ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಾರಕ

Team Udayavani, Apr 12, 2017, 4:26 PM IST

Kasargod,-kannada-School,.jpg

ಶಾಲೆಗಳಲ್ಲಿ  ಮಲೆಯಾಳ ಕಡ್ಡಾಯ ಆದೇಶ
ಕಾಸರಗೋಡು:
ಜಾಗತಿಕ ಭಾಷೆ ಇಂಗ್ಲಿಷ್‌, ರಾಷ್ಟ್ರ ಭಾಷೆ ಹಿಂದಿ ಇವೆರಡು ಭಾಷೆಗಳನ್ನೂ ಕನ್ನಡ ಶಾಲೆಗಳಲ್ಲಿ  ಕಡ್ಡಾಯವಾಗಿ ಬೋಧಿಸುತ್ತಿರುವಾಗ ಅದರೊಂದಿಗೆ ರಾಜ್ಯ ಭಾಷೆ ಮಲೆಯಾಳವನ್ನೂ  ಕಡ್ಡಾಯವಾಗಿ ಕಲಿಸಿದರೆ ತಪ್ಪೇನು ಎಂಬ ಅಭಿಪ್ರಾಯ ಕೇರಳ ಸರಕಾರಕ್ಕೆ ಮೂಡಿದಂತಿದೆ. 

ಇದರಿಂದ ಮಕ್ಕಳಿಗೆ ಭಾರೀ ಹೊರೆಯಾದೀತೆ? ಹೆಚ್ಚುವರಿಯಾಗಿ ಒಂದು ಭಾಷೆಯನ್ನು ಕಲಿತರೆ ಒಳ್ಳೆಯದಲ್ಲವೆ? ಇದು ಭವಿಷ್ಯದ ದೃಷ್ಟಿಯಿಂದ ವರದಾನವಲ್ಲವೆ? ಕನ್ನಡ ಮತ್ತು  ಮಲೆಯಾಳ  ಎರಡು ಭಾಷೆಗಳನ್ನೂ  ಕಲಿಯುವ ಸೌಲಭ್ಯ ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ  ಮಾತ್ರ ದೊರೆಯುವುದರಿಂದ ಈ ವಿದ್ಯಾರ್ಥಿ ಗಳಿಗೆ ಕೇರಳ ಹಾಗೂ ಕರ್ನಾಟಕ ಎರಡು ರಾಜ್ಯಗಳಲ್ಲೂ  ಶಿಕ್ಷಣ ಮತ್ತು  ಉದ್ಯೋಗಾವಕಾಶಕ್ಕೆ ಸಾಧ್ಯತೆ ಗಳು ಹೆಚ್ಚುತ್ತವೆಯಲ್ಲವೆ? ಇತ್ಯಾದಿ ಪ್ರಶ್ನಿಸುವವರೂ ಇದ್ದಾರೆ.

ಮಲೆಯಾಳ ಕಲಿಕೆ ಸಾಹಿತ್ಯಕ- ಸಾಂಸ್ಕೃತಿಕವಾಗಿಯೂ ಕನ್ನಡ-ಮಲೆಯಾಳ ಭಾಷಾ ಬಾಂಧವ್ಯಕ್ಕೆ ಪೂರಕ ಎನ್ನುವವ ರಿದ್ದಾರೆ. ಭಾಷಾ ಬಾಂಧವ್ಯವೇ ಸರಕಾರದ ದೃಷ್ಟಿ ಯಾದರೆ ಕಾಸರಗೋಡಿನ ಮಲೆಯಾಳ ಶಾಲೆಗಳಲ್ಲೂ  ಕನ್ನಡವನ್ನು ಕಡ್ಡಾಯ ಗೊಳಿಸಿದರೆ ತಪ್ಪೇನು ಎಂಬ ಪ್ರಶ್ನೆ  ಉದ್ಭವಿಸುತ್ತದೆ. ಭಾಷಾ ಅಲ್ಪಸಂಖ್ಯಾಕರ ಸಂರಕ್ಷಣೆಗಾಗಿ ಸರಕಾರ ಏನು ಮಾಡಿದೆ ಎನ್ನುವ ಪ್ರಶ್ನೆಗಂತೂ ಉತ್ತರವಿಲ್ಲ. ಕನ್ನಡ ಶಾಲೆಗಳಲ್ಲಿ  ಮಲೆಯಾಳ ಕಡ್ಡಾಯ ಆದೇಶ ಜಾರಿಗೆ ಬಂದರೆ ಗಡಿನಾಡಿನ ಜನರ ಮೂಲಭೂತ ಹಕ್ಕು ಕಸಿದುಕೊಂಡಂತೆ ಹಾಗೂ ಸಂವಿಧಾನಕ್ಕೇ ಅಪಚಾರ ಮಾಡಿದಂತೆ ಎಂಬ ಸತ್ಯವನ್ನು  ರಾಜ್ಯ ಸರಕಾರ ಮನಗಾಣಬೇಕು.

