ನಿಯಮ ಪಾಲನೆಗೆ ಹಿಂದೇಟು..

Team Udayavani, May 19, 2017, 3:21 PM IST

hub5.jpg

ಹುಬ್ಬಳ್ಳಿ: ಕೇಂದ್ರ ಪೆಟ್ರೋಲಿಯಂ ಇಲಾಖೆಯು ಪೆಟ್ರೋಲ್‌ ಬಂಕ್‌ ಗಳಲ್ಲಿ ಕಡ್ಡಾಯವಾಗಿ ಕನಿಷ್ಠ ಹತ್ತು ಸೌಲಭ್ಯಗಳಿರಬೇಕೆಂಬ ನಿಯಮವನ್ನೆನೋ ಮಾಡಿದೆ. ಆದರೆ ರಾಜ್ಯದಲ್ಲಿನ ಬಹುತೇಕ ಪೆಟ್ರೋಲಿಯಂ ಕಂಪೆನಿಗಳ ಪೆಟ್ರೋಲ್‌ ಬಂಕ್‌ಗಳಲ್ಲಿ ಸೌಲಭ್ಯಗಳೇ ಇಲ್ಲವಾಗಿವೆ. ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನ ಚಕ್ರಗಳಿಗೆ ಉಚಿತವಾಗಿ ಗಾಳಿ (ಹವಾ) ತುಂಬಬೇಕು.

ಕುಡಿಯುವ ನೀರು ಕಲ್ಪಿಸಬೇಕು. ಪ್ರಥಮ ಚಿಕಿತ್ಸೆಗೆ ಫಸ್ಟ್‌ ಏಯ್ಡ ಬಾಕ್ಸ್‌ , ದೂರು ಪೆಟ್ಟಿಗೆ (ಕಂಪ್ಲೇಂಟ್‌ ಬಾಕ್ಸ್‌), ಉಚಿತ ಶೌಚಾಲಯ ವ್ಯವಸ್ಥೆ, ಫೈರ್‌ ಎಕ್ಸ್‌ಟಿಂಗ್ಯುಶರ್‌ಗಳು, ಮರಳು ತುಂಬಿದ ಬಕೆಟ್‌ಗಳು ಇರಬೇಕು. ಇಂಧನ ಬೆಲೆಗಳು ಹಾಗೂ ಬಂಕ್‌ ಕಾರ್ಯನಿರ್ವಹಿಸುವ ಸಮಯ ಸೂಚಿಸುವ ಫಲಕಗಳು ಇರಬೇಕು. 

ಪೆಟ್ರೋಲ್‌ ಬಂಕ್‌ ಮಾಲಕರ ಹೆಸರು, ಫೋನ್‌ ನಂಬರ್‌, ಇತರೆ ವಿವರಗಳ ಜೊತೆಗೆ ಆ ಬಂಕ್‌ನ ಪರವಾನಗಿ ವಿವರ ತಿಳಿಸುವ ಫಲಕ ಹಾಕಿರಬೇಕು. ಇಂಧನ ಗುಣಮಟ್ಟ ಪರೀಕ್ಷಿಸಲು ಯಾವುದೇ ಪೆಟ್ರೋಲ್‌ ಬಂಕ್‌ನಲ್ಲಾದರೂ μಲ್ಟರ್‌ ಪೇಪರ್‌ ಟೆಸ್ಟ್‌ ಡೆನ್ಸಿಟಿ ಪರೀಕ್ಷೆ ಏರ್ಪಡಿಸುವುದು ಅವರ ಕರ್ತವ್ಯ. 

