ಗ್ರಾಹಕರಿಗೆ ಇನ್ನೂ ತಟ್ಟಿಲ್ಲ ಕರಭಾರ


Team Udayavani, Jul 4, 2017, 11:12 AM IST

ANkana-1.jpg

ಬಳ್ಳಾರಿ: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗಿ ಮೂರು ದಿನ
ಕಳೆದಿದ್ದು, ಜನಜೀವನದ ಅವಿಭಾಜ್ಯ ಅಂಗಗಳಾದ ಹೋಟೆಲ್‌, ಪೆಟ್ರೋಲ್‌ -ಡೀಸೆಲ್‌ ಹಾಗೂ ಮೊಬೈಲ್‌ ಶಾಪ್‌
ಗಳಲ್ಲಿ ಬೆಲೆ ಹೆಚ್ಚಳವಾಗದೇ ಗ್ರಾಹಕರು ನಿರಾಳವಾಗಿದ್ದಾರೆ.

ನಗರದ ಹೋಟೆಲ್‌ಗ‌ಳಲ್ಲಿ ಎಂದಿನಂತೆ ವ್ಯಾಪಾರ ನಡೆದಿದ್ದು, ಯಾವುದೇ ಎಸಿ ರಹಿತ ಹೋಟೆಲ್‌ಗ‌ಳಲ್ಲಿ ದಿನ ನಿತ್ಯದ
ಉಪಾಹಾರ, ಕಾಫಿ, ಟೀ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದ ಕೇಂದ್ರ ಭಾಗದಲ್ಲಿರುವ ಹೋಟೆಲ್‌ ಮಯೂರಾದಲ್ಲಿ
ಯಾವುದೇ ತಿಂಡಿ-ತಿನಿಸುಗಳ ಬೆಲೆಯಲ್ಲಿ ಹೆಚ್ಚಳವಾಗದೇ ಇರುವುದು ಗ್ರಾಹಕರಲ್ಲಿ ಒಂದಿಷ್ಟು ಅಚ್ಚರಿ ತಂದಿದ್ದಂತೂ ನಿಜವಾಗಿತ್ತು. ಜಿಎಸ್‌ಟಿ ಕುರಿತು ಮಾತನಾಡಿದ ಹೋಟೆಲ್‌ ಮಾಲೀಕ ಮಧುಸೂದನ್‌, ಹೋಟೆಲ್‌ ಉದ್ಯಮದ ಮೇಲೆ ಜಿಎಸ್‌ಟಿ ಪರಿಣಾಮ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ವಾರ್ಷಿಕ 75 ಲಕ್ಷ ರೂ. ಗಳಿಗಿಂತಲೂ ಹೆಚ್ಚು ವಹಿವಾಟು
ಮಾಡುವ ಹೋಟೆಲ್‌ಗ‌ಳಿಗೆ ಶೇ.12ರಷ್ಟು ಜಿಎಸ್‌ಟಿ ವಿ ಧಿಸಲಾಗುತ್ತಿದೆ. ಎಸಿ ಇರುವ ಹೋಟೆಲ್‌ಗ‌ಳಿಗೆ ತೆರಿಗೆ ಶೇ.18ರಷ್ಟಾಗಲಿದೆ ಎಂದು ತಿಳಿಸಿದರು.

ಉತ್ತಮ ಹೋಟೆಲ್‌ಗ‌ಳು ಖರೀದಿಸುವ ಅಕ್ಕಿ, ಬೇಳೆ ಮುಂತಾದ ದಿನಸಿಗಳಿಗೆ ಜಿಎಸ್‌ಟಿಯಲ್ಲಿ ವಿನಾಯ್ತಿ ನೀಡಲಾಗಿದೆ. ಆದರೆ, ಹೋಟೆಲ್ಲಿನ ವಾರ್ಷಿಕ ವಹಿವಾಟು ಹೆಚ್ಚಿದ್ದಲ್ಲಿ ಜಿಎಸ್‌ಟಿ ಹೊರೆಯೂ ಹೆಚ್ಚಾಗಲಿದೆ. ಉತ್ತಮ ಹೋಟೆಲ್‌ಗ‌ಳಲ್ಲಿ ಒಮ್ಮೊಮ್ಮೆ ತಯಾರಿಸಿದ ಆಹಾರ ಮಾರಾಟವಾಗದೇ ಪೋಲಾಗಬಹುದು ಇದು ಹೋಟೆಲ್‌ ಮಾಲೀಕರಿಗೆ ಹೊರೆಯಾಗಲಿದೆ. ಆದರೆ, ರಸ್ತೆ ಬದಿಯ ಹೋಟೆಲ್‌ ಗಳಿಗೆ ಈ ಸಮಸ್ಯೆ ಇರುವುದಿಲ್ಲ. ಒಂದು ವೇಳೆ 75 ಲಕ್ಷ ರೂಗಳಿಗೂ ಅಧಿ ಕ ವಹಿವಾಟು ನಡೆಸುವ ಹೋಟೆಲ್‌ಗ‌ಳಿಗೆ ಜಿಎಸ್‌ಟಿ ದರದಲ್ಲಿ ಸಡಿಲಿಕೆ ಆಗದಿದ್ದಲ್ಲಿ
ಅನಿವಾರ್ಯವಾಗಿ ತಿಂಡಿ-ತಿನಿಸುಗಳ ಬೆಲೆಯೂ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಹೋಟೆಲ್‌ ಉದ್ಯಮಕ್ಕೆ ಜಿಎಸ್‌ಟಿ
ವಿ ಧಿಸುವ ಕುರಿತಂತೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಅಷ್ಟರಲ್ಲಿ ಈ ಹಿಂದೆ ಇದ್ದ ಶೇ.4ರ ವ್ಯಾಟ್‌ಗೆ ಶೇ.1
ಜಿಎಸ್‌ಟಿ ಸೇರಿಸಿ ಹೋಟೆಲ್‌ ಉದ್ಯಮಕ್ಕೆ ಶೇ.5ರಷ್ಟು ಜಿಎಸ್‌ಟಿ ವಿ ಧಿಸಿದರೆ ಶೇ.1ರ ತೆರಿಗೆ ಹೆಚ್ಚಳ ಸರಿದೂಗಿಸಬಹುದು. ಉಳಿದಂತೆ ವಸತಿ ಗೃಹದ ಬಾಡಿಗೆ 1000 ರೂ. ಗಿಂತಲೂ ಕಡಿಮೆ ಇದ್ದರೆ ಯಾವುದೇ
ತೆರಿಗೆ ಇಲ್ಲ. ಆದರೆ, ಬಾಡಿಗೆ 1000 ರೂ. ಮೀರಿದರೆ ಶೇ. 12ರಷ್ಟು ಜಿಎಸ್‌ಟಿಯನ್ನು ಗ್ರಾಹಕರು ಪಾವತಿಸಬೇಕು ಎಂದು ಅವರು ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ: ಜಿಎಸ್‌ಟಿ ಜಾರಿಯಾದ ನಂತರ ಪೆಟ್ರೋಲ್‌ ಹಾಗೂ ಡೀಸೆ‌ಲ್‌ಗ‌ಳ ಬೆಲೆಯಲ್ಲಿ ಇಳಿಕೆಯಾಗಿದೆ. ನಗರದ ಭಾರತ್‌ ಪೆಟ್ರೋಲಿಯಂ ಉತ್ಪನ್ನಗಳ ವಿತರಕರಾದ ಕೇಶವರೆಡ್ಡಿ ಪೆಟ್ರೋಲ್‌ ಬಂಕ್‌ನಲ್ಲಿ ಜೂನ್‌ 30ರಂದು ಸಾಮಾನ್ಯ ಪೆಟ್ರೋಲ್‌ಗೆ 69.02 ರೂ ಬೆಲೆ ಇತ್ತು. ಜು. 3ರಂದು ಈ ಬೆಲೆ 65.63ಕ್ಕೆ ಇಳಿದಿತ್ತು. ಹೈಸ್ಪೀಡ್‌ ಪೆಟ್ರೋಲ್‌ ಬೆಲೆ ಜೂ. 30ರಂದು 71.84 ರೂ ಇತ್ತು, ಜು. 3ರಂದು ಈ ಬೆಲೆ 68.33 ರೂ.ಗಳಿಗೆ ಇಳಿದಿತ್ತು. ಜೂ.30ರಂದು ಡೀಸೆಲ್‌ ಬೆಲೆ 58.30 ರೂಗಳಷ್ಟಿತ್ತು. ಜು.3ರಂದು ಡೀಸೆಲ್‌ ಬೆಲೆ 55.61 ರೂ.ಗಳಿಗೆ ಇಳಿದಿತ್ತು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆ ಆಗಿದ್ದರಿಂದ ಗ್ರಾಹಕರು ಕೊಂಚ ಖುಷಿಯಲ್ಲಿದ್ದರು.