ಮಲೆಯಾಳದ ಬಗ್ಗೆ ಭಯ
ಮಲೆಯಾಳದ ಬಗ್ಗೆ  ಕಾಸರಗೋಡಿನ ಕನ್ನಡಿಗರಿಗೆ ಇರುವುದು ಭಯವೇ ಹೊರತು ದ್ವೇಷವಲ್ಲ  ಎಂಬುದನ್ನು  ಆಳುವವರು ಹಾಗೂ ಮಲೆಯಾಳಿ ಸಾಹಿತಿಗಳು ಅರಿಯಬೇಕು. ಮಲೆಯಾಳ ಭಾಷೆ ಹಾಗೂ ತೆಂಕಣ ಕೇರಳೀಯರನ್ನು  ಸೌಹಾರ್ದತೆಯಿಂದ ಸ್ವೀಕರಿಸಿ ಕಾಸರಗೋಡಿನ ಕನ್ನಡಿಗರು ಉದಾತ್ತ  ಮನೋಭಾವ ತೋರಬೇಕು ನಿಜ. ಆದರೆ ಅಂತಹ ಸೌಹಾರ್ದ ಮನೋಭಾವ ಕನ್ನಡದ ಹಾಗೂ ಕನ್ನಡಿಗರ ಅಸ್ತಿತ್ವಕ್ಕೇ ಭಂಗ ತಂದಿದೆ ಎಂಬುದು ಅತಿಶಯೋಕ್ತಿಯಲ್ಲ.

ಇದು ಕೇವಲ ಕನ್ನಡದ ಆತಂಕ ಮಾತ್ರವಲ್ಲ. ತುಳು, ಮರಾಠಿ, ಕೊಂಕಣಿ ಮೊದಲಾದ ಕಾಸರಗೋಡಿನಲ್ಲಿರುವ ಇತರ ಭಾಷೆಗಳ ಆತಂಕವೂ ಹೌದು. ಯಾಕೆಂದರೆ ಆಡಳಿತ ಭಾಷೆ ಮಲೆಯಾಳವನ್ನು  ಮಾತ್ರ ಎಲ್ಲಾ  ರಂಗಗಳಲ್ಲೂ ಬಳಸಬೇಕು ಎಂಬ ಅಧಿಕಾರಿಗಳ ದರ್ಪ- ಸರ್ವಾಧಿಕಾರ ಹೇಳತೀರದು. ಮಲೆಯಾಳವನ್ನು  ಬಿಟ್ಟು  ಕಾಸರಗೋಡಿನ ಸ್ಥಳೀಯ ಭಾಷೆಗಳನ್ನು  ಕಲಿಯುವುದು ಬಿಡಿ ಒಂದೆರಡು ಪದಗಳನ್ನು  ಕೂಡ ಮಾತುಕತೆಗಳಲ್ಲಿ  ಬಳಸಲೂ ಸಿದ್ಧರಾಗದ ವಲಸೆ ಬಂದ ಮಲೆಯಾಳಿಗಳ ಸ್ವಭಾಷಾಭಿಮಾನದ ತೀವ್ರತೆ ಮೆಚ್ಚುವಂತದ್ದಲ್ಲ.

ಮಲೆಯಾಳ ಕಡ್ಡಾಯದಿಂದ ಪ್ರಾರಂಭದಲ್ಲಿ   ಕನ್ನಡ    ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾ ಗುವ ಸಾಧ್ಯತೆ ಇಲ್ಲದಿಲ್ಲ. ಇದೇ ವೇಳೆ ಕನ್ನಡದ ಬಗ್ಗೆ  ಅಭಿಮಾನ ದಿಂದ ಅಲ್ಲ ವಾದರೂ ಕನ್ನಡವನ್ನು  ಕಲಿತರೆ ಕರ್ನಾಟಕ ದಲ್ಲೂ  ಅವಕಾಶ ದೊರೆಯಲಿದೆ ಎಂದು ವ್ಯಾವಹಾರಿಕವಾಗಿ ಯೋಚಿಸುವ ಕೆಲವು ಮಲೆಯಾಳಿಗಳೂ ಕನ್ನಡ ಶಾಲೆಗಳಿಗೆ ಆಕರ್ಷಿತರಾಗಬಹುದು. ಆದರೆ ಇಲ್ಲಿನ ಅಪಾಯವೆಂದರೆ ಕೇವಲ ಉದ್ಯೋಗದ ಲಾಭಕ್ಕಾಗಿ ಮಾತ್ರ ಕನ್ನಡ ಕಲಿಯುವವರ ಕಾರಣದಿಂದ ಕನ್ನಡ ಶಾಲೆಗಳು ಕ್ರಮೇಣ ಕನ್ನಡ ಹಾಗೂ ಮಲೆಯಾಳ ಭಾಷೆಗಳನ್ನು ಕಲಿಯುವ ಅವಕಾಶವಿರುವ ಇಂಗ್ಲಿಷ್‌ ಮಾಧ್ಯಮ ಶಾಲೆಗಳಾಗಿ ಬದಲಾಗಬಹುದು.

ಕನ್ನಡ ಕಲಿತವರಿಗೆ 
ಉದ್ಯೋಗಾವಕಾಶ ಕಡಿಮೆ

ಎಲ್ಲ  ರಂಗಗಳಲ್ಲೂ  ಮಲೆಯಾಳ ಕಡ್ಡಾಯದಿಂದ ಸಹಜವಾಗಿಯೇ ಕೇರಳ ದಲ್ಲಿ  ಕನ್ನಡ ಕಲಿತವರಿಗೆ ಉದ್ಯೋಗಾ ವಕಾಶ ಕಡಿಮೆಯಾಗಲಿದೆ. ಇದೇ ಸಂದರ್ಭ ಕಾಸರಗೋಡಿನಲ್ಲಿ  ಕನ್ನಡ ಕಲಿತವರಿಗೆ ಶಿಕ್ಷಣ ಮತ್ತು  ಉದ್ಯೋಗಾ ವಕಾಶಗಳನ್ನೊದಗಿಸುವುದು ಕರ್ನಾ ಟಕದಲ್ಲಿ  ಅಲ್ಲಿನ ಸರಕಾರಗಳ ಧೋರಣೆಯನ್ನವಲಂಬಿಸಿದೆ. ಆದುದ ರಿಂದ ಮಲೆಯಾಳ ಕಡ್ಡಾಯ ಕಲಿಕೆ ಕಾಸರಗೋಡಿನ ಕನ್ನಡ ಶಾಲೆಗಳ ಉಳಿವಿನ ಮೇಲೆ ವ್ಯತಿರಿಕ್ತ  ಪರಿಣಾಮಗಳನ್ನು  ಬೀರುವ ಆತಂಕವಿದೆ.

ಶಿಕ್ಷಣ ರಂಗದಲ್ಲಿ  ಮಲೆಯಾಳ ಕಡ್ಡಾಯವಾದೊಡನೆ ಕೇರಳದಲ್ಲಿ  ಭಾಷಾ ಅಲ್ಪಸಂಖ್ಯಾಕರ ಸವಲತ್ತುಗಳು ಅಪ್ರಸ್ತುತವಾಗುತ್ತವೆ. ಶಾಲೆಗಳಲ್ಲಿ ಮಲೆಯಾಳ ಕಲಿಯುತ್ತಿರುವುದರಿಂದ ನಮಗೆ ಕನ್ನಡದಲ್ಲಿ  ಅರ್ಜಿನಮೂನೆ ಕೊಡಿ, ಮಾಹಿತಿ ಕೊಡಿ ಎಂದು ಬೇಡಿಕೆಯನ್ನಿಡುವುದರಲ್ಲಿ  ಅರ್ಥವಿಲ್ಲ. ಹಾಗಾಗಿ ಭಾಷಾ ಅಲ್ಪಸಂಖ್ಯಾಕ ಪ್ರಜೆಗಳ ಸೌಕರ್ಯಕ್ಕಾಗಿರುವ ಕನ್ನಡ ಬಲ್ಲ ನೌಕರ ಹಾಗೂ ಅಧಿಕಾರಿ ಹುದ್ದೆಗಳು, ಕನ್ನಡಬಲ್ಲ ಕಾರಣಕ್ಕೆ ಭಡ್ತಿ, ಕಾಸರಗೋಡಿಗೆ ವರ್ಗಾವಣೆಗೊಳ್ಳುವ ಅವಕಾಶ ಮೊದಲಾದವು ರದ್ದುಗೊಳ್ಳುತ್ತವೆ. ಕನ್ನಡಿಗರ ಉದ್ಯೋಗಾವಕಾಶಗಳೂ ನಷ್ಟವಾಗುತ್ತವೆ. ಆಡಳಿತದಲ್ಲಿ  ಕನ್ನಡ ಬಳಕೆಗೆ ಅವಕಾಶವೇ ಇರದು.

ದೈನಂದಿನ ವ್ಯವಹಾರದಲ್ಲೂ  
ಕನ್ನಡ ಬಳಕೆಗೆ ಮಿತಿ

ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ  ಮಲೆಯಾಳ ಭಾಷೆಯನ್ನು  ಕಡ್ಡಾಯ ಗೊಳಿಸಿದರೆ ಕನ್ನಡ ಭಾಷೆಯು ಕೇವಲ ಮನೆಮಾತಿನ ರೂಪದಲ್ಲಿ  ಉಳಿದು ಕೊಳ್ಳಬಹುದು. ಪ್ರತಿಯೊಂದು ರಂಗ ಗಳಲ್ಲೂ  ಮಲೆಯಾಳ ಅನಿ ವಾರ್ಯವೂ ಪ್ರಭಾವಶಾಲಿಯೂ ಆಗುವುದರಿಂದ ಕನ್ನಡ, ತುಳು ಮೊದಲಾದ ಭಾಷೆಗಳ ಅಸ್ತಿತ್ವವೇ ಅನುಮಾನ.

ಈಗಾಗಲೇ ಮಲೆಯಾಳ ಶಾಲೆಗಳು ಹಾಗೂ ಮಲೆಯಾಳಿಗಳು ಪ್ರಭಾವಶಾಲಿ ಯಾಗಿರುವೆಡೆ ತಳವರ್ಗದ ಜನರು ಕನ್ನಡ, ತುಳು, ಮರಾಠಿ ಮೊದಲಾದ ಭಾಷೆಗಳನ್ನು  ಮನೆಗಳಲ್ಲೂ  ಆಡದೆ ಮಲೆಯಾಳವನ್ನೇ ಬಳಸುತ್ತಿರುವುದು ಕಂಡುಬರುತ್ತಿದೆ. ಜೊತೆಗೆ ಕನ್ನಡದಲ್ಲಿ  ಒಂದು ನಾಮಫಲಕವಾಗಲಿ ಅಥವಾ ಸೂಚನಾಫಲಕವಾಗಲಿ ಗೋಚರಿಸದು ಎಂಬ ಆತಂಕಕ್ಕೆ ಕಾರಣವಾಗಿದೆ.

