ಶೀಘ್ರದಲ್ಲೇ ಗಾರ್ಡ್ ರಹಿತ ಟ್ರೈನ್; ರೈಲ್ವೇಯಿಂದ EOTT ಸಾಧನ ಖರೀದಿ
Team Udayavani, May 10, 2017, 11:56 AM IST
ಹೊಸದಿಲ್ಲಿ : ಗಾರ್ಡ್ಗಳಿಲ್ಲದೆಯೇ ದೇಶದಲ್ಲಿನ ಸುಮಾರು 1000 ರೈಲುಗಳನ್ನು ಓಡಿಸಲು ಅನುಕೂಲಿಸುವ “ಎಂಡ್ ಆಫ್ ಟ್ರೈನ್ ಟೆಲಿಮೆಟ್ರಿ (ಇಓಟಿಟಿ) ಉಪಕರಣವನ್ನು 100 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವುದಕ್ಕೆ ಭಾರತೀಯ ರೈಲ್ವೇ ಸದ್ಯದಲ್ಲೇ ಜಾಗತಿಕ ಟೆಂಡರ್ ಕರೆಯಲಿದೆ.
ಅತ್ಯಾಧುನಿಕ ಇಓಟಿಟಿ ಸಾಧನದಿಂದಾಗಿ ಟ್ರೈನ್ ಚಾಲಕ ಮತ್ತು ರೈಲಿನ ಕೊನೇ ಬೋಗಿಯ ನಡುವೆ ಸಂಪರ್ಕ ಇರಲಿದ್ದು ‘ರೈಲಿನ ಎಲ್ಲ ಬೋಗಿಗಳು ಇಂಜಿನ್ ನೊಂದಿಗೆ ಜೋಡಿಸಿಕೊಂಡೇ ಇದೆ ಮತ್ತು ಇಡಿಯ ರೈಲು ಒಂದು ಘಟಕವಾಗಿ ಚಲಿಸುತ್ತಿದೆ’ ಎಂಬುದನ್ನು ಈ ಸಾಧನ ಚಾಲಕನಿಗೆ ದೃಢಪಡಿಸುತ್ತದೆ. ಇದರಿಂದಾಗಿ ರೈಲುಗಳಲ್ಲಿ ಗಾರ್ಡ್ಗಳ ಆವಶ್ಯಕತೆಯೇ ಇರುವುದಿಲ್ಲ ಎನ್ನಲಾಗಿದೆ.
ತಲಾ ಇಓಟಿಟಿ ಸಾಧನಕ್ಕೆ 10 ಲಕ್ಷ ರೂ. ಬೆಲೆ ಇದೆ. ಈ ಸಾಧನವು ಎರಡು ಘಟಕಗಳನ್ನು ಹೊಂದಿರುತ್ತದೆ. ಮೊದಲನೇಯದ್ದು – ಕ್ಯಾಬ್ ಡಿಸ್ಪ್ಲೇ ಯೂನಿಟ್ ಚಾಲಕನ ಕೊಠಡಿಯಲ್ಲಿರುತ್ತದೆ. ಎರಡನೆಯಯದ್ದು – ಸೆನ್ಸ್ ಆ್ಯಂಡ್ ಬ್ರೇಕ್ ಯೂನಿಟ್ – ರೈಲಿನ ಕೊನೇ ವ್ಯಾಗನ್ನಲ್ಲಿರುತ್ತದೆ.
ಈ ಎರಡೂ ಘಟಕಗಳಿಗೆ ರೇಡಿಯೋ ಟ್ರಾನ್ಸ್ಮೀಟರ್ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಟ್ರೈನ್ ಚಾಲಕ ಮತ್ತು ಕೊನೆಯ ಬೋಗಿ ಅಥವಾ ವ್ಯಾಗನ್ ಜತೆಗೆ ಸಂಪರ್ಕ ಏರ್ಪಟ್ಟಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