ನಿರ್ಭಯಾ ರೇಪ್ ಕೇಸ್; “ಆ” ಬಾಲಾಪರಾಧಿ ಎಲ್ಲಿದ್ದಾನೆ, ಹೇಗಿದ್ದಾನೆ…


Team Udayavani, May 5, 2017, 5:15 PM IST

Juvenele.jpg

ನವದೆಹಲಿ:ದೇಶಾದ್ಯಂತ ಸಂಚಲನ ಮೂಡಿಸಿ, ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದ್ದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ಖಾಯಂಗೊಳಿಸಿದೆ. ಏತನ್ಮಧ್ಯೆ ಪ್ರಕರಣದಲ್ಲಿ 3 ವರ್ಷ (ಪುನರ್ ವಸತಿ ಕೇಂದ್ರದಲ್ಲಿ) ಶಿಕ್ಷೆ ಅನುಭವಿಸಿ ದೋಷಿಯಾಗಿದ್ದ ಬಾಲಾಪರಾಧಿ ಮಾತ್ರ ಈಗ ಹೊಸ ಜೀವನ ನಡೆಸುತ್ತಿದ್ದಾನೆ!

ನಿರ್ಭಯಾ ಪ್ರಕರಣದ ಕುರಿತ ಯಾವುದೇ ಬೆಳವಣಿಗೆ ಬಾಲಾಪರಾಧಿಗೆ ಗೊತ್ತಿಲ್ಲ. ಈ ಬಾಲಾಪರಾಧಿ ಪ್ರತಿಷ್ಠಿತ ರೆಸ್ಟೋರೆಂಟ್ ವೊಂದರಲ್ಲಿ ಅಡುಗೆ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದು, ಅಂದು ನಿರ್ಭಯಾ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಪರಾಧಿಗೆ ಈಗ 23ರ ಹರೆಯ.

ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ಬಿಡುಗಡೆಗೆ ತಡೆ ಕೋರಿ ಮಹಿಳಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಬಳಿಕ ಸುಪ್ರೀಂಕೋರ್ಟ್ ಬಾಲಾಪರಾಧಿಯನ್ನು ಬಿಡುಗಡೆಗೊಳಿಸಿ ಇನ್ಮುಂದೆ ಪೊಲೀಸರ ರಕ್ಷಣೆ ಮುಂದುವರಿಸಲು ಆಗದ ಕಾರಣಕ್ಕೆ ಆತನನ್ನು ಸರ್ಕಾರೇತರ ಸಂಸ್ಥೆ(ಎನ್ ಜಿಒ)ಗೆ ಒಪ್ಪಿಸಿ ರಹಸ್ಯ ಸ್ಥಳಕ್ಕೆ ಕಳುಹಿಸಿತ್ತು.

ಇದೀಗ ನಿರ್ಭಯಾ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ಮತ್ತೆ ಬಾಲಾಪರಾಧಿ ಬಗ್ಗೆ ಚಿತ್ತ ಹರಿದಿದೆ. ಆದರೆ ಬಾಲಾಪರಾಧಿ ಈವರೆಗೂ ರಾಷ್ಟ್ರೀಯ ನ್ಯೂಸ್ ಚಾನೆಲ್ ಗಳ  ದೃಷ್ಟಿಗೆ ಬಿದ್ದಿಲ್ಲ. ಆತ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತ ಹೊಸ ಜೀವನ ನಡೆಸುತ್ತಿದ್ದಾನೆ ಎಂದು ಮಾಹಿತಿ ನೀಡಿರುವ ಎನ್ ಜಿಒ ಅಧಿಕಾರಿ ಆತನ ಸುರಕ್ಷತೆಯ ದೃಷ್ಟಿಯಿಂದಾಗಿ ಬೇರೆ ಯಾವುದೇ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ನಿರ್ಭಯಾ ಪ್ರಕರಣದಲ್ಲಿ ಬಾಲಾಪರಾಧಿ 3 ವರ್ಷ ಜೈಲುಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರ ದಕ್ಷಿಣ ಭಾರತದ ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. 2015 ಡಿಸೆಂಬರ್ 15ರಂದು ಬಿಡುಗಡೆಗೊಂಡ ಬಳಿಕ ಎನ್ ಜಿಒ ಆತನನ್ನು ಕೆಲವು ದಿನಗಳ ಕಾಲ ರಹಸ್ಯವಾಗಿ ಇಟ್ಟುಕೊಂಡಿತ್ತು. ಆ ನಂತರ ಬಾಲಪರಾಧಿಯನ್ನು ದಕ್ಷಿಣ ಭಾರತದತ್ತ ಕಳುಹಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಆದರೆ ಬಹುತೇಕರಿಗೆ ಆತನ ಹಿನ್ನೆಲೆ ಗೊತ್ತಿಲ್ಲ. ಆತ ದೆಹಲಿಯಿಂದ 240 ಕಿಮೀ ದೂರದಲ್ಲಿನ ಗ್ರಾಮದಲ್ಲಿರುವ ಮನೆ ಬಿಟ್ಟು ಕೆಲಸಕ್ಕೆ ಬಂದಾಗ 11 ವರ್ಷದವನಾಗಿದ್ದನಂತೆ. ಅನಾರೋಗ್ಯ ಪೀಡಿತ ತಾಯಿ, ಸಹೋದರರು, ಹಾಸಿಗೆ ಹಿಡಿದಿದ್ದ ತಂದೆ ಸೇರಿದಂತೆ ಕುಟುಂಬದ 6 ಮಂದಿ ಸದಸ್ಯರನ್ನು ಆತನ ಹಿರಿಯ ಅಕ್ಕ ದುಡಿದು ಸಾಕಬೇಕಾದ ಅನಿವಾರ್ಯತೆ ಇತ್ತು. ಈಗಲೂ ಆ ಕುಟುಂಬ ಅದೇ ಹಳ್ಳಿಯಲ್ಲಿ ವಾಸಿಸುತ್ತಿದೆ ಎಂದು ಅಧಿಕಾರಿ ವಿವರಿಸಿದ್ದಾರೆ. ಏತನ್ಮಧ್ಯೆ ಈತನ ಮೇಲೆ ಗುಪ್ತಚರ ಇಲಾಖೆ ಈಗಲೂ ತೀವ್ರ ನಿಗಾ ಇರಿಸಿರುವುದಾಗಿ ವರದಿ ಹೇಳಿದೆ.

ಟಾಪ್ ನ್ಯೂಸ್

1-qwewe

Star Air ;ತಿರುಪತಿಯಿಂದ ಬೆಳಗಾವಿಗೆ ವಿಮಾನ ರದ್ದು: ಪ್ರಯಾಣಿಕರ ಪರದಾಟ

1-wqewewqe

Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ

Iran President

Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ

1-wqeqeqwe

List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Iran President

Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ

1-wqeqwewq

Goa:ಬೋಟ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ 26 ಪ್ರವಾಸಿಗರ ರಕ್ಷಣೆ

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

1-weeqwe

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

Four IS terrorists arrested at Ahmedabad airport

Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-qwewe

Star Air ;ತಿರುಪತಿಯಿಂದ ಬೆಳಗಾವಿಗೆ ವಿಮಾನ ರದ್ದು: ಪ್ರಯಾಣಿಕರ ಪರದಾಟ

1-wqewewqe

Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ

Iran President

Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ

1-wqeqeqwe

List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.