ಸಾಹಿತ್ಯ ಮತ್ತು  ಸಾಂಸ್ಕೃತಿಕ ಕ್ಷೇತ್ರಗಳಲ್ಲಿ  ಕನ್ನಡ 
ಕೇರಳದ ಆಡಳಿತ ಭಾಷೆಯಾದ ಮಲೆಯಾಳವು ಕನ್ನಡ ಶಾಲೆಗಳಿಗೂ ವ್ಯಾಪಿಸಿದರೆ ಶತಮಾನಗಳಿಂದ ಬೇರೂ ರಿದ ಕನ್ನಡ, ತುಳು ಭಾಷೆ , ಕಲೆ, ಸಾಹಿತ್ಯ ಮತ್ತು  ಸಂಸ್ಕೃತಿಗೆ ತೀವ್ರ ಹಿನ್ನಡೆ ಯಾಗಲಿದೆ. ವಿದ್ವಾಂಸರು, ಕಲಾವಿ ದರು, ಸಾಹಿತಿಗಳಿಗೆ ಹೆಸರಾಗಿದ್ದ  ಹಾಗೂ ಯಕ್ಷಗಾನದಂತಹ ಕಲೆಗಳ ತವರೂ ರಾಗಿದ್ದ  ಕಾಸರಗೋಡು ಜಿಲ್ಲೆಯು ಸಾಂಸ್ಕೃತಿಕವಾಗಿ ಬರಡಾಗಬಹುದು.

ಕನ್ನಡ ಪತ್ರಿಕೆಗಳೂ ಮುಂದೆ ಇಲ್ಲಿ  ಅಪ್ರಸ್ತುತವಾಗುತ್ತವೆ ಎಂಬ ಸತ್ಯವನ್ನೂ ಮರೆಯುವಂತಿಲ್ಲ. ಕೆಲವೊಮ್ಮೆ  ಮಲೆ ಯಾಳ ಸಂಸ್ಕೃತಿಯೂ ಇಲ್ಲಿ  ಬೇರೂರ ಲಾಗದೆ ಈ ಶೂನ್ಯಾವಕಾಶದಲ್ಲಿ  ಸಾಂಸ್ಕೃತಿಕ ಅರಾಜಕತೆ ಮೆರೆದು ಸಮಾಜ ದಲ್ಲಿ  ಕೋಮುವಾದ ಮತ್ತು  ಇತರ ಅಪರಾಧಗಳಿಗೆ ದಾರಿ ಮಾಡಿಕೊಡ ಬಹುದು ಎಂಬ ಭಯ ಕನ್ನಡಿಗರನ್ನು  ಕಾಡುತ್ತಿದೆ.

ಯಾವ ಶಾಲೆಗೆ ಸೇರಿದರೂ ಮಲೆಯಾಳವನ್ನು  ಕಲಿಯಲೇ ಬೇಕಾಗುವುದರಿಂದ ಮಲೆಯಾಳ ಶಾಲೆಗೇ ಸೇರಿದರೇನು ಎಂದು ಯೋಚಿಸುವವರೂ ಹೆಚ್ಚಾದರೆ ಕನ್ನಡ ಶಾಲೆಗಳಿಗೆ ಅಪಾಯ ತಪ್ಪಿದ್ದಲ್ಲ. ಮಲೆಯಾಳವನ್ನು  ಕಲಿಯಲು ಇಷ್ಟವಿಲ್ಲದ ಕನ್ನಡಿಗರು, ಹೆಚ್ಚಿನ ಭಾಷೆಗಳನ್ನು  ಕಲಿಯುವುದು ಮಕ್ಕಳಿಗೆ ಹೊರೆಯೆಂದು ಭಾವಿಸುವವರು, ಮಲಯಾಳವನ್ನೂ  ಪಠ್ಯದಲ್ಲಿ  ಸೇರಿಸಿದ್ದು  ಕರ್ನಾಟಕದಲ್ಲಿ  ಶಿಕ್ಷಣ ಮುಂದುವರಿಕೆಗೆ ತಾಂತ್ರಿಕ ಅಡಚಣೆಯಾದೀತು ಎಂದು ಯೋಚಿಸುವವರು ತಮ್ಮ  ಮಕ್ಕಳನ್ನು  ನೆರೆಯ ಕರ್ನಾಟಕದ ಶಾಲೆಗಳಿಗೆ ಕಳುಹಿಸತೊಡಗಿದರೆ ಅದು ಕೂಡ ಗಡಿನಾಡು ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಾರಕವಾದೀತು.

ಟಾಪ್ ನ್ಯೂಸ್

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.