತದ ವ್ಯಾಪಾರಕ್ಕೆ ಅಡ್ಡಿಪಡಿಸಿ, ನೇಪಾಳದ ಪರ್ಯಾಯ ಪೂರೈಕೆದಾರನಾಗಲು ಹೊರಟಿದ್ದ ಚೀನಾದ ಆಸೆಗೆ ತಣ್ಣೀರು ಹಾಕಲಾಗಿದೆ.1974ರಿಂದಲೂ ನೇಪಾಳದ ಜತೆ ಭಾರತವು ಪೆಟ್ರೋಲಿಯಂ ವ್ಯಾಪಾರ ಒಪ್ಪಂದ ನಡೆಸಿಕೊಂಡು ಬಂದಿದೆ. ಆದರೆ, ಇತ್ತೀಚೆಗೆ ಪೆಟ್ರೋಲಿಯಂ ಪೂರೈಕೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಯವಾಗಿತ್ತು. ಇದರಿಂದ ನೇಪಾಳ ಕೆಂಡಾಮಂಡಲವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !