ನಮೋ 3 ವರ್ಷ : ಇದು ಪ್ರತಿಯೊಬ್ಬರ ಸರಕಾರ


Team Udayavani, May 26, 2017, 9:03 PM IST

Sarakara-26-5.jpg

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಆಡಳಿತಕ್ಕೆ ಬಂದು ಇದೀಗ ಮೂರು ವರ್ಷ ತುಂಬಿದೆ. ಬಹುನಿರೀಕ್ಷೆಗಳನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಈ ಸರಕಾರ, ದೇಶಾದ್ಯಂತ ಜನರಲ್ಲಿ ಹೊಸ ಹೊಸ ಆಕಾಂಕ್ಷೆಗಳನ್ನು ಬಿತ್ತಿದ್ದಲ್ಲದೆ, ಬಹುಚರ್ಚಿತವಾಗುವಂತೆಯೂ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ಸರಕಾರ ಮಾಡಿದ್ದೇನು? ಎದ್ದದ್ದೆಲ್ಲಿ? ಬಿದ್ದಿದ್ದೆಲ್ಲಿ? ಈ ಕುರಿತಾಗಿ ರಾಜಕೀಯ ನಾಯಕರ ವಸ್ತುನಿಷ್ಠ ಅಭಿಪ್ರಾಯ ಇಲ್ಲಿದೆ.

ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಮೂರು ವರ್ಷದ ಆಡಳಿತ ಪೂರೈಸುತ್ತಿರುವ ಈ ಕ್ಷಣ ಆಕರ್ಷಿ­ಸಿದಷ್ಟು ಹಿಂದೆ ಯಾವ ಸರ್ಕಾರದ ಪ್ರಥಮ 3 ವರ್ಷಗಳ ಆಡಳಿತವೂ ಆಕರ್ಷಿಸಿರಲಿಲ್ಲ. ಅದಕ್ಕೆ ಕಾರಣ ಈ ಸರ್ಕಾರದ ಬಗ್ಗೆ ಸಾಮಾನ್ಯ ಭಾರತೀಯನಿಗೆ ಇರುವ ಭರವಸೆ ಮತ್ತು ಸರ್ಕಾರ ಆ ಭರವಸೆಯನ್ನು ಈಡೇರಿಸುವ ದಿಕ್ಕಿನಲ್ಲಿ ಇಟ್ಟಿರುವ ಧೃಡವಾದ ಹೆಜ್ಜೆಗಳು. 2014ರ ಹಿಂದೆ ಇದ್ದ 10 ವರ್ಷಗಳ ಸರ್ಕಾರ ನಿಷ್ಕ್ರಿಯತೆ ಹಾಗೂ ಹಗರಣಗಳಿಂದ ಕೂಡಿದ್ದ ಸರ್ಕಾರವೆಂದು ಎಲ್ಲರೂ ಒಪ್ಪುತ್ತಾರೆ. ಆ ನಂತರ ಬಂದಿರುವ ಸರ್ಕಾರದ ಬಗ್ಗೆ ಅಪಾರ ಭರವಸೆಯನ್ನು ಜನತೆ ಇಟ್ಟು­ಕೊಂಡಿದ್ದು ಅತ್ಯಂತ ಸಹಜ. ಯುಪಿಎ ಒಂದು ಮತ್ತು ಎರಡು ಸರ್ಕಾರಗಳ ನಿಷ್ಕ್ರಿಯತೆ ಮತ್ತು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕ್ರಿಯಾಶೀಲತೆಗೆ ಒಂದು ಹೋಲಿಕೆ.

ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷರಾದ ರಾಹುಲ್‌ಗಾಂಧಿರವರು ಲೋಕಸಭೆಯಲ್ಲಿ ಒಮ್ಮೆ ಮಾತನಾಡುವಾಗ, ಮಹಾರಾಷ್ಟ್ರದ ಕಲಾವತಿ ಎಂಬ ಮಹಿಳೆಯ ಹೆಸರನ್ನು ಉಚ್ಚರಿಸಿದ್ದು ಎಲ್ಲರಿಗೂ ನೆನಪಿದೆ. ಮಹಾರಾಷ್ಟ್ರದ  ಒಂದು ಬಡ ಕುಟುಂಬದ ಕಲಾವತಿ ಮನೆಗೆ ತಾವು ಹೋದಾಗ ಆ ಮನೆಯಲ್ಲಿದ್ದ ಹೊಗೆ ತುಂಬಿದ್ದ ಪರಿಸ್ಥಿತಿಯನ್ನು ವಿವರಿಸಿದ್ದರು ರಾಹುಲ್‌ಗಾಂಧಿ. ಆದರೆ, ಅದನ್ನು ಸರಿಪಡಿಸಿ ದೇಶದ ಈ ರೀತಿಯ ಅನೇಕ ಕುಟುಂಬಗಳಿಗೆ ಪರಿಹಾರ ಒದಗಿಸುವ ದಿಕ್ಕಿನಲ್ಲಿ ಹೆಜ್ಜೆ ಇಡಲು ಅವರಿಗೆ – ಅವರ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಅದಕ್ಕೆ ತದ್ವಿರುದ್ದವಾದ ನಡವಳಿಕೆ ಇಂದಿನ ಸರ್ಕಾರದ್ದು. ನರೇಂದ್ರ ಮೋದಿಯವರು ಬಡ ಕುಟುಂಬಗಳಿಗೂ ಅಡುಗೆ ಗ್ಯಾಸ್‌ ಉಪಯೋಗಿಸಲು ಇರುವ ಹಕ್ಕನ್ನು ಜನರ ಮುಂದಿಟ್ಟು ತಮ್ಮ ಅಡುಗೆ ಅನಿಲದ ಸಬ್ಸಿಡಿಯನ್ನು ಬಿಟ್ಟು ಕೊಡ‌ಲು give it up ಎಂಬ ಕಾರ್ಯಕ್ರಮವನ್ನೇ ಘೋಷಿಸಿದರು. ಈ ಕರೆಗೆ ಓಗೊಟ್ಟು ದೇಶದ ಸುಮಾರು 1.4 ಕೋಟಿ ಕುಟುಂಬಗಳು ತಾವು ಪಡೆಯುತ್ತಿದ್ದ ಸಬ್ಸಿಡಿ ಬಿಟ್ಟುಕೊಟ್ಟರು. ಇದರಿಂದಾಗಿ ಇಂದು 2 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಲ್ಲಿ ಅಡುಗೆ ಗ್ಯಾಸ್‌ನಿಂದ ಆಹಾರ ಸಿದ್ದಪಡಿಸುವ ಒಂದು ಆರೋಗ್ಯಕರ ವಾತಾವರಣ ಸೃಷ್ಟಿಯಾಗಿದೆ. ಭ್ರಷ್ಟಾಚಾರ ವಿರುದ್ದ ಕೇಂದ್ರ ಸರ್ಕಾರ ಹೂಡಿರುವ ಪರಿಣಾಮಕಾರಿ ಸಮರದ ಬಗ್ಗೆ ಎಲ್ಲರಿಗೂ ತಿಳಿದಿದೆ. ಕಳೆದ 3 ವರ್ಷಗಳಲ್ಲಿ ಯಾವುದೇ ಒಂದು ಭ್ರಷ್ಟಾಚಾರದ ಪ್ರಕರಣವಾಗಲಿ – ಹಗರಣವಾಗಲಿ ಈ ಆಡಳಿತದಲ್ಲಿ ಕೇಳಿ ಬಂದಿಲ್ಲ ಎಂಬುದು ಜನತೆಯಲ್ಲಿ ಹೆಚ್ಚಿದ ವಿಶ್ವಾಸಕ್ಕೆ ಒಂದು ಕಾರಣ.