ಮೊಬೈಲ್‌ ಬೆಲೆಗಳಲ್ಲಿ ವ್ಯತ್ಯಾಸವಿಲ್ಲ;
ಜಿಎಸ್‌ಟಿ ಜಾರಿಯಾದಾಗಿನಿಂದ ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್‌ ಬೆಲೆಯಲ್ಲಿ ಬದಲಾವಣೆಗಳಾಗಿಲ್ಲ. ನಗರದ ಎಸ್‌ಜಿಕೆ ಮೊಬೈಲ್‌ ಶಾಫಿಯಲ್ಲಿ ವಿವೋ, ಒಪೊ ಬ್ರಾಂಡ್‌ಗಳ ಸ್ಮಾರ್ಟ್ ಫೋನ್ಗಳನ್ನು 500 ರೂ. ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಅಂಗಡಿ
ಮಾಲೀಕ ಎಚ್‌.ಕೆ.ಬಸವರೆಡ್ಡಿ, ಆ್ಯಪಲ್‌ ಕಂಪನಿಯ ಮೊಬೈಲ್‌ ಫೋನ್‌ಗಳಿಗೆ ಶೇ. 3.5ರಿಂದ ಶೇ. 4ರವರೆಗೆ ರಿಯಾಯ್ತಿ ಘೋಷಿಸಲಾಗಿದೆ. ಆದರೆ, ಬೇರೆ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಬದಲಾವಣೆಗಳಾಗಿಲ್ಲ. ಆದರೆ, ಜಿಎಸ್‌ಟಿ ಜಾರಿಯಾಗುವ ಮುನ್ನ ನಮ್ಮ ಗ್ರಾಹಕರಿಗೆ ನಮ್ಮ ಲಾಭಾಂಶದಲ್ಲಿ ಕಡಿಮೆ ಮಾಡಿ 500 ರೂಗಳ ವರೆಗೆ ರಿಯಾಯ್ತಿ ನೀಡುತ್ತಿದ್ದೇವೆ. ಆದರೆ, ಮೊಬೈಲ್‌ ಕರೆನ್ಸಿ ರಿಚಾರ್ಜ್‌ ದರಗಳಲ್ಲಿ ಬದಲಾವಣೆಗಳಾಗದಿದ್ದರೂ
ಕರೆಗಳ ದರದಲ್ಲಿ ಕೊಂಚ ಹೆಚ್ಚಳವಾಗಿದೆ ಎಂದರು. 

ಜಿಎಸ್‌ಟಿ ತೆರಿಗೆ ಪದ್ಧತಿ ಉತ್ತಮವಾಗಿದೆ. ಮುಂಚಿನಂತೆ ತೆರಿಗೆ ವರದಿ ಸಲ್ಲಿಕೆಯಲ್ಲಿದ್ದಂತ ಗೋಜಲುಗಳು ಇಲ್ಲವಾಗಿವೆ.
ಇದೊಂದು ಸರಳೀಕೃತ ತೆರಿಗೆ ಪದ್ಧತಿಯಾಗಿದ್ದು ಹೋಟೆಲ್‌ ಉಪಾಹಾರಗಳು ಗ್ರಾಹಕರಿಗೆ ಹೊರೆಯಾಗದಿರಲು ಈಗ ವಿಧಿಸಿರುವ ಶೇ. 12ರ ಜಿಎಸ್‌ಟಿ ಶೇ.5ಕ್ಕೆ ಇಳಿಕೆಯಾಗಬೇಕು.  ಎಚ್‌.ಎಸ್‌.ಮಧುಸೂದನ್‌, ಮಾಲೀಕರು, ಮಯೂರಾ
ಹೋಟೆಲ್‌

ಎಂ.ಮುರಳಿಕೃಷ್ಣ
 

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.