ಡೆನ್ಸಿಟಿ ಚೆಕ್‌ ಮಾಡಲು 500 ಎಂಎಲ್‌ ಸಾಮರ್ಥ್ಯವುಳ್ಳ ಜಾರ್‌, ಹೈಡ್ರೋಮೀಟರ್‌, ಥರ್ಮಾಮೀಟರ್‌ ಬೇಕಾಗುತ್ತದೆ. ಅವುಗಳನ್ನು ಪೆಟ್ರೋಲ್‌ ಬಂಕ್‌ ಮಾಲಕರು ಇರಿಸಬೇಕಾಗಿದೆ. ಬಂಕ್‌ಗಳಲ್ಲಿ ತುಂಬಿಸುವ ಇಂಧನ ಸರಿಯಾದ ಪ್ರಮಾಣದಲ್ಲಿ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಂಕ್‌ ಗಳಲ್ಲಿ ಐದು ಲೀಟರ್‌ ಸಾಮರ್ಥ್ಯವುಳ್ಳ ಜಾರ್‌ಗಳನ್ನು ಇಟ್ಟಿರಬೇಕು.

ಗ್ರಾಹಕರು ಇಂಧನ ತುಂಬಿಸಿಕೊಂಡ ನಂತರ ತಪ್ಪದೆ ಬಿಲ್‌ ಪಡೆದುಕೊಳ್ಳಬೇಕು. ಇದರಿಂದ ಬಂಕ್‌ನವರು ಏನಾದರೂ ಮೋಸ ಮಾಡಿದರೆ ಅವರ ಮೇಲೆ ದೂರು ಸಲ್ಲಿಸಲು ಸಾಧ್ಯವಾಗುತ್ತದೆ. ಗ್ರಾಹಕರು ತಮಗೆ ಎದುರಾಗುವ ಯಾವುದೇ ಸಮಸ್ಯೆಗಳನ್ನು ಮೊದಲು ಪೆಟ್ರೋಲ್‌ ಬಂಕ್‌ ಮಾಲಕರಿಗೆ ಇಲ್ಲವೆ ಆ ಕಂಪನಿ ಜೊತೆ ಪರಿಹರಿಸಿಕೊಳ್ಳಬೇಕು.

ಒಂದು ವೇಳೆ ಅದು  ಈಡೇರದಿದ್ದರೆ ಕೇಂದ್ರಿಕೃತ ಕುಂದು-ಕೊರತೆ ನಿವಾರಣೆ ಮತ್ತು ನಿರ್ವಹಣೆ ವ್ಯವಸ್ಥೆ (ಸಿಪಿಜಿಆರ್‌ಎಎಂಎಸ್‌) ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಬಹುದು ಎಂಬ 10 ಕಡ್ಡಾಯ ನಿಯಮಾವಳಿಗಳಿವೆ. ಅವಳಿ ನಗರದಲ್ಲಿ ಸುಮಾರು 200ಕ್ಕೂ ಅಧಿಕ ಪೆಟ್ರೋಲ್‌ ಬಂಕ್‌ಗಳಿವೆ. ಆದರೆ ಬಹುತೇಕ ಕಂಪನಿಗಳ ಪೆಟ್ರೋಲ್‌ ಬಂಕ್‌ಗಳು ಈ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುತ್ತಿಲ್ಲ.

ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಮಾತ್ರ ಹಾಕುತ್ತಿವೆ. ಹೊರತಾಗಿ ಗ್ರಾಹಕರಿಗೆ ಕನಿಷ್ಠ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು, ಗಾಳಿ ವ್ಯವಸ್ಥೆ ಕೂಡ ನೀಡುತ್ತಿಲ್ಲ. ಗ್ರಾಹಕರು ವಾಹನಕ್ಕೆ ಹವಾ ಹಾಕಿ ಎಂದರೆ, ಯಂತ್ರ ಕೆಟ್ಟಿದೆ, ಏರ್‌ ಕಂಪ್ರಸರ್‌ಯಿಲ್ಲ, ಕೆಲಸಗಾರನಿಲ್ಲ ಎಂಬ ಸಬೂಬು ಹೇಳುತ್ತಾರೆ. ಕೆಲವೊಂದು ಕಡೆ ಹವಾ ಹಾಕಲು ಹಣ ಪಡೆಯಲಾಗುತ್ತದೆ.  

ಹವಾಯಂತ್ರ ಕೆಟ್ಟು ಹೋಗಿವೆ: ನಗರದಲ್ಲಿರುವ ಭಾರತ ಪೆಟ್ರೋಲಿಯಂ, ಹಿಂದೂಸ್ತಾನ ಪೆಟ್ರೋಲಿಯಂ, ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಕಂಪನಿಯ ಬಹುತೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ಕುಡಿಯುವ ನೀರು, ಶೌಚಾಲಯಗಳಿಲ್ಲ ಹಾಗೂ ಹವಾ ಹಾಕುವ ಯಂತ್ರಗಳು ಹೆಸರಿಗೆ ಮಾತ್ರ ಇವೆ. ಅವು ಕೆಟ್ಟು ಹೋಗಿ ಹಲವು ತಿಂಗಳುಗಳೇ ಆಗಿವೆ.

ಅವುಗಳ ದುರಸ್ತಿ ಮಾಡಿಸುವ ಸಾಹಸಕ್ಕೆ ಪೆಟ್ರೋಲ್‌ ಬಂಕ್‌ಗಳ ಮಾಲಕರು ಮುಂದಾಗಿಲ್ಲ. ಇನ್ನು ಹಳೆಯ ಪಿ.ಬಿ. ರಸ್ತೆಯ ಬಂಕಾಪುರ ಚೌಕ್‌ ಸಮೀಪದ ಇಂದಿರಾ ನಗರ ಬಳಿಯಿರುವ ಪೆಟ್ರೋಲ್‌ ಬಂಕ್‌ನಲ್ಲೊಂದರಲ್ಲಿ ಹವಾ ಯಂತ್ರ ಕೈಕೊಟ್ಟು ತಿಂಗಳುಗಳೇ ಗತಿಸಿವೆ. 

* ಶಿವಶಂಕರ ಕಂಠಿ 

ಟಾಪ್ ನ್ಯೂಸ್

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಫ‌ಲಿತಾಂಶಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ?

ಫ‌ಲಿತಾಂಶಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ?

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

ಇಂದು ಜೆಡಿಎಸ್‌ ಮಹತ್ವದ ಕೋರ್‌ ಕಮಿಟಿ ಸಭೆ

ಇಂದು ಜೆಡಿಎಸ್‌ ಮಹತ್ವದ ಕೋರ್‌ ಕಮಿಟಿ ಸಭೆ

ಇನ್ನೂ ಒಂದು ವಾರ ಪ್ರಜ್ವಲ್‌ ಬರುವುದು ಸಂಶಯ

ಇನ್ನೂ ಒಂದು ವಾರ ಪ್ರಜ್ವಲ್‌ ಬರುವುದು ಸಂಶಯ

SIT ಕಿರುಕುಳ ವಿರುದ್ಧ ಕೋರ್ಟ್‌ ನಲ್ಲಿ ಕೇಸು: ಬಿಜೆಪಿ‌ ಮುಖಂಡ ದೇವರಾಜೇಗೌಡ

SIT ಕಿರುಕುಳ ವಿರುದ್ಧ ಕೋರ್ಟ್‌ ನಲ್ಲಿ ಕೇಸು: ಬಿಜೆಪಿ‌ ಮುಖಂಡ ದೇವರಾಜೇಗೌಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಫ‌ಲಿತಾಂಶಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ?

ಫ‌ಲಿತಾಂಶಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ?

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

ಇಂದು ಜೆಡಿಎಸ್‌ ಮಹತ್ವದ ಕೋರ್‌ ಕಮಿಟಿ ಸಭೆ

ಇಂದು ಜೆಡಿಎಸ್‌ ಮಹತ್ವದ ಕೋರ್‌ ಕಮಿಟಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.