ಕೆಂಪುಕೋಟೆಯಿಂದ ಸ್ವಾತಂತ್ರ್ಯದಿನಾಚರಣೆ ದಿನದಂದು ದೇಶವನ್ನು ಉದ್ದೇಶಿಸಿ ಮಾತನಾಡುವ ಸಂದ‌ರ್ಭವಿರಬಹುದು ಅಥವಾ ಪ್ರತಿ ತಿಂಗಳ ಮನ್‌ಕಿ ಬಾತ್‌ ಇರಬಹುದು. ಈ ಎಲ್ಲಾ ಸಂದರ್ಭದಲ್ಲಿಯೂ ಸಾಮಾನ್ಯವಾಗಿ ರಾಜಕೀಯ ನಾಯಕರು ಎತ್ತಿಕೊಳ್ಳಲು ಹಿಂಜರಿಯುವ ಅಥವಾ ಉದಾಸೀನ ತೋರುವ ವಿಚಾರಗಳನ್ನು ನರೇಂದ್ರ ಮೋದಿ ಅವರು ಬಹಳ ಧೈರ್ಯದಿಂದ ಪ್ರಸ್ತಾಪಿಸಿ ಮುಂದೆ ಹೆಜ್ಜೆ ಇಟ್ಟಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಇರಬಹುದು, ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವಿರಬಹುದು. ಸರ್ಕಾರದಲ್ಲಿ ಸಿ ಮತ್ತು ಡಿ ಗ್ರೂಪ್‌ಗ್ಳಿಗೆ ನೇಮಕಾತಿ ಮಾಡಿಕೊಳ್ಳುವಾಗ ಭ್ರಷ್ಟಾಚಾರಕ್ಕೆ ಕಾರಣವಾಗಿದ್ದ ಸಂದರ್ಶನವನ್ನು ಸಂಪೂರ್ಣವಾಗಿ ತೆಗೆದು ಹಾಕುವ ನಿರ್ಧಾರವಿರಬಹುದು, ಈ ಸರ್ಕಾರಕ್ಕೆ ಇರುವ ಬದ್ಧತೆಯನ್ನು ತೋರುತ್ತದೆ. ನಮ್ಮ ಪರಿಸರ ಸ್ವಚ್ಛತೆಯಿಂದ ಇರಬೇಕು ಎಂಬ ವಿಚಾರ ಎಲ್ಲರ ಮನಸ್ಸಿನಲ್ಲಿ ಪ್ರವೇಶವಾಗಿದೆ. ನಮ್ಮ ಗ್ರಾಮ, ನಮ್ಮ ಊರು ಬಯಲು ಬಹಿರ್ದಶೆಯಿಂದ ಮುಕ್ತವಾಗಬೇಕು ಎಂಬ ಮನದಿಚ್ಚೆ ಬಲವಾಗಿ ಬೇರೂರಿದೆ. ನಮ್ಮ ರಾಜ್ಯದ ಮಲ್ಲಮ್ಮ ಎಂಬ ಬಾಲಕಿ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದು ಎಲ್ಲರಿಗೂ ನೆನಪಿದೆ. 

ಪಂಡಿತ್‌ ದೀನದಯಾಳ್‌ ಉಪಾಧ್ಯಾಯರವರ ವಿಚಾರಗಳು ಮಾರ್ಗದರ್ಶಕ. ಅವರು ಅಂದು ನೀಡಿದ್ದ ಅಂತ್ಯೋದಯ ಕಲ್ಪನೆ ಇಂದು ಸಾಕಾರಗೊಳ್ಳುತ್ತಿದೆ. ಇದುವರೆವಿಗೆ ನಮ್ಮ ದೇಶದಲ್ಲಿ ಕೋಟ್ಯಾಂತರ ಕುಟುಂಬಗಳು ಬ್ಯಾಂಕ್‌ಗಳ ಒಳಗೆ ಪ್ರವೇಶ ಮಾಡಲು ಸಾಧ್ಯವೇ ಇರಲಿಲ್ಲ. ಬ್ಯಾಂಕಿಂಗ್‌ ವ್ಯವಸ್ಥೆಗೆ ಅವರು ಸಂಪೂರ್ಣವಾಗಿ ಅಪರಿಚಿತರಾಗಿದ್ದರು. ಅಂತಹ ಕುಟುಂಬಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಂದು ಪೈಸೆ ಸಹ ಆರಂಭ ಠೇವಣಿ ನೀಡದೇ ಖಾತೆ ಪ್ರಾರಂಭಿಸಲು ಅವಕಾಶ ನೀಡಿದ ಜನ – ಧ‌ನ್‌ ಯೋಜನೆಯಿಂದ ಇಂದು ಸುಮಾರು 26.68 ಕೋಟಿ ಕುಟುಂಬಗಳಿಗೆ ಬ್ಯಾಂಕ್‌ ಖಾತೆ ಲಭ್ಯವಾಗಿ ಆ ಬಡಜನತೆ ಸಹ ಆತ್ಮ ವಿಶ್ವಾಸದಿಂದ ಬ್ಯಾಂಕ್‌ ಒಳಗೆ ಪ್ರವೇಶ ಮಾಡುವಂತಾಗಿದೆ. ಇದರ ಇನ್ನೊಂದು ಫ‌ಲಶೃತಿ ಎಂದರೆ ನೇರವಾಗಿ ನಾಗರೀಕರ ಬ್ಯಾಂಕ್‌ ಖಾತೆಗೆ ವಿವಿಧ ಯೋಜನೆಗಳ ಹಣವನ್ನು ಸಂದಾಯ ಮಾಡುವುದು. 

