JK ಹೆದ್ದಾರಿಯಲ್ಲಿ ಟ್ರಕ್ನಿಂದ 400 ಕೆಜಿ ಅಫೀಮು ವಶ: ಇಬ್ಬರ ಬಂಧನ
Team Udayavani, Apr 11, 2017, 3:21 PM IST
ಬನಿಹಾಲ್, ಜಮ್ಮು ಕಾಶ್ಮೀರ : ಪೊಲೀಸರು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಟ್ರಕ್ ಒಂದರಿಂದ 400 ಕಿಲೋ ಅಫೀಮನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ರಾಂಬಾನ್ ಜಿಲ್ಲೆಯ ಬನಿಹಾಲ್ ಪಟ್ಟಿಯಲ್ಲಿರುವ ಜಮ್ಮು ಶ್ರೀನಗರದ ನ್ಯಾಶನಲ್ ಹೈವೇಯಲ್ಲಿ ಸಾಗುತ್ತಿದ್ದ ಟ್ರಕ್ಕನ್ನು ಚೆಕ್ಪೋಸ್ಟ್ನಲ್ಲಿ ತಪಾಸಿಸಲಾಯಿತು.
ಟ್ರಕ್ಕಿನಲ್ಲಿ 400 ಕಿಲೋ ಅಫೀಮು ಇರುವುದು ಆಗ ಪತ್ತೆಯಾಯಿತು. ಒಡನೆಯೇ ಅದರ ಪಂಜಾಬ ಮೂಲದ ಚಾಲಕ ರಾಜೀಂದರ್ ರಾಮ್ ಮತ್ತು ಕಂಡಕ್ಟರ್ ಸುಖವೀಂದರ್ ರಾಮ್ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.