ಎಲ್ಲರಿಗೂ ತಿಳಿದಿದೆ, ವಿವಿಧ ಯೋಜನೆಗಳ ಫ‌ಲಾನು­ಭವಿಗಳಿಗೆ ಹಣ ತಲುಪುವುದರಲ್ಲಿ ಬಹಳಷ್ಟು ಭಾಗ ಸೋರಿಕೆಯಾಗುತ್ತಿತ್ತು. ರಾಜೀವ್‌ಗಾಂಧಿಯವರ ‘ಆ ನೂರು ರೂಪಾಯಿಯಲ್ಲಿ 15 ರೂಪಾಯಿ ಮಾತ್ರ ನಿರ್ದಿಷ್ಟ ಉದ್ದೇಶಕ್ಕೆ ತಲುಪುತ್ತದೆ. ಇನ್ನು ಉಳಿದ 85 ರೂಪಾಯಿ ವಿವಿಧ ರೀತಿಯಿಂದ ಸೋರಿಕೆಯಾಗುತ್ತದೆ’ ಎಂಬ ಹೇಳಿಕೆ ಅತ್ಯಂತ ಪ್ರಸಿದ್ಧಿ ಪಡೆದಿತ್ತು. ಆ ಪಿಡುಗಿಗೆ ಇಂದು ಉತ್ತರವಾಗಿ ಬಂದಿದೆ ಜನ – ಧನ ಖಾತೆಗಳಿಗೆ ನೇರ ಹಣ ಪಾವತಿ ಕಾರ್ಯಕ್ರಮ. ಸುಮಾರು 31 ಕೋಟಿ ಕುಟುಂಬಗಳು 59 ಯೋಜನೆಗಳ ಫ‌ಲವನ್ನು ನೇರವಾಗಿ ತಮ್ಮ ಬ್ಯಾಂಕ್‌ ಖಾತೆಗಳಿಂದ ಪಡೆಯುತ್ತಿದ್ದಾರೆ.

ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಅಂಬಾನಿ, ಬಿರ್ಲಾ, ವಿಜಯ್‌ ಮಲ್ಯರಂತಹ ಉದ್ಯಮಿಗಳಿಗೆ ಮಾತ್ರ ಎಂಬ ಹತಾಶ ಭಾವನೆ ಎಲ್ಲರ ಮನದಲ್ಲಿ ಮೂಡಿದ್ದಾಗ ಮೋದಿರವರು ಜಾರಿಗೆ ತಂದ ಮುದ್ರಾ ಯೋಜನೆ ಇಂದು ಸಣ್ಣಪುಟ್ಟ ವ್ಯಾಪಾರ ಮಾಡುವ ಕುಟುಂಬಗಳಿಂದ ಹಿಡಿದು ಸಣ್ಣ ಕೈಗಾರಿಕೆ ನಡೆಸುವವರಿಗೂ ಯಾವುದೇ ಆಧಾರವಿಲ್ಲದೇ ಸಾಲ ಪಡೆಯುವಂತಾಗಿದೆ. ಮುದ್ರಾ ಯೋಜನೆಯಿಂದ ದೇಶದ ಸುಮಾರು 7.54 ಕೋಟಿ ಸಣ್ಣ ಉದ್ಯಮಿಗಳು ಪಡೆದಿರುವ ಸಾಲದ ಮೊತ್ತ 3.17 ಲಕ್ಷ ಕೋಟಿರೂಗಳು. ನಮ್ಮ ದೇಶದಲ್ಲಿ ವಿದ್ಯುತ್‌ ಉತ್ಪಾದ‌ನೆ – ವಿದ್ಯುತ್‌ ಸರಬರಾಜು ಎಂಬುದು ಹಾಸ್ಯಾಸ್ಪದ ಮಟ್ಟದಲ್ಲಿ ಇದ್ದವು. ಇಂದು ಭಾರತ ವಿದ್ಯುತ್‌ ಉತ್ಪಾದನೆಯಲ್ಲಿ ತನ್ನ ಸಾಮರ್ಥ್ಯ ತೋರಿದೆ. 18453 ವಿದ್ಯುತ್‌ ಸಂಪರ್ಕ ರಹಿತ ಗ್ರಾಮಗಳ ಪೈಕಿ ಇಂದು 13,000 ಕ್ಕೂ ಹೆಚ್ಚು ಗ್ರಾಮಗಳ ವಿದ್ಯುದ್ದೀಕರಣವಾಗಿದೆ.

ಸ್ವತಃ ಒಂದು ದಿನದ ರಜೆ ತೆಗೆದುಕೊಳ್ಳದೇ ಮೋಜಿಗಾಗಿ -ವಿಶ್ರಾಂತಿಗಾಗಿ ಯಾವುದೇ ಪ್ರವಾಸಿ ತಾಣಗಳಿಗೆ ಹೋಗದೇ ಪ್ರತಿದಿನ 16 ಗಂಟೆ ಕೆಲಸಮಾಡುತ್ತಿರುವ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬ ಆಡಳಿತ ನಡೆಸುವವರಿಗೆ ಒಂದು ಮಾದರಿಯನ್ನೇ ತಂದಿಟ್ಟಿದ್ದಾರೆ. ಭಾರತದ ಸ್ಥಾನವನ್ನು ಪ್ರಪಂಚದಲ್ಲಿ ಎತ್ತರಕ್ಕೆ ಕರೆದೊಯ್ಯಲು ಅವರು ಮಾಡಿದ ವಿದೇಶಯಾತ್ರೆಗಳು ನಮ್ಮ ತಥಾಗತಿತ ವಿರೋಧಿಗಳಿಂದ ಟೀಕೆಗೊಳಗಾದರೂ ಆ ಪ್ರವಾಸಗಳ ಮಹತ್ವ ಎಲ್ಲರಿಗೂ ಅರ್ಥವಾಗಿದೆ. ಇಂದು ಪ್ರಪಂಚದಲ್ಲಿ ಉಗ್ರಗಾಮಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಭಾರತದ್ದೇ ದೊಡ್ಡ ಧ್ವನಿ. ಪರಿಸರ ಸಂರಕ್ಷಣೆಗಾಗಿ ರಚಿಸಲ್ಪಟ್ಟಿರುವ ನೀಲಿ ನಕ್ಷೆಯಲ್ಲಿ ಭಾರತದ್ದೇ ದೊಡ್ಡ ಪಾತ್ರ. ಇಂದು ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇಂದು ಭಾರತದ ಯೋಗವನ್ನು ಪ್ರಪಂಚ ಒಪ್ಪಿಕೊಂಡು ಪ್ರತಿವರ್ಷ ಜೂನ್‌ 21 ವಿಶ್ವಯೋಗ ದಿನವಾಗಿ ಆಚರಿಸಲ್ಪಡುತ್ತಿದೆ. ವಿಶ್ವದ 192 ರಾಷ್ಟ್ರಗಳಲ್ಲಿ ಯೋಗದಿನದ ಆಚರಣೆ ಸಂಭ್ರಮದಿಂದ ಸಡಗರದಿಂದ ನಡೆಯುತ್ತಿದೆ.

ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರದ 3 ಕಾರ್ಯಗಳು ಅತ್ಯಂತ ಪರಿಣಾಮಕಾರಿಯಾಗಿ ದೇಶದ ಜನ ಮಾನಸದಲ್ಲಿ ನೆಲೆಸಿದೆ. ನೆರೆರಾಷ್ಟ್ರವಾದ-ಭಾರತಕ್ಕೆ ಹೊರೆಯಾಗಿರುವ ಪಾಕಿಸ್ತಾನದ ನೆಲದಿಂದ ಭಾರತದ ವಿರುದ್ಧ ಚಟುವಟಿಕೆ ನಡೆಸುತ್ತಿದ್ದ ಉಗ್ರಗಾಮಿಗಳ ನೆಲೆಗಳನ್ನು ಸಂಪೂರ್ಣ ನಾಶ ಮಾಡಿದ ಅತ್ಯಂತ ಕರಾರುವಕ್ಕಾದ ಸರ್ಜಿಕಲ್‌ ಸ್ಟ್ರೈಕ್‌ ಇಡೀ ವಿಶ್ವವೇ ತಲೆದೂಗುವಂತೆ ಮಾಡಿದ ಕಾರ್ಯ. ತದನಂತರ ಕಳೆದ ನವೆಂಬರ್‌ 8ರಂದು ಕಪ್ಪುಹಣದ ನಿಯಂತ್ರಣಕ್ಕಾಗಿ ಉಗ್ರಗಾಮಿಗಳ ಚಟುವಟಿಕೆಗಳಿಗೆ ಬಲವಾದ ಪೆಟ್ಟು ನೀಡಲಿಕ್ಕಾಗಿ ಘೋಷಣೆಯಾದ ನೋಟು ಅಮಾನ್ಯಕರಣ. ಅದರ ವಿರುದ್ಧ ಜನರನ್ನು ಎತ್ತಿಕಟ್ಟಲು ಪ್ರತಿಪಕ್ಷಗಳು ಬಹಳ ಪ್ರಯತ್ನ ಪಟ್ಟರೂ ಈ ದೇಶದ ಪ್ರತಿಯೊಬ್ಬ ನಾಗರಿಕ ಸರ್ಕಾರದ ಮಹದುದ್ದೇಶವನ್ನು ಮನಗಂಡು ನೋಟು ಅಮಾನ್ಯಕರಣಕ್ಕೆ ತನ್ನ ಸಂಪೂರ್ಣ ಬೆಂಬಲ ನೀಡಿದ್ದು ಮತ್ತೂಂದು ಮಹತ್ವದ ಸಂಗತಿ. ಮೂರನೇಯದಾಗಿ ಇಡೀ ಭಾರತದಾದ್ಯಂತ ಒಂದೇ ತೆರಿಗೆ ಎಂಬ ಸೂತ್ರದಂತೆ ಇನ್ನು ಮುಂದೆ ಜಾರಿಗೆ ಬರುವ ಎಖಖ. ಈ ಮೂರು ಕಾರ್ಯಗಳ ಯಶಸ್ಸಿಗೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ತೋರಿಸಿದ ಧೃಡಸಂಕಲ್ಪ ಮತ್ತು ಅಪಾರ ಅಧ್ಯಯನ ಮಾಡಿ ಜಾರಿಗೆ ತರುವ ಕಾರ್ಯವೈಖರಿ.

ಬಹಳ ಹಿಂದೆ ಗರೀಬಿ ಹಠಾವೋ ಎಂಬುದು ಕೇವಲ ಹುಸಿ ಘೋಷಣೆಯಾಗಿಯೇ ಉಳಿದದ್ದು, ಬಿಟ್ಟಿದ್ದು ಹಿಂದಿನ ಇತಿಹಾಸ. ಇಂದು ನಮ್ಮ ಕೇಂದ್ರ ಸರ್ಕಾರದ ಬಲವಾದ ನಂಬಿಕೆ ಗರೀಬರ ಕಲ್ಯಾಣ. ಪ್ರತಿ ಕಾರ್ಯಕ್ರಮದ ಹಿಂದೆ ಆ ಕಟ್ಟಕಡೆಯ ಬಡವನ ಕಲ್ಯಾಣವಾಗುವುದೇ ಗುರಿ. ಈ ದಿಶೆಯಲ್ಲಿ ಇಂದು ಯಶಸ್ವಿಯಾಗಿ ಜಾರಿಯಲ್ಲಿರುವ ಹಲವು ಕಾರ್ಯಕ್ರಮಗಳು ಈ ಸರ್ಕಾರವನ್ನು ನಿಜವಾದ ಬಡವರ ಬಂಧುವನ್ನಾಗಿಸಿದೆ. ದೇಶದ ಒಬ್ಬೊಬ್ಬ ನಾಗರಿಕನಿಗೂ ಅನಿಸುತ್ತಿದೆ ಇದು ನನ್ನ ಸರ್ಕಾರವೆಂದು. ಇಲ್ಲಿರುವುದು ನನ್ನ ಹಿತವನ್ನು ಕಾಪಾಡಬಲ್ಲ ಸರ್ಕಾರವೆಂದು. ಆ ದಿಶೆಯಲ್ಲಿ 3ನೇ ವರ್ಷದ ಆಚರಣೆ ಮತ್ತೂಮ್ಮೆ ಈ ಬಡವರ ಕಲ್ಯಾಣಕ್ಕಾಗಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಎಲ್ಲರ ಹಿತಕ್ಕಾಗಿ ಕೆಲಸಮಾಡುವ ನಮ್ಮ ಇಚ್ಚೆಯನ್ನು ಮತ್ತೂಮ್ಮೆ ಪ್ರತಿಪಾದಿಸುತ್ತಾ ಮುಂದೆ ಹೆಜ್ಜೆ ಇಡುವ ಕ್ಷಣ. 

– ಎಸ್‌. ಸುರೇಶ್‌ಕುಮಾರ್‌ ; ಮಾಜಿ ಸಚಿವರು, ಶಾಸಕ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.